ನೂರು ಕಣ್ಣು ಸಾಲದು ನೋರಾ ನಿನ್ನಂದ ನೋಡಲು..! ವಿಡಿಯೋ ನೋಡಿದ್ರೆ ನಿಮ್ಗೆ ಅರ್ಥವಾಗುತ್ತೆ ಬಿಡಿ..

Nora Fatehi : ನೋರಾ ಫತೇಹಿ ಬಾಲಿವುಡ್‌ನ ಸ್ಟಾರ್‌ ಡ್ಯಾನ್ಸರ್‌ಗಳಲ್ಲಿ ಒಬ್ಬರು.. ತನ್ನ ಸೌಂದರ್ಯ ಮತ್ತು ನೃತ್ಯದ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸುಂದರಿ ಈಕೆ. ಇಂದು ಬಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿರುವ ನೋರಾ.. ದಿನವೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.. ಸಧ್ಯ ನೋರಾ ಅಂದದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..

Written by - Krishna N K | Last Updated : Oct 23, 2024, 07:53 PM IST
    • ನೋರಾ ಫತೇಹಿ ಬಾಲಿವುಡ್‌ನ ಸ್ಟಾರ್‌ ಡ್ಯಾನ್ಸರ್‌ಗಳಲ್ಲಿ ಒಬ್ಬರು..
    • ದಿನವೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ..
    • ನೋರಾ ಅಂದದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌
ನೂರು ಕಣ್ಣು ಸಾಲದು ನೋರಾ ನಿನ್ನಂದ ನೋಡಲು..! ವಿಡಿಯೋ ನೋಡಿದ್ರೆ ನಿಮ್ಗೆ ಅರ್ಥವಾಗುತ್ತೆ ಬಿಡಿ.. title=

Nora Fatehi diwali look : ನೋರಾ ಫತೇಹಿ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. ಅದ್ಭುತ ನೃತ್ಯಗಾರ್ತಿ, ಅಪರೂಪದ ಸೌಂದರ್ಯವತಿ, ಸಧ್ಯ ನೋರಾ ಟಿವಿಯಲ್ಲಿ ನೃತ್ಯ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.. ಬಾಲಿವುಡ್‌ನಲ್ಲಿ ಈಗಿರುವ ಸ್ಥಾನಕ್ಕೆ ತಲುಪುವ ಮುನ್ನ ತಾವು ಎದುರಿಸಿದ ಹಲವಾರು ಕಷ್ಟಕಾರ್ಪಣ್ಯಗಳನ್ನು ಎದುರಿಸಿದ್ದಾರೆ ಎನ್ನವ ವಿಚಾರ ಎಲ್ಲರಿಗೂ ಗೊತ್ತಿದೆ..

16ನೇ ವರ್ಷಕ್ಕೇ ಕುಟುಂಬಕ್ಕಾಗಿ ಕೆಲಸ ಮಾಡಲು ಆರಂಭಿಸಿದ ನೋರಾ, ತಾಯಿ ಹಾಗೂ ಸೋದರಿಯರ ಕಾಳಜಿ ಮಾಡಬೇಕಿತ್ತು. ಕುಟುಂಬ ನಿರ್ವಹಣೆಗೆ ತಾವೊಬ್ಬರೇ ಹಣ ದುಡಿಯಬೇಕಿತ್ತು ಅಂತ ಹಲವಾರು ಸಂದರ್ಶನಗಳಲ್ಲಿ ತಮ್ಮ ನೋವಿನ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.. 

ಇದನ್ನೂ ಓದಿ:ದಿಪಾವಳಿಗೆ ಡಬಲ್‌ ಧಮಾಕ..! ಅಯ್ಯೋ.. ಯಾರನ್ನ ನೋಡೋದು ಯಾರನ್ನ ಬಿಡೋದು ಎಂದ ಫ್ಯಾನ್ಸ್‌..

16ನೇ ವಯಸ್ಸಿನಲ್ಲಿ ಸಂಪಾದಿಸಲು ಪ್ರಾರಂಭಿಸಿದೆ, ಹಾಗಾಗಿ ನನ್ನ ಬಾಲ್ಯದ ದಿನಗಳನ್ನು ಎಂಜಾಯ್‌ ಮಾಡಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಬಾಲಿವುಡ್‌ಗೆ ಬರುವ ಮುನ್ನ ಏಜೆಂಟ್‌ಗಳು, ರೂಂಮೇಟ್‌ಗಳಿಂದ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೆ ಅಂತ ಸುಂದರಿ ತಿಳಿಸಿದ್ದರು.. 

 
 
 
 

 
 
 
 
 
 
 
 
 
 
 

A post shared by Nora Fatehi (@norafatehi)

ನೋರಾ ಕೆನಡದಲ್ಲಿ ಹುಟ್ಟಿ ಬೆಳೆದಿದ್ದು. ಬಾಂಬೆಗೆ ಬಂದಿಳಿದಾಗ ಅವರ ಕೈಲಿ ಕೇವಲ 5000 ರೂ. ಇತ್ತಂತೆ.. ತದನಂತರ ಸಾಕಷ್ಟು ಕಷ್ಟಗಳ ನಡುವೆ 'ಸತ್ಯಮೇವ್ ಜಯತೆ', 'ಬಾಟ್ಲಾ ಹೌಸ್', 'ಮಾರ್ಜಾವಾನ್' ಮತ್ತು 'ಥ್ಯಾಂಕ್ ಗಾಡ್' ನಂತಹ ಜನಪ್ರಿಯ ಚಿತ್ರಗಳಲ್ಲಿ ಹೆಜ್ಜೆ ಹಾಕಿ ನೋರಾಗೆ ಸ್ಟಾರ್‌ ಗಿರಿ ಬಂತು.. 

ಇದನ್ನೂ ಓದಿ:ಬಿಗ್ ಬಾಸ್ ಸ್ಪರ್ಧಿ ವಿರುದ್ಧ ಕೇಸ್ ದಾಖಲು..! ವೈಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆ ಸೇರಿದ್ದ ಸ್ಪರ್ಧಿ ಜೈಲಿಗೆ..?

ಅದೇನೇ ಇರಲಿ ನೋರಾ ಇಂದು ಕೋಟ್ಯಾಂತರ ಯುವಕರ ನೆಚ್ಚಿನ ನಟಿ, ತನ್ನ ಅದ್ಭುತ ಡಾನ್ಸ್‌ ಶೈಲಿ ಮತ್ತು ಸೌಂದರ್ಯದ ಮೂಲಕ ಪಡ್ಡೆ ಹುಡುಗರ ಹಾಟ್‌ ಫೇವರಿಟ್‌ ಅಗಿದ್ದಾರೆ.. ಸಿನಿಮಾ ಮತ್ತು ಶೋಗಳಲ್ಲಿ ಬ್ಯುಸಿಯಾಗಿರುವ ಚೆಲುವೆ, ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ವಿಡಿಯೋ ಮತ್ತು ಫೊಟೋಸ್‌ ಹಂಚಿಕೊಂಡು ಇಂಟರ್‌ನೆಟ್‌ಗೆ ಕಿಚ್ಚು ಹಚ್ಚುತ್ತಿರುತ್ತಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News