Ashwini Puneeth Rajkumar : ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿಗೆ ಮತ್ತೊಂದು ಆಘಾತ

ಅಶ್ವಿನಿ(Ashwini Puneeth Rajkumar) ಅವರ ತಂದೆ ಆರೋಗ್ಯವಾಗೆ ಮನೆಯವರು ಸ್ನೇಹಿತರ ಜೊತೆ ಓಡಾಡಿಕೊಂಡಿದ್ದರು. ಆದ್ರೆ ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ರೇವನಾಥ್ ನಿಧನ ಆಗಿದ್ದಾರೆ.

Written by - Channabasava A Kashinakunti | Last Updated : Feb 20, 2022, 04:16 PM IST
  • ಅಪ್ಪು ನಿಧನ ನೋವು ಮಾರೆಯಾಗೋ ಮುನ್ನ
  • ತಂದೆಯನ್ನ ಕಳೆದುಕೊಂಡ ಅಶ್ವಿನಿ ಪುನೀತ್ ರಾಜಕುಮಾರ್
  • ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ
Ashwini Puneeth Rajkumar : ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿಗೆ ಮತ್ತೊಂದು ಆಘಾತ title=

ಬೆಂಗಳೂರು : ಅಪ್ಪು ನಿಧನ ನೋವು ಮಾರೆಯಾಗೋ ಮುನ್ನವೇ ತಂದೆಯನ್ನ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ಕಳೆದುಕೊಂಡಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರ ತಂದೆ 78 ವರ್ಷದ ರೇವನಾಥ್ ಅವರು ನಿಧನರಾಗಿದ್ದಾರೆ.

ಅಶ್ವಿನಿ(Ashwini Puneeth Rajkumar) ಅವರ ತಂದೆ ಆರೋಗ್ಯವಾಗೆ ಮನೆಯವರು ಸ್ನೇಹಿತರ ಜೊತೆ ಓಡಾಡಿಕೊಂಡಿದ್ದರು. ಆದ್ರೆ ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ರೇವನಾಥ್ ನಿಧನ ಆಗಿದ್ದಾರೆ.

ರೇವನಾಥ್(Revanath) ಅವರು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ರು. ಹಿರಿಯ ರಾಜಕಾರಣಿ ಡಿಬಿ ಚಂದ್ರೇಗೌಡರ ಹತ್ತಿರದ ಸಂಬಂಧಿಯಾಗಿದ್ದರು.

ರೇವನಾಥ್ ಅವರು ಮೂಲತಃ ಜಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭಾಗಮನೆಯವರಾಗಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News