ವಿವಾದಕ್ಕೆ ಕಾರಣವಾಯ್ತು RGV ಕ್ರಿಸ್ಮಸ್‌ ವಿಶ್‌ ಪೋಸ್ಟ್‌ : ಇದು ಸರಿಯಲ್ಲ ಎಂದ ನೆಟ್ಟಿಗರು..!

ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ ಸುಖಾ ಸುಮ್ಮನೆ ಕಾಂಟ್ರುವರ್ಸಿ ಕ್ರಿಯೆಟ್‌ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕ್ರಿಶ್ಚಿಯನ್ ಪವಿತ್ರ ಹಬ್ಬಗಳಲ್ಲಿ ಒಂದಾದ ಕ್ರಿಸ್ಮಸ್‌ ಹಬ್ಬಕ್ಕೆ ವಿಚಿತ್ರವಾಗಿ ಶುಭ ಕೋರುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಆರ್‌ಜಿವಿ ಫ್ಯಾನ್ಸ್‌ ಇದನ್ನು ಸಮರ್ಥಿಸಿಕೊಂಡು ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. 

Written by - Krishna N K | Last Updated : Dec 25, 2022, 05:37 PM IST
  • ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ ಸುಖಾ ಸುಮ್ಮನೆ ಕಾಂಟ್ರುವರ್ಸಿ ಕ್ರಿಯೆಟ್‌ ಮಾಡಿಕೊಳ್ಳುತ್ತಿದ್ದಾರೆ.
  • ಕ್ರಿಶ್ಚಿಯನ್ ಪವಿತ್ರ ಹಬ್ಬಗಳಲ್ಲಿ ಒಂದಾದ ಕ್ರಿಸ್ಮಸ್‌ ಹಬ್ಬಕ್ಕೆ ವಿಚಿತ್ರವಾಗಿ ಶುಭ ಕೋರುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
  • ನಾನ್‌ ಬಿಲಿವರ್ಸ್‌ ಎಲ್ಲರಿಗೂ ಮೆರಿ ಕ್ರಿಸ್ಮಸ್ ಎಂದು ವಿಶ್‌ ಮಾಡಿದ್ದಾರೆ. ಇದು ಯೇಸು ದೇವರನ್ನು ನಂಬಿದವರಿಗೆ ನೋವುಂಟು ಮಾಡಿದೆ.
ವಿವಾದಕ್ಕೆ ಕಾರಣವಾಯ್ತು RGV ಕ್ರಿಸ್ಮಸ್‌ ವಿಶ್‌ ಪೋಸ್ಟ್‌ : ಇದು ಸರಿಯಲ್ಲ ಎಂದ ನೆಟ್ಟಿಗರು..! title=

Ram Gopal Varma : ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ ಸುಖಾ ಸುಮ್ಮನೆ ಕಾಂಟ್ರುವರ್ಸಿ ಕ್ರಿಯೆಟ್‌ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕ್ರಿಶ್ಚಿಯನ್ ಪವಿತ್ರ ಹಬ್ಬಗಳಲ್ಲಿ ಒಂದಾದ ಕ್ರಿಸ್ಮಸ್‌ ಹಬ್ಬಕ್ಕೆ ವಿಚಿತ್ರವಾಗಿ ಶುಭ ಕೋರುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಆರ್‌ಜಿವಿ ಫ್ಯಾನ್ಸ್‌ ಇದನ್ನು ಸಮರ್ಥಿಸಿಕೊಂಡು ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. 

ಸ್ಟಾರ್‌ ಡೈರೆಕ್ಟರ್‌ ರಾಮ್‌ ಗೋಪಲ್‌ ವರ್ಮಾ ಸದಾ ಸೋಷಿಯಲ್‌ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗೆ ನಟಿಯೊಬ್ಬರ ಕಾಲು ನೆಕ್ಕುವ ಮೂಲಕ ಇಂಟರ್‌ನೆಟ್‌ನಲ್ಲಿ ಸೆಷೆಷನ್‌ ಆಗಿದ್ದರು. ನಂತರ ಯುವತಿಯ ಜೊತೆ ಸಂದರ್ಶನ ಮಾಡಿ ಒಪನ್‌ ಟಾಕ್‌ ನಡೆಸಿದ್ದರು. ಆ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್‌ ಆಗಿತ್ತು. ಸದಾ ಒಂದಲ್ಲ ಒಂದು ವಿವಾದಗಳ ಸೃಷ್ಟಿ ಮಾಡಿ ಜನರ ಕೋಪಕ್ಕೆ ಗುರಿಯಾಗುವ ಆರ್‌ಜಿವಿ ತಮ್ಮದೆ ಸ್ಟೈಲ್‌ನಲ್ಲಿ ಉತ್ತರ ನೀಡುವ ಮೂಲಕ ಎಲ್ಲರಿಗೂ ಟಾಂಗ್‌ ನೀಡುತ್ತಿದ್ದಾರೆ.

ಇದನ್ನೂ ಓದಿ: Samantha Ruth Prabhu : ʼಎಲ್ಲರಿಗೂ ನಾನು ಇದನ್ನೇ ಹೇಳಲು ಇಚ್ಚಿಸಿದ್ದೆ..ʼ ಸಮಂತಾ ಪೋಸ್ಟ್ ವೈರಲ್..!

ಇದೀಗ ಕ್ರಿಶ್ಚಿಯನ್ ಪವಿತ್ರ ಹಬ್ಬಗಳಲ್ಲಿ ಒಂದಾದ ಕ್ರಿಸ್ಮಸ್‌ ಹಬ್ಬಕ್ಕೆ ವರ್ಮಾ ವಿಶ್‌ ಮಾಡಿರುವ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಜನ್ಸ್‌ ಕೋಪಕ್ಕೆ ಗುರಿಯಾಗಿದೆ. ಪ್ರತಿಯೊಬ್ಬರಿಗೂ ಅವರದ್ದೇ ದೈವ, ದೇವರು, ಸಂಪ್ರದಾಯದ ಮೇಲೆ ನಂಬಿಕೆ ಇರುತ್ತದೆ. ಅದ್ರೆ ಆರ್‌ಜಿವಿ ಅವರು ಯೇಸು ಫೋಟೋಗೆ ತಮ್ಮ ಮುಖವನ್ನು ಸೇರಿಸಿ ಎಡಿಟ್‌ ಮಾಡಿ ತಾವೇ ಯೇಸು ಕ್ರಿಸ್ತ ಎಂಬ ರೀತಿಯಲ್ಲಿ ಬಿಂಬಿಸಿಕೊಂಡಿದ್ದಾರೆ. ಅಲ್ಲದೆ, ನಾನ್‌ ಬಿಲಿವರ್ಸ್‌ ಎಲ್ಲರಿಗೂ ಮೆರಿ ಕ್ರಿಸ್ಮಸ್ ಎಂದು ವಿಶ್‌ ಮಾಡಿದ್ದಾರೆ. ಇದು ಯೇಸು ದೇವರನ್ನು ನಂಬಿದವರಿಗೆ ನೋವುಂಟು ಮಾಡಿದೆ.

ಅಲ್ಲದೆ, ವರ್ಮಾ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಪರ ಹಾಗೂ ವಿರೋಧವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. ಕೆಲವರು ಅದನ್ನು ಹಾಸ್ಯವಾಗಿ ತೆಗೆದುಕೊಂಡಿದ್ದರೆ ಇನ್ನು ಕೆಲವರು ಅನ್ಯ ಧರ್ಮದವರನ್ನು ನೋಯಿಸಬಾರದು ಅಂತ ಉಪದೇಶ ಮಾಡಿದ್ದಾರೆ. ಇನ್ನು ಕೆಲವರು ಈ ರಿತಿಯಾಗಿ ಮಾಡುವುದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಸಾಲು ಸಾಲು ವಿವಾದಗಳಿಗೆ ಆರ್‌ಜಿವಿ ಗುರಿಯಾಗುತ್ತಿದ್ದಾರೆ. ಈ ರೀತಿಯ ಧರ್ಮನಿಂದನೇ ಪೋಸ್ಟ್‌ ಹಾಕಿ ಇನ್ನೊಬ್ಬರ ಮನಸ್ಸನ್ನು ನೋಯಿಸುವುದು ಎಷ್ಟು ಸರಿ ಅಂತ ಇದೀಗ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News