ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಪುತ್ಥಳಿ ಅನಾವರಣ

ಗಾನ ಗಂಧರ್ವ ಡಾ||ಎಸ್ ಪಿ ಬಾಲಸುಬ್ರಹ್ಮಣ್ಯಂ ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರ ಹಾಡುಗಳ ಮೂಲಕ ಎಂದಿಗೂ ಜೀವಂತ.‌ ದೇಶ ಕಂಡ ಅದ್ಭುತ ಗಾಯಕನ ಮೇಲೆ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಅವರಿಗೂ ಅತೀವ ಪ್ರೀತಿ. ಆ ಪ್ರೀತಿಗಾಗಿ‌ ಮಧುಸೂದನ್ ಹವಾಲ್ದಾರ್ ಎಸ್ ಪಿ ಬಿ ಅವರ ಸುಂದರ ಪುತ್ಥಳಿ ಮಾಡಿಸಿದ್ದಾರೆ.

Written by - YASHODHA POOJARI | Edited by - Manjunath N | Last Updated : Jun 15, 2024, 09:26 PM IST
  • ನೆಚ್ಚಿನ ಗಾಯಕನ ಪ್ರತಿಮೆ ನಿರ್ಮಿಸಿದ ನಿರ್ದೇಶಕ ಮಧುಸೂದನ್ ಹವಾಲ್ದಾರ್
  • ನನಗೆ ಎಸ್ ಪಿ ಬಿ ಅವರ ಮೇಲೆ ಅಪಾರ ಪ್ರೀತಿ.‌
  • ಇಂದು ಎಸ್ ಪಿ ಬಿ ಅವರನ್ನು ಹತ್ತಿರದಿಂದ ಬಲ್ಲವರು ಈ ಪುತ್ಥಳಿ ಅನಾವರಣ ಮಾಡಿದ್ದು ಖುಷಿಯಾಗಿದೆ.
ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಪುತ್ಥಳಿ ಅನಾವರಣ  title=

ಬೆಂಗಳೂರು: ಗಾನ ಗಂಧರ್ವ ಡಾ||ಎಸ್ ಪಿ ಬಾಲಸುಬ್ರಹ್ಮಣ್ಯಂ ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರ ಹಾಡುಗಳ ಮೂಲಕ ಎಂದಿಗೂ ಜೀವಂತ.‌ ದೇಶ ಕಂಡ ಅದ್ಭುತ ಗಾಯಕನ ಮೇಲೆ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಅವರಿಗೂ ಅತೀವ ಪ್ರೀತಿ. ಆ ಪ್ರೀತಿಗಾಗಿ‌ ಮಧುಸೂದನ್ ಹವಾಲ್ದಾರ್ ಎಸ್ ಪಿ ಬಿ ಅವರ ಸುಂದರ ಪುತ್ಥಳಿ ಮಾಡಿಸಿದ್ದಾರೆ.

ಇದನ್ನೂ ಓದಿ- Ghaziabad Fire: ಗಾಜಿಯಾಬಾದ್‌ನ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, ಐವರು ಸಜೀವ ದಹನ

ಇತ್ತೀಚಿಗೆ ಈ ಪ್ರತಿಮೆಯ ಅನಾವರಣ ಸಮಾರಂಭ ನಡೆಯಿತು.‌ ಡಾ||ವೆಂಕಟರಮಣ ಎಸ್ ಪಿ ಬಿ ಅವರ ಪುತ್ಥಳಿ ಅನಾವರಣ ಮಾಡಿದರು.

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಲಹರಿ ವೇಲು, ಎಸ್ ಪಿ ಬಿ ಆಪ್ತರಾದ ಗೋಪಿ,  ಬಿ.ವಿ.ಶ್ರೀನಿವಾಸ್, ಸೌಂಡ್ ಆಫ್ ಮ್ಯೂಸಿಕ್ ನ ಗುರುರಾಜ್, ಪಿ ಆರ್ ಓ ಸುಧೀಂದ್ರ ವೆಂಕಟೇಶ್, ಗಾಯಕ ವಿಷ್ಣು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ಮಧುಸೂದನ್ ಹವಾಲ್ದಾರ್ ಮಾತನಾಡಿದರು.

ಇದನ್ನೂ ಓದಿ- ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಕೌನ್ಸಿಲ್ ಜೂನ್ 22ರಂದು ಆರಂಭ

ನನಗೆ ಎಸ್ ಪಿ ಬಿ ಅವರ ಮೇಲೆ ಅಪಾರ ಪ್ರೀತಿ.‌ ಕೆಲವು ದಿನಗಳ ಹಿಂದೆ ಹೈದರಾಬಾದ್ ಗೆ ಹೋಗಿದ್ದಾಗ ಸ್ನೇಹಿತರೊಬ್ಬರು ಎಸ್ ಪಿ ಬಿ ಅವರ ಬಗ್ಗೆ  ಹೇಳಿದ ಅನೇಕ ವಿಷಯಗಳು ನನಗೆ ಈ ಪುತ್ಥಳಿ ನಿರ್ಮಿಸಲು ಪ್ರೇರಣೆಯಾಯಿತು. ಇಂದು ಎಸ್ ಪಿ ಬಿ ಅವರನ್ನು ಹತ್ತಿರದಿಂದ ಬಲ್ಲವರು ಈ ಪುತ್ಥಳಿ ಅನಾವರಣ ಮಾಡಿದ್ದು ಖುಷಿಯಾಗಿದೆ. ಅವರೆಗೆಲ್ಲಾ ಧನ್ಯವಾದ. ಈ ಪುತ್ಥಳಿಯನ್ನು ತಮ್ಮಲ್ಲೇ ಸ್ಥಾಪಿಸಬೇಕೆಂದು ಅನೇಕರು ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರ ಬಳಿ ಚರ್ಚಿಸಿ ಸೂಕ್ತ ಸ್ಥಳದಲ್ಲಿ ಪುತ್ಥಳಿ ಪ್ರತಿಷ್ಠಾಪಿಸುವುದಾಗಿ ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು. ಆಗಮಿಸಿದ್ದ ಗಣ್ಯರು ಎಸ್ ಪಿ ಬಿ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News