ಫ್ಯಾನ್ಸ್’ಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್! ಸೆಮೀಸ್’ಗೆ ಶೇ.88ರಷ್ಟು ಮಳೆ ಭೀತಿ: ಮಳೆ ಬಂದರೆ ಯಾರ ಕನಸಿಗೆ ಬೀಳಲಿದೆ ಪೆಟ್ಟು?

IND vs ENG Semifinals Match Weather Report: AccuWeather.com ಪ್ರಕಾರ, ಗುರುವಾರ ಬೆಳಿಗ್ಗೆ ಗಯಾನಾದಲ್ಲಿ 88% ಮಳೆಯ ಸಾಧ್ಯತೆ ಮತ್ತು 18% ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮೊದಲ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ನಡೆಯಲಿದೆ.

Written by - Bhavishya Shetty | Last Updated : Jun 25, 2024, 08:25 PM IST
    • T20 ವಿಶ್ವಕಪ್ 2024 ರ ಎರಡನೇ ಸೆಮಿಫೈನಲ್‌’ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.
    • ಈ ಪಂದ್ಯದ ಮೇಲೆ ಮಳೆಯ ಭೀತಿ ಎದುರಾಗಿದೆ
    • ಗಯಾನಾದಲ್ಲಿ 88% ಮಳೆಯ ಸಾಧ್ಯತೆ ಮತ್ತು 18% ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ
ಫ್ಯಾನ್ಸ್’ಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್! ಸೆಮೀಸ್’ಗೆ ಶೇ.88ರಷ್ಟು ಮಳೆ ಭೀತಿ: ಮಳೆ ಬಂದರೆ ಯಾರ ಕನಸಿಗೆ ಬೀಳಲಿದೆ ಪೆಟ್ಟು? title=
Guyana Weather Report

IND vs ENG Semifinals Match Weather Report: ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಗುರುವಾರ (ಜೂನ್ 27) ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ T20 ವಿಶ್ವಕಪ್ 2024 ರ ಎರಡನೇ ಸೆಮಿಫೈನಲ್‌’ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಈ ಪಂದ್ಯದ ಮೇಲೆ ಮಳೆಯ ಭೀತಿ ಎದುರಾಗಿದೆ. ಪಂದ್ಯವು ಸ್ಥಳೀಯ ಕಾಲಮಾನ ಬೆಳಗ್ಗೆ 10:30ಕ್ಕೆ (ರಾತ್ರಿ 8 ಗಂಟೆಗೆ IST) ಆರಂಭವಾಗಲಿದೆ.

ಇದನ್ನೂ ಓದಿ: AFG vs BAN: ಅಫ್ಘಾನಿಸ್ತಾನ ತಂಡದ ಸಾಧನೆಗೆ ʼಕ್ರಿಕೆಟ್‌ ದೇವರʼ ಮೆಚ್ಚುಗೆ, ಏನಂದ್ರು ಸಚಿನ್?

AccuWeather.com ಪ್ರಕಾರ, ಗುರುವಾರ ಬೆಳಿಗ್ಗೆ ಗಯಾನಾದಲ್ಲಿ 88% ಮಳೆಯ ಸಾಧ್ಯತೆ ಮತ್ತು 18% ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮೊದಲ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮೀಸಲು ದಿನವನ್ನು ಇರಿಸಲಾಗಿದೆ. ಆದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ.

ಇದನ್ನೂ ಓದಿ: ಗಾಯವಾದಂತೆ ನಾಟಕವಾಡಿದ ಅಫ್ಘನ್ ಆಟಗಾರ!? ವಿಡಿಯೋ ವೈರಲ್

ಒಂದೇ ಒಂದು ಚೆಂಡನ್ನು ಎಸೆಯದೆ ಮಳೆಯು ಪಂದ್ಯವನ್ನು ರದ್ದುಗೊಳಿಸಿದರೆ, ನಂತರ ಯಾರು ಸೆಮಿಫೈನಲ್‌ಗೆ ಹೋಗುತ್ತಾರೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಇದು ಸಂಭವಿಸಿದಲ್ಲಿ, ಸೂಪರ್-8 ಸುತ್ತಿನಲ್ಲಿ ತನ್ನ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಕಾರಣ ಭಾರತ ಫೈನಲ್‌ಗೆ ತಲುಪಲಿದೆ. ಮತ್ತೊಂದೆಡೆ, ಇಂಗ್ಲೆಂಡ್ ತಂಡವು ಗುಂಪು 2 ರಲ್ಲಿ ಎರಡನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಅವರ ಅಭಿಮಾನಿಗಳು ಎದೆಗುಂದುತ್ತಾರೆ. ಆಂಗ್ಲ ತಂಡಕ್ಕೆ ಟ್ರೋಫಿ ಗೆಲ್ಲಲು ಸಾಧ್ಯವಾಗುವುದಿಲ್ಲ. ಸತತ ಎರಡನೇ ಬಾರಿ ಚಾಂಪಿಯನ್ ಆಗುವ ಅವರ ಕನಸು ಭಗ್ನವಾಗಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News