ಪ್ರೀತಿ ಹಂಚಲು ರಾಖಿ ಸಾವಂತ್ ದಾನ ಮಾಡ್ತೀನಿ ಅಂದಿದ್ದು ಏನು ಗೊತ್ತಾ!???

ಐಶ್ವರ್ಯ ಕಣ್ಣುಗಳು ತುಂಬಾ ಆಕರ್ಷಕವಾಗಿವೆ. ಅವರು ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಕಾರ್ಯದಿಂದ ಸಾಕಷ್ಟು ಮಂದಿ ಸ್ಫೂರ್ತಿ ಪಡೆದಿದ್ದಾರೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.

Last Updated : Sep 26, 2018, 05:05 PM IST
ಪ್ರೀತಿ ಹಂಚಲು ರಾಖಿ ಸಾವಂತ್ ದಾನ ಮಾಡ್ತೀನಿ ಅಂದಿದ್ದು ಏನು ಗೊತ್ತಾ!??? title=

ನವದೆಹಲಿ: ಎಲ್ಲರೂ ಸಮಾಜ ಸೇವೆಗಾಗಿ ಏನಾದರೂ ದಾನ ಮಾಡುತ್ತಾರೆ. ಆದರೆ ನನ್ನ ಬಳಿ ಏನೂ ಇಲ್ಲ ಎಂದು ಹೇಳಿದ ಬಾಲಿವುಡ್ ಬೆಡಗಿ ರಾಖಿ ಸಾವಂತ್ ಕಡೆಗೆ ಏನನ್ನು ದಾನ ಮಾಡುವುದಾಗಿ ಹೇಳಿದರೂ ಎಂಬುದನ್ನು ಕೇಳಿದರೆ ನೀವು ಖಂಡಿತಾ ದಂಗಾಗ್ತೀರ!!!

ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿರುವ ರಾಖಿ ಸಾವಂತ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆರಂಭದಲ್ಲಿ ವಿಶ್ವ ಸುಂದರಿ ಐಶ್ವರ್ಯ ರೈ ಬಗ್ಗೆ ಮಾತನಾಡುತ್ತಾ, "ಐಶ್ವರ್ಯ ಕಣ್ಣುಗಳು ತುಂಬಾ ಆಕರ್ಷಕವಾಗಿವೆ. ಅವರು ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಕಾರ್ಯದಿಂದ ಸಾಕಷ್ಟು ಮಂದಿ ಸ್ಫೂರ್ತಿ ಪಡೆದಿದ್ದಾರೆ. ಅದರಲ್ಲಿ ನಾನೂ ಒಬ್ಬಳು. ಆದರೆ ನನ್ನ ಬಳಿ ದಾನ ಮಾಡಲು ಏನೂ ಇಲ್ಲ. ಹಾಗಾಗಿ ನಾನು ನನ್ನ ಸ್ತನಗಳನ್ನು ದಾನ ಮಾಡುತ್ತೇನೆ" ಎಂದು ರಾಖಿ ಸಾವಂತ್ ಹೇಳಿದ್ದಾರೆ. 

ದೇಶದಲ್ಲಿ ಸಾಕಷ್ಟು ಜನ ಸಮಾಜ ಸೇವೆ ಮಾಡುತ್ತಿದ್ದಾರೆ. ನಾನೂ ಕೂಡ ಸಮಾಜ ಸೇವೆ ಮಾಡಲು ನಿರ್ಧರಿಸಿದ್ದೇನೆ. ಒಬ್ಬರ ಬಗ್ಗೆ ಮತ್ತೊಬ್ಬರು ಅಷ್ಟೊಂದು ಪ್ರೀತಿ ತೋರುವಾಗ ನಾಯಾಕೆ ತೋರಬಾರದು ಎನಿಸುತ್ತಿದೆ. ಹಾಗಾಗಿ ಪ್ರೀತಿ ತೋರಲು ನಾನು ನನ್ನ ಸ್ತನಗಳನ್ನು ದಾನ ಮಾಡುತ್ತೇನೆ. ಸದ್ಯಕ್ಕೆ ನನ್ನ ಸ್ತನ ಯಾರಿಗೆ ಬೇಕು ಎಂಬುದು ಗೊತ್ತಿಲ್ಲ, ಆದರೆ ಅವಶ್ಯಕತೆ ಇದ್ದವರಿಗೆ ದಾನ ಮಾಡುತ್ತೇನೆ" ಎಂದು ರಾಖಿ ಹೇಳಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

 
 
 
 

 
 
 
 
 
 
 
 
 

#aishwaryaraibachchan #aishwaryarai

A post shared by Rakhi Sawant Official (@rakhisawant2511) on

Trending News