ಕಿಚ್ಚ ಸುದೀಪ್ ಮಗಳ ಧ್ವನಿಗೆ ಮರುಳಾದ ಫ್ಯಾನ್ಸ್‌ : ʼಸೋ ಕ್ಯೂಟ್‌ ವಾಯ್ಸ್‌ ಸಾನ್ವಿʼ..!

ನಟನೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿಯಾಗಿ ಹೆಗ್ಗಳಿಕೆ ಗಳಿಸಿರುವ ಕಿಚ್ಚ ಸುದೀಪ್‌ ರೀತಿ ಅವರ ಮಗಳು ಕೂಡ ಮಲ್ಟಿ ಟ್ಯಾಲೆಂಟೆಡ್. ಹೌದು.. ಸಾನ್ವಿ ವಾಯ್ಸ್‌ ಮಧುರ. ತುಂಬಾ ಸೋಗಸಾಗಿ ಹಾಡುವ ಕಿಚ್ಚನ ಮಗಳ ಧ್ವನಿಗೆ ಅಭಿಮಾನಿಗಳೂ ಇದ್ದಾರೆ. ಸದ್ಯ ಸಾನ್ವಿ ಅಪ್ಪನ ಸಿನಿಮಾ ವಿಕ್ರಾಂತ್‌ ರೋಣದ ʼತಣ್ಣನೆ ಬೀಸೋ ಗಾಳಿʼ ಹಾಡನ್ನು ಹಾಡಿ ನೆಟ್ಟಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.

Written by - Krishna N K | Last Updated : Oct 1, 2022, 04:00 PM IST
  • ಕಿಚ್ಚ ಸುದೀಪ್‌ ರೀತಿ ಅವರ ಮಗಳು ಕೂಡ ಮಲ್ಟಿ ಟ್ಯಾಲೆಂಟೆಡ್
  • ಸಾನ್ವಿ ವಿಕ್ರಾಂತ್‌ ರೋಣದ ʼತಣ್ಣನೆ ಬೀಸೋ ಗಾಳಿʼ ಹಾಡಿಗೆ ನೆಟ್ಟಿಗರು ಫಿದಾ
  • ವಿಕ್ರಾಂತ್‌ ರೋಣ ಸಿನಿಮಾದ ವಿಜಯ್‌ ಪ್ರಕಾಶ ಹಾಡಿರುವ ತಣ್ಣನೆ ಬೀಸೋ ಗಾಳಿ ಹಾಡು
ಕಿಚ್ಚ ಸುದೀಪ್ ಮಗಳ ಧ್ವನಿಗೆ ಮರುಳಾದ ಫ್ಯಾನ್ಸ್‌ : ʼಸೋ ಕ್ಯೂಟ್‌ ವಾಯ್ಸ್‌ ಸಾನ್ವಿʼ..! title=

ಬೆಂಗಳೂರು : ನಟನೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿಯಾಗಿ ಹೆಗ್ಗಳಿಕೆ ಗಳಿಸಿರುವ ಕಿಚ್ಚ ಸುದೀಪ್‌ ರೀತಿ ಅವರ ಮಗಳು ಕೂಡ ಮಲ್ಟಿ ಟ್ಯಾಲೆಂಟೆಡ್. ಹೌದು.. ಸಾನ್ವಿ ವಾಯ್ಸ್‌ ಮಧುರ. ತುಂಬಾ ಸೋಗಸಾಗಿ ಹಾಡುವ ಕಿಚ್ಚನ ಮಗಳ ಧ್ವನಿಗೆ ಅಭಿಮಾನಿಗಳೂ ಇದ್ದಾರೆ. ಸದ್ಯ ಸಾನ್ವಿ ಅಪ್ಪನ ಸಿನಿಮಾ ವಿಕ್ರಾಂತ್‌ ರೋಣದ ʼತಣ್ಣನೆ ಬೀಸೋ ಗಾಳಿʼ ಹಾಡನ್ನು ಹಾಡಿ ನೆಟ್ಟಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.

ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ತೆರೆಯ ಮೇಲೆ ಅಬ್ಬರಿಸಿ ಸದ್ಯ ಓಟಿಟಿಯಲ್ಲಿ ಹಿಸ್ಟರಿ ಕ್ರಿಯೇಟ್‌ ಮಾಡುತ್ತಿದೆ. ವಿಕ್ರಾಂತ್‌ ರೋಣ ಸಿನಿಮಾದ ವಿಜಯ್‌ ಪ್ರಕಾಶ ಹಾಡಿರುವ ತಣ್ಣನೆ ಬೀಸೋ ಗಾಳಿ ಹಾಡನ್ನು ಸಾನ್ವಿ ಹಾಡಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾನ್ವಿ ಹಾಡಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕ್ಯೂ ವಾಯ್ಸ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. 

ಇದನ್ನೂ ಓದಿ: ಸಲಾರ್ ಸಿನಿಮಾದಲ್ಲಿ ಚಿಕ್ಕಣ್ಣ : ಪ್ರಭಾಸ್‌ ಜೊತೆಗಿನ ಫೋಟೋ ರಹಸ್ಯ ಬಯಲು..!

ಇನ್ನು ನಟ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ಮೂಡಿಬಂದ ವಿಕ್ರಾಂತ್‌ ರೋಣ ಜೀ5 ಒಟಿಟಿಯಲ್ಲಿ ಸಂಚಲನ ಸೃಷ್ಟಿಸ್ತಿದೆ. ಮರ್ಡರ್ ಮಿಸ್ಟ್ರೀ ಜಾನರ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಬಿಡುಗಡೆಯಾದ ಒಂದು ನಿಮಿಷದಲ್ಲಿ 1000ಕ್ಕೂ ಹೆಚ್ಚು ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ. ಅಲ್ಲದೇ ಕಳೆದ ಮೂರು ವಾರಗಳಿಂದ ಜೀ5 ಒಟಿಟಿಯಲ್ಲಿ ಟಾಪ್ 3 ಸ್ಥಾನದಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News