Narendra modi : ಶಾರುಖ್‌ ಖಾನ್‌ ಸಿನಿಮಾ ʼಪಠಾಣ್‌ʼ ಹೊಗಳಿದ ಪಿಎಂ ಮೋದಿ..!

ಶಾರುಖ್ ಖಾನ್ ಅಭಿನಯದ ಪಠಾಣ್‌ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ನೆಲಕಚ್ಚಿದ್ದ ಬಾಲಿವುಡ್‌ಗೆ ಪಠಾಣ್‌ ಆಧಾರ ಸ್ತಂಭವಾಗಿದೆ. ಇಲ್ಲಿಯವರೆಗೆ ಎಸ್‌ಆರ್‌ಕೆ ಸಿನಿಮಾ ಒಟ್ಟು 865 ಕೋಟಿ ರೂ. ಬೃಹತ್ ಕಲೆಕ್ಷನ್ ಮಾಡಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ, ಪಠಾಣ್ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಪಠಾಣ್‌ ಸಿನಿಮಾ ಉದ್ದೇಶಿಸಿ ಮಾತನಾಡಿದ್ದು ಕುತೂಹಲ ಉಂಟುಮಾಡಿದೆ.

Written by - Krishna N K | Last Updated : Feb 9, 2023, 01:21 PM IST
  • ಶಾರುಖ್ ಖಾನ್ ಅಭಿನಯದ ಪಠಾಣ್‌ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.
  • ಇಲ್ಲಿಯವರೆಗೆ ಎಸ್‌ಆರ್‌ಕೆ ಸಿನಿಮಾ ಒಟ್ಟು 865 ಕೋಟಿ ರೂ. ಬೃಹತ್ ಕಲೆಕ್ಷನ್ ಮಾಡಿದೆ.
  • ಪಿಎಂ ನರೇಂದ್ರ ಮೋದಿ ಲೋಕಸಭೆಯಲ್ಲಿ ತಮ್ಮ ಭಾಷಣದ ಸಮಯದಲ್ಲಿ ಪಠಾಣ್‌ ಸಿನಿಮಾ ಕುರಿತು ಮಾತನಾಡಿದ್ದಾರೆ.
Narendra modi : ಶಾರುಖ್‌ ಖಾನ್‌ ಸಿನಿಮಾ ʼಪಠಾಣ್‌ʼ ಹೊಗಳಿದ ಪಿಎಂ ಮೋದಿ..! title=

PM Modi On Pathaan : ಶಾರುಖ್ ಖಾನ್ ಅಭಿನಯದ ಪಠಾಣ್‌ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ನೆಲಕಚ್ಚಿದ್ದ ಬಾಲಿವುಡ್‌ಗೆ ಪಠಾಣ್‌ ಆಧಾರ ಸ್ತಂಭವಾಗಿದೆ. ಇಲ್ಲಿಯವರೆಗೆ ಎಸ್‌ಆರ್‌ಕೆ ಸಿನಿಮಾ ಒಟ್ಟು 865 ಕೋಟಿ ರೂ. ಬೃಹತ್ ಕಲೆಕ್ಷನ್ ಮಾಡಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ, ಪಠಾಣ್ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಪಠಾಣ್‌ ಸಿನಿಮಾ ಉದ್ದೇಶಿಸಿ ಮಾತನಾಡಿದ್ದು ಕುತೂಹಲ ಉಂಟುಮಾಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಸಭೆಯಲ್ಲಿ ತಮ್ಮ ಭಾಷಣದ ಸಮಯದಲ್ಲಿ ಪಠಾಣ್‌ ಸಿನಿಮಾ ಕುರಿತು ಮಾತನಾಡಿದ್ದಾರೆ. ದಶಕಗಳ ನಂತರ ಕಾಶ್ಮೀರದ ಥಿಯೇಟರ್‌ಗಳಲ್ಲಿ ಪಠಾಣ್ ಶೋ ಹೌಸ್‌ಫುಲ್ ಆಗುತ್ತಿದೆ ಎಂದು ಮಾತನಾಡಿದರು. ಶ್ರೀನಗರದ ರಾಮ್ ಮುನ್ಷಿ ಬಾಗ್‌ನಲ್ಲಿರುವ ಐನಾಕ್ಸ್‌ನಲ್ಲಿ ಪಠಾಣ್‌ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಹೇಳುವ ಮೂಲಕ ಕಾಶ್ಮೀರದಲ್ಲಿನ ಸ್ಥಿತಿ ಸಹಜವಾಗಿದೆ ಅಂತ ಹೇಳಿದರು.

ಇದನ್ನೂ ಓದಿ: ಖ್ಯಾತ ವೆಬ್ ಸರಣಿ "You" ನಾಲ್ಕನೇ ಸೀಸನ್ Netflixನಲ್ಲಿ ಬಿಡುಗಡೆ!

ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಕಾಶ್ಮೀರದ ಚಿತ್ರಮಂದಿರಗಳು ಪ್ರದರ್ಶನ ಕಾರಣುತ್ತಿವೆ. ಕೋವಿಡ್‌ ಸಮಯದಲ್ಲಿ ಮುಚ್ಚಲಾಗಿದ್ದ ಅನೇಕ ಥಿಯೇಟರ್‌ಗಳಲ್ಲಿ ಇದೀಗ ಪಠಾನ್ ಪ್ರದರ್ಶನಗೊಳ್ಳುತ್ತಿದೆ. ಶಾರುಖ್ ಖಾನ್ ಕ್ರೇಜ್ ಕೂಡ ನಿಜ. ವಿಶ್ವಾದ್ಯಂತ ಚಿತ್ರ 800 ಕೋಟಿ ಗಡಿ ದಾಟುತ್ತಿದ್ದಂತೆ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರು ಮುಗಿಬಿದ್ದು, ಸಿನಿಮಾ ನೋಡುತ್ತಿದ್ದಾರೆ. ಈ ಚಿತ್ರವು ವಿಶ್ವದಾದ್ಯಂತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಶಾರುಖ್ ಖಾನ್ ನಾಲ್ಕು ವರ್ಷಗಳ ಗ್ಯಾಪ್‌ ನಂತರ ಬೆಳ್ಳಿ ಪರದೆಯ ಮೇಲೆ ಪಠಾಣ್‌ ಮೂಲಕ ಅಬ್ಬರಿಸುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಯಶ್ ರಾಜ್ ಫಿಲ್ಮ್ಸ್ಅಡಿಯಲ್ಲಿ ಆದಿತ್ಯ ಚೋಪ್ರಾ ಈ ಸ್ಪೈ ಯೂನಿವರ್ಸ್‌ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ ಎಸ್‌ಆರ್‌ಕೆಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ. ಜಾನ್ ಅಬ್ರಹಾಂ ವಿಲನ್‌ ಪಾತ್ರದಲ್ಲಿ ಮಿಂಚಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News