TJMM : ರಿಲೀಸ್‌ ಆದ ದಿನವೇ ʼತು ಜೂಟಿ ಮೈನ್ ಮಕ್ಕರ್ʼ ಚಿತ್ರದ HD ಪ್ರಿಂಟ್‌ ವಿಡಿಯೋ ಲೀಕ್‌..!

ಬಾಲಿವುಡ್‌ ಸ್ಟಾರ್‌ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ತು ಜೂಟಿ ಮೈನ್ ಮಕ್ಕರ್' ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ. ಬಿಟೌನ್‌ ಬೆಡಗಿ ಶ್ರದ್ಧಾ ಹಾಗೂ ರಣಬೀರ್‌ ಆಕ್ಟಿಂಗ್‌ಗೆ ಪ್ಯಾನ್ಸ್‌ ಫಿದಾ ಆಗಿದ್ದಾರೆ. ಆದರೆ, ಈ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಪೈರಸಿ ಭೂತಕ್ಕೆ ಬಲಿಯಾಗಿದೆ.

Written by - Krishna N K | Last Updated : Mar 8, 2023, 03:29 PM IST
  • ಬಹುನಿರೀಕ್ಷಿತ ಚಿತ್ರ 'ತು ಜೂಟಿ ಮೈನ್ ಮಕ್ಕರ್' ಇಂದು ಬಿಡುಗಡೆಯಾಗಿದೆ.
  • ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
  • ಆದ್ರೆ, ಬಿಡುಗಡೆಯಾದ ಮೊದಲ ದಿನವೇ ಪೈರಸಿ ಭೂತಕ್ಕೆ ಬಲಿಯಾಗಿದೆ.
TJMM : ರಿಲೀಸ್‌ ಆದ ದಿನವೇ ʼತು ಜೂಟಿ ಮೈನ್ ಮಕ್ಕರ್ʼ ಚಿತ್ರದ HD ಪ್ರಿಂಟ್‌ ವಿಡಿಯೋ ಲೀಕ್‌..! title=

TJMM Review : ಬಾಲಿವುಡ್‌ ಸ್ಟಾರ್‌ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ತು ಜೂಟಿ ಮೈನ್ ಮಕ್ಕರ್' ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ. ಬಿಟೌನ್‌ ಬೆಡಗಿ ಶ್ರದ್ಧಾ ಹಾಗೂ ರಣಬೀರ್‌ ಆಕ್ಟಿಂಗ್‌ಗೆ ಪ್ಯಾನ್ಸ್‌ ಫಿದಾ ಆಗಿದ್ದಾರೆ. ಆದರೆ, ಈ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಪೈರಸಿ ಭೂತಕ್ಕೆ ಬಲಿಯಾಗಿದೆ.

ಹೌದು.. ನ್ಯೂಸ್ 18 ಪ್ರಕಾರ, ಫಿಲ್ಮಿಜಿಲ್ಲಾ, ಮೂವಿರುಲೆಜ್, ಟೆಲಿಗ್ರಾಮ್, ತಮಿಳುರಾಕರ್ಸ್ ಮತ್ತು ಇತರ ಟೊರೆಂಟ್ ಸೈಟ್‌ಗಳಲ್ಲಿ ಈ ಚಲನಚಿತ್ರದ ಹೆಚ್‌ಡಿ ಆವೃತ್ತಿ ಲಭಿಸುತ್ತಿದೆ. ಲವ್ ರಂಜನ್ ನಿರ್ದೇಶನವು TJMM ಸಿನಿಮಾವನ್ನು ಜನರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ನೋಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, TJMM MP4 HD Download ಎಂದು ಸರ್ಚ್‌ ಕೀ ಬಳಸಿಕೊಂಡು ತಮಿಳು ರಾಕರ್ಸ್, ಟೆಲಿಗ್ರಾಮ್ ಲಿಂಕ್‌ಗಳು, ಸೇರಿದಂತೆ ಹಲವು ವೆಬ್‌ಸೈಟ್‌ಗಳಲ್ಲಿ ಈ ಸಿನಿಮಾವನ್ನು ಜನರು ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಇಂತಹ ʼಮುಖ್ಯಮಂತ್ರಿʼಯನ್ನು ಪಡೆದ ನಾವೇ ಧನ್ಯರು..!

ಇನ್ನು ವಿಶ್ಲೇಷಕ ತರಣ್ ಆದರ್ಶ್ ಚಿತ್ರವನ್ನು ಹೊಗಳಿದ್ದಾರೆ. ತಮ್ಮ ಟ್ವಿಟರ್‌ ಖಾತೆಯಲ್ಲಿ “ಒನ್‌ವರ್ಡ್ ರಿವ್ಯೂ… #ತು ಜೂಟಿ ಮೈನ್‌ಮಕ್ಕರ್: ರೇಟಿಂಗ್: 4 ಸ್ಟಾರ್, ರಿಫ್ರೆಶ್ ಪ್ರಣಯ... ಶ್ರದ್ಧಾಕಪೂರ್ ಅದ್ಭುತ, ರಣಬೀರ್‌ ಕಪೂರ್ ಅತ್ಯುತ್ತಮ... ಚಾರ್ಟ್‌ಬಸ್ಟರ್ ಸಂಗೀತ ಎಂದು ಬರೆದುಕೊಂಡಿದ್ದಾರೆ. ತು ಜೂಟಿ ಮೈನ್ ಮಕ್ಕರ್ ಸಿನಿಮಾವನ್ನು ಲವ್ ರಂಜನ್ ನಿರ್ದೇಶಿಸಿದ್ದಾರೆ. ಲವ್ ಫಿಲ್ಮ್ಸ್‌ನ ಲವ್ ರಂಜನ್ ಮತ್ತು ಅಂಕುರ್ ಗರ್ಗ್ ನಿರ್ಮಿಸಿರುವ ಟಿಜೆಎಮ್‌ಎಮ್‌ ಸಿನಿಮಾವನ್ನು ಟಿ-ಸೀರೀಸ್‌ನ ಗುಲ್ಶನ್ ಕುಮಾರ್ ಮತ್ತು ಭೂಷಣ್ ಕುಮಾರ್ ಪ್ರಸ್ತುತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News