Rakhi Sawant Video: ಮಳೆಯಲ್ಲಿ ನಿಂತು ತಲೆ ಮೇಲೆ ಮೊಟ್ಟೆ ಒಡೆದುಕೊಂಡ ರಾಖಿ.. ನಡುಬೀದಿಯಲ್ಲಿ ಹೈಡ್ರಾಮಾ!

Rakhi Sawant Video: ರಾಖಿ ಸಾವಂತ್ ಈಗ ರಸ್ತೆಯಲ್ಲಿ ನಿಂತು ಹೊಸ ಗಿಮಿಕ್ ಮಾಡಿದ್ದಾರೆ. ಮಳೆಯಲ್ಲೇ ಹೈಡ್ರಾಮಾ ಕ್ರಿಯೇಟ್‌ ಮಾಡಿದ್ದ ರಾಖಿ ಒಂದರ ಹಿಂದೆ ಒಂದರಂತೆ ಐದು ಮೊಟ್ಟೆಗಳನ್ನು ತಲೆ ಮೇಲೆ ಒಡೆದುಕೊಂಡಿದ್ದಾರೆ.   

Written by - Chetana Devarmani | Last Updated : Jul 8, 2023, 10:12 AM IST
  • ರಾಖಿ ಸಾವಂತ್ ಈಗ ರಸ್ತೆಯಲ್ಲಿ ನಿಂತು ಹೊಸ ಗಿಮಿಕ್ ಮಾಡಿದ್ದಾರೆ
  • ರಾಖಿಯ ವಿಚಿತ್ರ ನಡವಳಿಕೆ ಜನರನ್ನು ಅಚ್ಚರಿಗೊಳಿಸಿದೆ
  • ರಾಖಿ ಸಾವಂತ್ ಇತ್ತೀಚಿನ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ
Rakhi Sawant Video: ಮಳೆಯಲ್ಲಿ ನಿಂತು ತಲೆ ಮೇಲೆ ಮೊಟ್ಟೆ ಒಡೆದುಕೊಂಡ ರಾಖಿ.. ನಡುಬೀದಿಯಲ್ಲಿ ಹೈಡ್ರಾಮಾ!  title=
Rakhi Sawant

Rakhi Sawant New Video: ಬಾಲಿವುಡ್‌ನ ಡ್ರಾಮಾ ಕ್ವೀನ್‌ ಯಾರು ಅಂದ್ರೆ ಮೊದಲು ನೆನಪಾಗುವ ಹೆಸರೇ ರಾಖಿ ಸಾವಂತ್. ಅನೇಕ ಬಾರಿ ತಮ್ಮ ಹೈಡ್ರಾಮಾಗಳಿಂದ ರಾಖಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಾರೆ. ರಾಖಿಯ ವಿಚಿತ್ರ ನಡವಳಿಕೆ ಜನರನ್ನು ಅಚ್ಚರಿಗೊಳಿಸುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವಿಡಿಯೋ ಒಂದು ವೈರಲ್ ಆಗಿದೆ. ರಾಖಿಯ ವಿಡಿಯೋ ನೋಡಿದರೆ ನೀವೂ ಶಾಕ್‌ ಆಗುವಿರಿ. ಆದರೆ ಈ ಬಾರಿ ರಾಖಿ ಎಲ್ಲ ಮಿತಿಗಳನ್ನು ದಾಟಿದ್ದಾಳೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ನಡುರಸ್ತೆಯಲ್ಲಿ ಹೈಡ್ರಾಮಾ ಕ್ರಿಯೇಟ್‌ ಮಾಡಿದ್ದಾರೆ. 

ರಾಖಿ ಸಾವಂತ್ ಇತ್ತೀಚಿನ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಮಳೆಯಲ್ಲೇ ನಡುಬೀದಿಯಲ್ಲಿ ನಿಂತ ರಾಖಿ ಸಾವಂತ್‌ ಒಂದಲ್ಲ ಎರಡಲ್ಲ ಐದು ಮೊಟ್ಟೆಗಳನ್ನು ಒಂದರ ಹಿಂದೊಂದರಂತೆ ತಲೆ ಮೇಲೆ ಒಡೆದುಕೊಳ್ಳುತ್ತಾರೆ. ಈ ಎಲ್ಲಾ ಗಿಮಿಕ್ ಪಾಪರಾಜಿಗಳ ಕ್ಯಾಮೆರಾಗಳಲ್ಲಿ ಸೆರೆಯಾಯಿತು. ಒಳ್ಳೆಯ ವರನಿಗಾಗಿ ಈ ರೀತಿ ಮಾಡುತ್ತಿದ್ದೇನೆ ಎಂದು ರಾಖಿ ಹೇಳಿದ್ದಾರೆ. 

ಇದನ್ನೂ ಓದಿ: Shocking Post: 'ನಾನು ಜೊತೆಗೆ ಮಲಗಿದ್ದರೆ ಇದುವರೆಗೆ 30 ಚಿತ್ರಗಳನ್ನು ಪೂರೈಸುತ್ತಿದ್ದೆ' ನಟಿಯ ಸ್ಫೋಟಕ ಹೇಳಿಕೆ!

ಬಳಕೆದಾರರು ಸಹ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಭೂಮಿಯ ಮೇಲಿನ ಪ್ರತಿಯೊಬ್ಬರೂ ಅವಳಿಗೆ ಹೆದರುತ್ತಾರೆ, ಹಾಗಾಗಿ ರಾಖಿ ಪ್ಲೂಟೊದಲ್ಲಿ ವರನನ್ನು ಹುಡುಕಬೇಕು ಎಂದು ಒಬ್ಬರು ಬರೆದಿದ್ದಾರೆ. ಹಾಗಾದರೆ ರಾಖಿಗೆ ಎಷ್ಟು ವರಗಳು ಬೇಕು ಎಂದು ಇನ್ನೊಬ್ಬ ಬಳಕೆದಾರರು ಕೇಳಿದ್ದಾರೆ. ಹೀಗೆ ನಾನಾ ರೀತಿಯ ಕಾಮೆಂಟ್‌ಗಳನ್ನು ಜನರು ಮಾಡುತ್ತಿದ್ದಾರೆ. 

 

 

ರಾಖಿ ಸಾವಂತ್ ಪ್ರೀತಿಯಲ್ಲಿ ಬಿದ್ದಾಗ, ಮದುವೆ ಆಗಲು ತಡ ಮಾಡಲಿಲ್ಲ. ರಾಖಿ ಮೊದಲು ರಿತೇಶ್ ಎಂಬ ವ್ಯಕ್ತಿಯನ್ನು ಮದುವೆಯಾದರು. ಇಬ್ಬರೂ ಕೂಡ ಬಿಗ್ ಬಾಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು, ಆದರೆ ಅವರು ಕಾರ್ಯಕ್ರಮದಿಂದ ಹೊರಬಂದ ತಕ್ಷಣ ಅವರ ಮದುವೆ ಮುರಿದುಬಿತ್ತು. ಅಷ್ಟರಲ್ಲಿ ಆದಿಲ್ ಖಾನ್ ರಾಖಿಯ ಬದುಕಿಗೆ ಕಾಲಿಟ್ಟರು. ಇಬ್ಬರೂ ರಹಸ್ಯವಾಗಿ ಮದುವೆಯಾದರು ಮತ್ತು ರಾಖಿ ಕೂಡ ತನ್ನ ಧರ್ಮವನ್ನು ಬದಲಾಯಿಸಿಕೊಂಡರು. ಸ್ವಲ್ಪ ಸಮಯದ ಹಿಂದೆ ಆದಿಲ್‌ನ ಮೇಲೆ ರಾಖಿ ಆರೋಪದ ಸುರಿಮಳೆಗೈದರು. ಇದೀಗ ಈ ಸಂಬಂಧವು ಮುರಿದು ಬಿದ್ದಿದೆ. 

ಇದನ್ನೂ ಓದಿ: Deepika Ranveer: ಗಂಡನ ಬರ್ತ್‌ ಡೇ ಗೆ ವಿಶ್‌ ಮಾಡದ ದೀಪಿಕಾ! ರಣವೀರ್‌ ಜೊತೆ ಡಿವೋರ್ಸ್‌ ವದಂತಿ ಸತ್ಯವೇ!?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News