ನಾಟು ನಾಟು ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ ಪಾಕಿಸ್ತಾನ ನಟಿ..! ವಿಡಿಯೋ ವೈರಲ್‌ 

ಸ್ಟಾರ್‌ ಡೈರೆಕ್ಟರ್‌ ರಾಜಮೌಳಿ ನಿರ್ದೇಶನದ ದೃಶ್ಯಕಾವ್ಯ ಆರ್‌ಆರ್‌ಆರ್‌ ಸಿನಿಮಾ ಗಡಿ ದಾಟಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈಗಾಗಲೇ ಸಾಲು ಸಾಲು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡು ಆಸ್ಕರ್‌ ಅಂಗಳಕ್ಕೆ ಕಾಲಿಟ್ಟಿರುವ ಆರ್‌ಆರ್‌ಆರ್‌ ಇತಿಹಾಸ ಸೃಷ್ಟಿಸುತ್ತಿದೆ. ಇದೀಗ ಪಾಕಿಸ್ತಾನ್‌ ನಟಿಯೊಬ್ಬರು ಆರ್‌ಆರ್‌ಆರ್‌ ಹಿಟ್‌ ಸಾಂಗ್‌ ನಾಟು ನಾಟು ಹಾಡಿಗೆ ಸಖತ್‌ ಸ್ಟೇಪ್‌ ಹಾಕಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

Written by - Krishna N K | Last Updated : Feb 25, 2023, 08:15 PM IST
  • ಆರ್‌ಆರ್‌ಆರ್‌ ಸಿನಿಮಾ ಗಡಿ ದಾಟಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
  • ಆಸ್ಕರ್‌ ಅಂಗಳಕ್ಕೆ ಕಾಲಿಟ್ಟಿರುವ ಆರ್‌ಆರ್‌ಆರ್‌ ಇತಿಹಾಸ ಸೃಷ್ಟಿಸುತ್ತಿದೆ.
  • ಇದೀಗ ಪಾಕ್‌ ನಟಿ ಹನಿಯಾ ನಾಟು ನಾಟು ಹಾಡಿಗೆ ಸಖತ್‌ ಸ್ಟೇಪ್‌ ಹಾಕಿರುವ ವಿಡಿಯೋ ವೈರಲ್‌ ಆಗಿದೆ.
ನಾಟು ನಾಟು ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ ಪಾಕಿಸ್ತಾನ ನಟಿ..! ವಿಡಿಯೋ ವೈರಲ್‌  title=

Pak actress dance for rrr natu natu song : ಸ್ಟಾರ್‌ ಡೈರೆಕ್ಟರ್‌ ರಾಜಮೌಳಿ ನಿರ್ದೇಶನದ ದೃಶ್ಯಕಾವ್ಯ ಆರ್‌ಆರ್‌ಆರ್‌ ಸಿನಿಮಾ ಗಡಿ ದಾಟಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈಗಾಗಲೇ ಸಾಲು ಸಾಲು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡು ಆಸ್ಕರ್‌ ಅಂಗಳಕ್ಕೆ ಕಾಲಿಟ್ಟಿರುವ ಆರ್‌ಆರ್‌ಆರ್‌ ಇತಿಹಾಸ ಸೃಷ್ಟಿಸುತ್ತಿದೆ. ಇದೀಗ ಪಾಕಿಸ್ತಾನ್‌ ನಟಿಯೊಬ್ಬರು ಆರ್‌ಆರ್‌ಆರ್‌ ಹಿಟ್‌ ಸಾಂಗ್‌ ನಾಟು ನಾಟು ಹಾಡಿಗೆ ಸಖತ್‌ ಸ್ಟೇಪ್‌ ಹಾಕಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಪಾಕ್‌ ನಟಿ ಹನಿಯಾ ಆಮಿರ್ ನಾಟು ನಾಟು ಹಾಡಿಗೆ ಮೈಮರೆತು ನೃತ್ಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಹನಿಯಾ ಮದುವೆ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬನ ಜೊತೆ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ವಿಡಿಯೋ ನೋಡಿದ ನೆಟಿಜನ್ಸ್‌ ಕಲೆಗೆ ಗಡಿ ಭಾಷೆ ಯಾವುದು ಇಲ್ಲ.. ಸೂಪರ್‌ ಅಂತ ಕಾಮೆಂಟ್‌ ಮೇಲೆ ಕಾಮೆಂಟ್‌ ಮಾಡುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by The Wedding Bridge (@theweddingbridge)

ಇದನ್ನೂ ಓದಿ: Nishvika Naidu : ನಿಶ್ವಿಕಾ ಸೌಂದರ್ಯ ನೋಡಿ ʼದಿಲ್‌ ಪಸಂದ್‌ʼ ತಿಂದಂಗಾಯ್ತು ಬ್ರೋ..!

ಆರ್‌ಆರ್‌ಆರ್‌ ಸಿನಿಮಾ ಪ್ಯಾನ್ ವರ್ಲ್ಡ್ ಆಗಿ ಮಿಂಚುತ್ತಿದೆ. ಇತ್ತೀಚಿಗೆ ರಾಜಮೌಳಿ ಮತ್ತು ಅವರ ಚಿತ್ರತಂಡ ಹಾಲಿವುಡ್‌ ಕ್ರಿಟಿಕ್ಸ್‌ ಅವಾರ್ಡ್‌ನಲ್ಲಿ 4 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಅಲ್ಲದೆ, ಆಸ್ಕರ್‌ ರೇಸ್‌ನಲ್ಲಿಯೂ ಕಾಣಿಸಿಕೊಂಡಿದ್ದು, ಆಸ್ಕರ್‌ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಭಾರತವಲ್ಲದೇ ವಿದೇಶಗಳಲ್ಲಿಯೂ ಹೆಚ್ಚಾಗಿ ವಿಮರ್ಶಕರಿಂದ ಆರ್‌ಆರ್‌ಆರ್‌ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಇಂದಿಗೂ ಅಲ್ಲಿ ಪ್ರದರ್ಶನ ಕಾಣುತ್ತಿದೆ.

ಇನ್ನು ಇಂಡಿಯಾ ಅಂದ್ರೆ ಸದಾ ಕತ್ತಿ ಮಸೆಯುವ ಪಾಕ್‌ನಲ್ಲಿಯೂ ಇಂಡಿಯನ್‌ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಇಷ್ಟು ದಿನ ಬಾಲಿವುಡ್‌ ಸಿನಿಮಾಗಳು ಹೆಚ್ಚಾಗಿ ಪಾಕ್‌ ಸಿನಿ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗುತ್ತಿದ್ದವು. ಇದೀಗ ತೆಲುಗು ಸಿನಿಮಾ ಆರ್‌ಆರ್‌ಆರ್‌ ಪಾಕಿಸ್ತಾನದ ಸಿನಿರಸಿಕರಿಗೂ ಸಹ ಫೆರವರಿಟ್‌ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಟಿ ಹನಿಯಾ ನಾಟು ನಾಟು ಹಾಡಿನ ವಿಡಿಯೋ ಮೆಚ್ಚುಗೆ ಪಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News