NTR 30 : ಎನ್‌ಟಿಆರ್ ನ್ಯೂ ಸಿನಿಮಾ ಶೂಟಿಂಗ್‌ ಸ್ಟಾರ್ಟ್‌..! ಯಂಗ್‌ ಟೈಗರ್‌ ಚಿತ್ರಕ್ಕೆ ರಾಜಮೌಳಿ ಕ್ಲಾಪ್‌

NTR 30 begins : ಕೊರಟಾಲ ಶಿವ ನಿರ್ದೇಶನದ NTR 30 ಚಿತ್ರದ ಪೂಜಾ ಕಾರ್ಯಕ್ರಮ ಗುರುವಾರ ಬೆಳಗ್ಗೆ ಹೈದರಾಬಾದ್‌ನಲ್ಲಿ ನಡೆಯಿತು. ಪೂಜಾ ಕಾರ್ಯಕ್ರಮದ ನಂತರ ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಚಿತ್ರತಂಡಕ್ಕೆ ಸ್ಕ್ರಿಪ್ಟ್ ಹಸ್ತಾಂತರಿಸಿದರು. ಎನ್‌ಟಿಆರ್‌ಗೆ ನಿರ್ದೇಶಕ ರಾಜಮೌಳಿ ಕ್ಲಾಪ್‌ ಮಾಡುವ ಮೂಲಕ ಸಿನಿಮಾ ಶೂಟಿಂಗ್‌ಗೆ ಚಾಲನೆ ನೀಡಿದರು. ಈ ಚಿತ್ರದ ಮೂಲಕ ಮೊದಲ ಬಾರಿಗೆ ಜಾನ್ವಿ ಕಪೂರ್‌ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

Written by - Krishna N K | Last Updated : Mar 23, 2023, 02:12 PM IST
  • ಕೊರಟಾಲ ಶಿವ ನಿರ್ದೇಶನದ NTR 30 ಚಿತ್ರದ ಶೂಟಿಂಗ್‌ ಪ್ರಾರಂಭ.
  • ಮೊದಲ ಬಾರಿಗೆ ಜಾನ್ವಿ ಕಪೂರ್‌ ಟಾಲಿವುಡ್‌ಗೆ ಪಾದಾರ್ಪಣೆ.
  • ಎನ್‌ಟಿಆರ್‌ಗೆ ಕ್ಲಾಪ್‌ ಮಾಡುವ ಮೂಲಕ ಶೂಟಿಂಗ್‌ ಗ್ರೀನ್‌ ಸಿಗ್ನಲ್‌ ನೀಡಿದ ರಾಜಮೌಳಿ.
NTR 30 : ಎನ್‌ಟಿಆರ್ ನ್ಯೂ ಸಿನಿಮಾ ಶೂಟಿಂಗ್‌ ಸ್ಟಾರ್ಟ್‌..! ಯಂಗ್‌ ಟೈಗರ್‌ ಚಿತ್ರಕ್ಕೆ ರಾಜಮೌಳಿ ಕ್ಲಾಪ್‌ title=

NTR 30 : ಯಂಗ್ ಟೈಗರ್ ಎನ್‌ಟಿಆರ್ ಹೊಸ ಸಿನಿಮಾ ಶುರುವಾಗಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದ ಪೂಜಾ ಕಾರ್ಯಕ್ರಮ ಗುರುವಾರ ಬೆಳಗ್ಗೆ ಹೈದರಾಬಾದ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಎನ್ ಟಿಆರ್, ಕೊರಟಾಲ ಶಿವ, ಜಾನ್ವಿ ಕಪೂರ್, ಪ್ರಕಾಶ್‌ ರಾಜ್, ಶ್ರೀಕಾಂತ್, ಛಾಯಾಗ್ರಾಹಕ ರತ್ನವೇಲು, ಸಂಗೀತ ನಿರ್ದೇಶಕ ಅನಿರುದ್ಧ್, ನಿರ್ಮಾಪಕ ಕಲ್ಯಾಣ್ ರಾಮ್ ಮುಂತಾದವರು ಭಾಗವಹಿಸಿದ್ದರು. 

ನಿರ್ದೇಶಕ ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪೂಜಾ ಕಾರ್ಯಕ್ರಮದ ನಂತರ ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಚಿತ್ರತಂಡಕ್ಕೆ ಸ್ಕ್ರಿಪ್ಟ್ ಹಸ್ತಾಂತರಿಸಿದರು. ಎನ್‌ಟಿಆರ್-ಜಾನ್ವಿ ಕಪೂರ್ ಅವರ ಶಾಟ್‌ಗೆ ರಾಜಮೌಳಿ ಕ್ಲಾಪ್ ಮಾಡುವ ಮೂಲಕ ಸಿನಿಮಾಗೆ ಗ್ರೀನ್‌ ಸಿಗ್ನಲ್‌ ನೀಡಿದರು. ಇದು NTR ಅವರ 30 ನೇ ಚಿತ್ರವಾಗಿದ್ದು, ಈ ಸಿನಿಮಾ ಮೂಲಕ ಮೊದಲ ಬಾರಿಗೆ ಜಾನ್ವಿ ಕಪೂರ್‌ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ:  ಮತ್ತೆ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಶಿಲ್ಪಾ ಶೆಟ್ಟಿ ..!

ನಿರ್ದೇಶಕ ಕೊರಟಾಲ ಶಿವ ಮಾತನಾಡಿ.. 'ಜನತಾ ಗ್ಯಾರೇಜ್ ನಂತರ ಎರಡನೇ ಬಾರಿಗೆ ಎನ್‌ಟಿಆರ್ ಜೊತೆ ಕೆಲಸ ಮಾಡುತ್ತಿದ್ದೇನೆ.. ಮತ್ತೆ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈ ಪೀಳಿಗೆಯ ಶ್ರೇಷ್ಠ ನಟರಲ್ಲಿ ಒಬ್ಬರಾಗಿರುವ ನನ್ನ ಕಿರಿಯ ಸಹೋದರನೊಂದಿಗೆ ಕೆಲಸ ಮಾಡಲು ನನಗೆ ಸಂತೋಷವಾಗಿದೆ. ಈ ಕಥೆ ಕರಾವಳಿ ಪ್ರದೇಶದ ಭೂಮಿಯನ್ನು ಆಧರಿಸಿದೆ.. ಈ ಕಥೆಯಲ್ಲಿ ಮನುಷ್ಯರಿಗಿಂತ ಪ್ರಾಣಿಗಳೇ ಹೆಚ್ಚು.. ದೇವರ ಭಯವಿಲ್ಲ.. ಸಾವಿನ ಭಯವಿಲ್ಲ.. ಒಂದೇ ಒಂದು ಭಯ.. ಅದೇ ಈ ಸಿನಿಮಾದ ಹಿನ್ನೆಲೆ ಅಂತ ಹೇಳಿದರು.

ಇನ್ನು ಕಳೆದ ವರ್ಷ ಕೊರಟಾಲ ಶಿವ ಅವರನ್ನು ಭೇಟಿಯಾಗಿದ್ದೆ.. ಈ ಅವಕಾಶ ನೀಡಿದ ನನ್ನ ಸಹೋದರ ತಾರಕ್, ಕೊರಟಾಲ ಶಿವಕುಮಾರ್ ಅವರಿಗೆ ಧನ್ಯವಾದಗಳು.. ನಾನು ಮತ್ತೆ ಬರುತ್ತಿದ್ದೇನೆ.. ಇಷ್ಟು ಒಳ್ಳೆಯ ಪ್ರಾಜೆಕ್ಟ್‌ನಲ್ಲಿ ನನಗೆ ಸಣ್ಣ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಸಂಗೀತ ನಿರ್ದೇಶಕ ಅನಿರುದ್ಧ್ ಹೇಳಿದ್ರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News