ಇದಕ್ಕಾಗಿ 24 ವರ್ಷ ಕಾದಿದ್ದರಂತೆ ರಿಷಬ್ ಶೆಟ್ಟಿ !ಕೊನೆಗೂ ಈ ಆಸೆ ನೆರವೇರಿದ ಸಂಭ್ರಮ !ಭೂಮಿ ಮೇಲೆ ನಾನೇ ಅದೃಷ್ಟವಂತ ಎಂದ ಡಿವೈನ್ ಸ್ಟಾರ್

ತನ್ನ ೨೪ ವರ್ಷಗಳ ಆಸೆ ಈಡೇರುವ ಬಗ್ಗೆ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ನಾನೇ ಅದೃಷ್ಟವಂತ ಎಂದು ಕೂಡಾ ಹೇಳಿಕೊಂಡಿದ್ದಾರೆ. 

Written by - Ranjitha R K | Last Updated : Aug 8, 2024, 12:25 PM IST
  • ಭಾರೀ ಸಂಚಲನ ಮೂಡಿಸಿದ್ದ ಕಾಂತಾರ
  • ೨೪ ವರ್ಷಗಳ ನಿರೀಕ್ಷೆ ಕೊನೆಯಾಗಿರುವ ಬಗ್ಗೆ ಸಂತಸ
  • ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್
ಇದಕ್ಕಾಗಿ 24 ವರ್ಷ ಕಾದಿದ್ದರಂತೆ ರಿಷಬ್ ಶೆಟ್ಟಿ !ಕೊನೆಗೂ ಈ ಆಸೆ ನೆರವೇರಿದ ಸಂಭ್ರಮ !ಭೂಮಿ ಮೇಲೆ ನಾನೇ ಅದೃಷ್ಟವಂತ ಎಂದ ಡಿವೈನ್ ಸ್ಟಾರ್  title=

ಬೆಂಗಳೂರು : 2022 ರಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ 'ಕಾಂತಾರ' ಚಿತ್ರ ಇಡೀ ವಿಶ್ವದಲ್ಲೇ ಭಾರೀ ಸಂಚಲನ ಮೂಡಿಸಿತ್ತು.ಈ ಚಿತ್ರದ ದೊಡ್ಡ ಮಟ್ಟಿನ ಯಶಸ್ಸು ಪಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.ಇದೀಗ ರಿಶಬ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ೨೪ ವರ್ಷಗಳ ನಿರೀಕ್ಷೆ ಕೊನೆಯಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.೨೪ ವರ್ಷಗಳಿಂದ ಇದಕ್ಕಾಗಿ ಕಾಯುತ್ತಿದ್ದೆ.ಕೊನೆಗೂ ನನ್ನ ಕಾಯುವಿಕೆ ಕೊನೆಯಾಗಿದೆ ಎಂದು ಹೇಳಿದ್ದಾರೆ.ನಾನೇ ಈ ಭೂಮಿಯ ಮೇಲಿನ ಅದೃಷ್ಟವಂತ ಎಂದು ಕೂಡಾ ಸಂಭ್ರಮಿಸಿಕೊಂಡಿದ್ದಾರೆ.  

24 ವರ್ಷಗಳ ನಿರೀಕ್ಷೆ : 
ಇತ್ತೀಚೆಗೆ ರಿಷಬ್ ಶೆಟ್ಟಿ ಚಿಯಾನ್ ವಿಕ್ರಮ್ ಅವರನ್ನು ಭೇಟಿಯಾಗಿದ್ದಾರೆ.ಇಬ್ಬರೂ ಒಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದಾರೆ.ಈ ಭೇಟಿಯ ಫೋಟೋ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ಇದೀಗ ತಮ್ಮಿಬ್ಬರ ಭೇಟಿ ಬಗ್ಗೆ ರಿಷಬ್ ಮಾತನಾಡಿದ್ದಾರೆ.ಚಿಯಾನ್ ವಿಕ್ರಮ್ ಅವರನ್ನು ಭೇಟಿಯಾಗಲು 24 ವರ್ಷಗಳಿಂದ ಕಾಯುತ್ತಿದ್ದೇನೆ.ಇವರೇ ನನಗೆ ಸ್ಪೂರ್ತಿ.ವಿಕ್ರಂ ನನ್ನು ಭೇಟಿಯಾದ ಬಳಿಕ ನಾನೇ ಈ ಭೂಮಿ ಮೇಲಿನ ಅದೃಷ್ಟವಂತ ಎನ್ನುವ ಹಾಗೆ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ : ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಅಬ್ಬರಿಸಲು ಮುಂದಾದ ʻಮಗಧೀರʼ ವಿಲನ್‌..'ಅಹೋ ವಿಕ್ರಮಾರ್ಕ' ಸಿನಿಮಾದ ಸಾಂಗ್‌ ರಿಲೀಸ್‌..!

'ಕಾಂತಾರ ಪಾರ್ಟ್ 1'ರಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ : 
ರಿಷಬ್ ಶೆಟ್ಟಿ ಇದೀಗ ಕಾಂತಾರ ಪಾರ್ಟ್ ೧ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ನಿರ್ದೇಶನವನ್ನೂ ಮಾಡಿದ್ದಾರೆ. 16 ಕೋಟಿ ಬಜೆಟ್ ನಲ್ಲಿ ತಯಾರಾದ 'ಕಾಂತಾರ' ವಿಶ್ವಾದ್ಯಂತ 400 ಕೋಟಿ ಗಳಿಸಿ ಇತಿಹಾಸ ಸೃಷ್ಟಿಸಿದೆ.ಇದೀಗ 'ಕಾಂತಾರ ಅಧ್ಯಾಯ 1' ಮುಂದಿನ ವರ್ಷಅಂದರೆ 2025 ರಲ್ಲಿ ಥಿಯೇಟರ್‌ಗೆ  ಲಗ್ಗೆ ಇಡಬಹುದು ಎನ್ನಲಾಗಿದೆ. 

 

ಚಿಯಾನ್ ವಿಕ್ರಮ್ ಅವರ ತಂಗಲಾನ್‍ ಕೂಡಾ ಕೆಲವೇ ದಿನಗಳಲ್ಲಿ ಬಿಡುಗಡೆ : 
ಚಿಯಾನ್ ವಿಕ್ರಮ್ ಅವರ ಮುಂಬರುವ ಚಿತ್ರ ತಂಗಲಾನ್‍  ಆಗಸ್ಟ್ ೧೫ಕ್ಕೆ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆ ಚಿತ್ರದ ಟ್ರೇಲರ್ ಲಾಂಚ್ ಆಗಿದ್ದು, ಅಭಿಮಾನಿಗಳ ಉತ್ಸಾಹ ಇಮ್ಮಡಿಗೊಂಡಿದೆ.ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ತೆರೆಗೆ ಬರಲಿದೆ. 

ಇದನ್ನೂ ಓದಿ : 'ಪೆಪೆ' ಸಿನಿಮಾದ ಹೊಸ ಹಾಡಿಗೆ ಅಭಿಮಾನಿಗಳು ಫಿದಾ..! ಹೇಗಿದೆ ಗೊತ್ತಾ ಜೇನು ಕುರುಬ ಸಾಂಗ್..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News