ʼಘೋಸ್ಟ್‌ʼ ವಿತರಣೆ ಹಕ್ಕು ಪಡೆದ ʼಪೆನ್‌ ಪ್ರೋಡಕ್ಷನ್‌ʼ..! ಶಿವಣ್ಣ ಅಬ್ಬರಕ್ಕೆ ಬಂತು ಮತ್ತಷ್ಟು ಬಲ

Ghost Shivanna : ಘೋಸ್ಟ್..‌ ಕರುನಾಡ ಚಕ್ರವತಿ ಶಿವರಾಜ್‌ಕುಮಾರ್‌ ಅಭಿನಯಿಸಿದ ಬಹುನಿರೀಕ್ಷಿತ ಸಿನಿಮಾ. ಈ ಚಿತ್ರ ಮುಂದಿನ ತಿಂಗಳು ತೆರೆಗೆ ಅಪ್ಪಳಿಸಲು ಸಿದ್ದಗೊಳ್ಳುತ್ತಿದ್ದು, ಇದರ ಬೆನ್ನಲ್ಲೆ ಚಿತ್ರದ ನಿರ್ಮಾಪಕರು ಬಾಲಿವುಡ್‌ನ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಬಿಗ್‌ ಡೀಲ್‌ ಮಾಡಿಕೊಂಡಿದ್ದಾರೆ. ಈ ಕುರಿತ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ ನೋಡಿ. 

Written by - Krishna N K | Last Updated : Sep 22, 2023, 03:11 PM IST
  • ಘೋಸ್ಟ್..‌ ಕರುನಾಡ ಚಕ್ರವತಿ ಶಿವರಾಜ್‌ಕುಮಾರ್‌ ಅಭಿನಯಿಸಿದ ಬಹುನಿರೀಕ್ಷಿತ ಸಿನಿಮಾ.
  • ʼಘೋಸ್ಟ್‌ʼ ಸಿನಿಮಾ, ಪೋಸ್ಟರ್‌ ಹಾಗು ಟೀಸರ್‌ನಿಂದ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಯನ್ನ ಮೂಡಿಸಿದೆ.
  • ಈ ಸಿನಿಮಾ 2023ರ ಆಕ್ಟೋಬರ್‌ 19ರಂದು ಕನ್ನಡ, ತೆಲುಗು ಹಾಗು ತಮಿಳು ಮೂರು ಭಾಷೆಗಳಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ.
ʼಘೋಸ್ಟ್‌ʼ ವಿತರಣೆ ಹಕ್ಕು ಪಡೆದ ʼಪೆನ್‌ ಪ್ರೋಡಕ್ಷನ್‌ʼ..! ಶಿವಣ್ಣ ಅಬ್ಬರಕ್ಕೆ ಬಂತು ಮತ್ತಷ್ಟು ಬಲ title=

Shivarajkumar movies : ಹ್ಯಾಟ್ರಿಕ್‌ ಹೀರೋ ಡಾ.ಶಿವರಾಜ್‌ಕುಮಾರ್‌ ಅಭಿನಯದ ʼಘೋಸ್ಟ್‌ʼ ಸಿನಿಮಾ, ಪೋಸ್ಟರ್‌ ಹಾಗು ಟೀಸರ್‌ನಿಂದ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಯನ್ನ ಮೂಡಿಸಿದೆ. ಈ ಸಿನಿಮಾವನ್ನ ʼಬೀರ್‌ಬಲ್‌ʼ ಹಾಗು ʼಓಲ್ಡ್‌ ಮಾಂಕ್‌ʼ ಖ್ಯಾತಿಯ ಶ್ರೀನಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ 2023ರ ಆಕ್ಟೋಬರ್‌ 19ರಂದು ಕನ್ನಡ, ತೆಲುಗು ಹಾಗು ತಮಿಳು ಮೂರು ಭಾಷೆಗಳಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ. ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸುನಾಮಿ ಎಬ್ಬಿಸಲು ಶಿವಣ್ಣ ರೆಡಿಯಾಗಿದ್ದಾರೆ.

ಹೌದು.. ʼಘೋಸ್ಟ್‌ʼ ಆಕ್ಷನ್‌ ಥ್ರಿಲರ್‌ ಚಿತ್ರವಾಗಿದ್ದು, 48 ಗಂಟೆಗಳಲ್ಲಿ ನಡೆಯುವ ಕಥೆಯಾಗಿದೆ. ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ಗೆ ನಾಯಕಿಯೇ ಇಲ್ಲ. ಆದರೆ ಸಿನಿಮಾದ ಮುಖ್ಯ ಪಾತ್ರದಲ್ಲಿ ಅರ್ಚನ ಜೋಯಿಸ್‌ ಕಾಣಿಸಿಕೊಳ್ಳಲಿದ್ದಾರೆ. ಹಾಗೆ ಮಲಯಾಳಂ ನಟ ಜಯರಾಮ್‌ ಪೋಲೀಸ್‌ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಲಿದ್ದು, ಜೊತೆಗೆ ಅನುಪಮ್‌ ಖೇರ್‌, ಪ್ರಶಾಂತ್‌ ನಾರಾಯಣ್‌ ಮುಂತಾದವರು ಬಣ್ಣ ಹಚ್ಚಲಿದ್ದಾರೆ.

ಇದನ್ನೂ ಓದಿ: 'ಅವಳೊಂದಿಗೆ ನಾನೂ ಸತ್ತಿದ್ದೇನೆ'..! ಮಗಳ ಅಗಲಿಕೆಗೆ ವಿಜಯ್ ಆಂಟನಿ ಸಂತಾಪ ಸಂದೇಶ

ʼಘೋಸ್ಟ್‌ʼ ಸಿನಿಮಾದ ದೃಶ್ಯಗಳನ್ನು ಮಹೇನ್‌ ಸಿಂಹ ಸೆರೆಹಿಡಿದಿದ್ದು, ಸಿನಿಮಾದ ಸಂಭಾಷಣೆಯನ್ನ ಮಾಸ್ತಿಯವರು ಬರೆದಿದ್ದಾರೆ. ಹಾಗು ಈ ಸಿನಿಮಾದ ಸಂಗೀತವನ್ನ ಅರ್ಜುನ್‌ ಜನ್ಯ ಅವರು ಕಂಪೋಸ್‌ ಮಾಡಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ದೊಡ್ಡ ಜೈಲ್‌ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿತ್ತು.

ಈ ಸಿನಿಮಾವನ್ನು ಸಂದೇಶ ಪ್ರೋಡಕ್ಷನ್‌ ಲಾಂಛನದಲ್ಲಿ, ಸಂದೇಶ ನಾಗರಾಜ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಧ್ಯ ಈ ಸಿನಿಮಾದ ನಿರ್ಮಾಪಕರು, ಬಾಲಿವುಡ್‌ನ ಪ್ರತಿಷ್ಠಿತ ಸಂಸ್ಥೆ ಜೊತೆ ಡೀಲ್‌ವೊಂದುನ್ನು ಮಾಡಿಕೊಂಡಿದ್ದಾರೆ. ʼRRRʼ, ʼ ಜವಾನ್‌ʼ, ʼಸೀತಾರಾಮಂʼ, ʼಪೊನ್ನಿಯನ್‌ ಸೆಲ್ವಾನ್‌ʼ ಸೇರಿದಂತೆ ಹೈ ಬಜೆಟ್‌ ಸಿನಿಮಾಗಳನ್ನ ಡಿಸ್ಟ್ರಿಬ್ಯೂಷನ್‌ ಮಾಡಿದ್ದ ʼಪೆನ್‌ ಪ್ರೋಡಕ್ಷನ್‌ʼ ಸಂಸ್ಥೆಯೊಂದಿಗೆ ʼಘೋಸ್ಟ್‌ʼ ಸಿನಿಮಾದ ನಿರ್ಮಾಪಕರು ಡಿಸ್ಟ್ರಿಬ್ಯೂಷನ್‌ ಡೀಲ್‌ ಓಕೆ ಮಾಡಿಕೊಂಡಿದ್ದಾರಂತೆ. 

ಇದನ್ನೂ ಓದಿ: OTT ಪ್ಲಾಟ್‌ಫಾರ್ಮ್‌ನಲ್ಲಿ ಈಗ ʼರಾಕಿ ಔರ್‌ ರಾಣಿ ಕಿ ಪ್ರೇಮ ಕಹಾನಿʼ

ʼಪೆನ್‌ ಸ್ಟುಡಿಯೋʼ ಸಂಸ್ಥೆ ಸಿನಿಮಾ ಡಿಸ್ಟ್ರಿಬ್ಯೂಷನ್‌ ಜೊತೆಗೆ ಹಲವು ಹಿಂದಿ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಸದ್ಯ ʼಘೋಸ್ಟ್‌ʼ ಸಿನಿಮಾದ ಹಕ್ಕುಗಳನ್ನ ʼಪೆನ್‌ ಸ್ಟುಡಿಯೋʼ ಸಂಸ್ಥೆ ಖರೀದಿ ಮಾಡಿದೆ. ʼಪೆನ್‌ ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಹೊರತು ಪಡಿಸಿ ಬೇರೆ ಭಾಷೆಗಳಲ್ಲಿ ಸಿನಿಮಾ ವಿತರಣೆಯನ್ನು ಮಾಡಲಿದೆಯೆಂದು ನಿರ್ಮಾಪಕ ಸಂದೇಶ ಎನ್‌ ಹೇಳಿದ್ದಾರೆ.

ʼಘೋಸ್ಟ್‌ʼ ಸಿನಿಮಾ ವಿತರಣೆ ಕುರಿತು ನಿರ್ಮಾಪಕರಾದ ಎನ್.ಸಂದೇಶ್‌ ಹಾಗು ʼಪೆನ್‌ ಸ್ಟುಡಿಯೋʼ ಸಂಸ್ಥೆ ಮುಖ್ಯಸ್ಥರಾದ ಜಯಂತಿಲಾಲ್‌ ಗಡ, ಇತ್ತಿಚಿಗೆ ಸಿನಿಮಾದ ಡಿಸ್ಟ್ರಿಬ್ಯೂಷನ್‌ ಬಗ್ಗೆ ಮಾತುಕಥೆ ನಡೆಸಿದ್ದು, ʼಘೋಸ್ಟ್‌ʼ ಸಿನಿಮಾದ ಚಿತ್ರಮಂದಿರದ ಹಕ್ಕುಗಳನ್ನು, ಸ್ಯಾಟೆಲೈಟ್‌ ಹಾಗು ಡಿಜಿಟಲ್‌ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಆಕ್ಟೋಬರ್‌ ಮೊದಲನೆಯ ವಾರದಿಂದ ನಟ ಶಿವರಾಜ್‌ಕುಮಾರ್‌ ಮುಂಬೈ, ದೆಹಲಿಗೆ ಹಾಗು ಮುಂತಾದ ಜಾಗಗಳಿಗೆ ತೆರಳಲಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News