ಕೇವಲ 9 ಗಂಟೆಗಳಲ್ಲಿ 1 ಮಿಲಿಯನ್‌ ಇನ್ಸ್ಟಾಗ್ರಾಂ ಫಾಲೋವರ್ಸನ್ನು ಗಳಿಸಿದ ನಟಿ..! ಕತ್ರೀನಾ, ಪ್ರಿಯಾಂಕಾ, ದೀಪಿಕಾ ಅಲ್ಲವೇ ಅಲ್ಲ

Nayanthara Jawan movie : ನಯನತಾರಾ ಅವರು ತಮ್ಮ ಖಾತೆಯಲ್ಲಿ ಮೊದಲ ರೀಲ್‌ ಅನ್ನು ತಮ್ಮ ಅವಳಿ ಮಕ್ಕಳಾದ ಉಯಿರ್‌ ಮತ್ತು ಉಲಗ್‌ ಅವರೊಂದಿಗೆ ಪೋಸ್ಟ್‌ ಮಾಡಿದ್ದಾರೆ. ಮೂವರು ಒಂದೇ ರೀತಿ ಹೋಲುವ ಬಣ್ಣದ ಉಡುಗೆಗಳನ್ನು ತೊಟ್ಟಿದ್ದಾರೆ. ಈ ವಿಡಿಯೋ ಇಪ್ಪತ್ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ.

Written by - Zee Kannada News Desk | Last Updated : Sep 1, 2023, 02:39 PM IST
  • ಕೇವಲ 9 ಗಂಟೆಗಳಲ್ಲಿ 1 ಮಿಲಿಯನ್‌ ಫಾಲೋವರ್ಸನ್ನು ಗಳಿಸಿದ ಭಾರತೀಯ ನಟಿ.
  • ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಫಾಲೋವರ್ಸನ್ನು ಗಳಿಸಿದ ನಟಿ ನಯನತಾರಾ.
  • ʼಜವಾನ್‌ʼ ಚಿತ್ರದ ಮೂಲಕ ಹಿಂದಿ ಸಿನಿರಂಗಕ್ಕೆ ಪಾರ್ದಾಪಣೆ ಲೇಡಿ ಸೂಪರ್‌ಸ್ಟಾರ್‌.
ಕೇವಲ 9 ಗಂಟೆಗಳಲ್ಲಿ 1 ಮಿಲಿಯನ್‌ ಇನ್ಸ್ಟಾಗ್ರಾಂ ಫಾಲೋವರ್ಸನ್ನು ಗಳಿಸಿದ ನಟಿ..! ಕತ್ರೀನಾ, ಪ್ರಿಯಾಂಕಾ, ದೀಪಿಕಾ ಅಲ್ಲವೇ ಅಲ್ಲ title=

Nayanthara instagram : ಭಾರತೀಯ ನಟಿ ಕೇವಲ 9 ಗಂಟೆಗಳಲ್ಲಿ 1 ಮಿಲಿಯನ್‌ ಫಾಲೋವರ್ಸನ್ನು ಗಳಿಸಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಫಾಲೋವರ್ಸನ್ನು ಗಳಿಸಿದ ನಟಿ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಭಾರತೀಯ ಮನರಂಜನಾ ಮಾಧ್ಯಮದ ಹೆಸರಾಂತ ನಟಿ ಕೊನೆಗೂ ಅಗಸ್ಟ್‌ 31 ರಂದು ಇನ್ಸ್ಟಾಗ್ರಾಂನಲ್ಲಿ ತಮ್ಮ ಖಾತೆಯನ್ನು ತೆರದಿದ್ದಾರೆ. ಸಾಮಾಜಿಕ ಜಾಲತಾಣವೆನ್ನುವುದು ನಟ- ನಟಿಯರಿಗೆ ಒಂದು ಬೇರೆ ರೀತಿಯ ಬೆಳವಣಿಗೆಯನ್ನೇ ತಂದುಕೊಡುವ ಮಾಧ್ಯಮವಾಗಿದ್ದರೂ ಕೂಡ ಈ ನಟಿ ಇದರಿಂದ ದೂರ ಉಳಿದಿದ್ದರು. ಇತ್ತೀಗಷ್ಟೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಖಾತೆಯನ್ನು ತೆರೆಯುವ ಮೂಲಕ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದ್ದಾರೆ. ಯಾರಿವರು ಎಂಬ ಪ್ರಶ್ನೆ ಮೂಡುತ್ತಲೇ ಬಂದ ಹೆಸರೇ - ನಯನತಾರಾ . 

ಇವರು ಇನ್ಸ್ಟಾಗ್ರಾಂನಲ್ಲಿ ತಮ್ಮ ಖಾತೆಯನ್ನು ತೆರೆದ ಕೇವಲ 9 ಗಂಟೆಗಳಲ್ಲಿ ಒಂದು ಮಿಲಿಯನ್‌ ಇನ್ಸ್ಟಾಗ್ರಾಂ ಫಾಲೋವರ್ಸನ್ನು ಗಳಿಸಿದ್ದಾರೆ. ಆದರೆ ಕತ್ರೀನಾ ಕೈಫ್‌ ಅವರು ಇನ್ಸ್ಟಾಗ್ರಾಂ ಖಾತೆ ತೆರೆದಾಗ 24 ಗಂಟೆಗಳಲ್ಲಿ ಒಂದು ಮಿಲಿಯನ್‌ ಫಾಲೋವರ್ಸನ್ನು ಪಡೆದುಕೊಂಡಿದ್ದರು. ಆದರೆ ನಯನತಾರಾ 9 ಗಂಟೆಯಲ್ಲೇ ಒಂದು ಮಿಲಿಯನ್‌ ಫಾಲೋವರ್ಸನ್ನು ಪಡೆಯುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ನಟಿಯ ಶವ ಪತ್ತೆ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಶುಕ್ರವಾರ ಬೆಳಗ್ಗೆ ತನಕ ಖಾತೆಗೆ ಫಾಲೋವರ್ಸಗಳ ಸಂಖ್ಯೆ 1.4 ಮಿಲಿಯನ್‌. ನಯನತಾರಾ ಅವರು ಶಾರುಖ್‌ಖಾನ್‌, ಅನಿರುಧ್‌, ಅವರ ಪತಿ ವಿಘ್ನೇಶ್‌ ಶಿವನ್‌ ಸೇರಿದಂತೆ 9 ಜನರನ್ನು ಫಾಲೋ ಮಾಡುತ್ತಿದ್ದಾರೆ. ಶಾರುಖ್‌ಖಾನ್‌ ಅವರ ʼಜವಾನ್‌ʼ ಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಸಿನಿರಂಗಕ್ಕೆ ಪಾರ್ದಾಪಣೆ ಮಾಡಿದ್ದು, ಬರುವ ಗುರುವಾರ ತೆರೆಕಾಣಲಿದೆ. 

ನಯನತಾರಾ ಅವರು ತಮ್ಮ ಖಾತೆಯಲ್ಲಿ ಮೊದಲ ರೀಲ್‌ ಅನ್ನು ತಮ್ಮ ಅವಳಿ ಮಕ್ಕಳಾದ ಉಯಿರ್‌ ಮತ್ತು ಉಲಗ್‌ ಅವರೊಂದಿಗೆ ಪೋಸ್ಟ್‌ ಮಾಡಿದ್ದಾರೆ. ಮೂವರು ಒಂದೇ ರೀತಿ ಹೋಲುವ ಬಣ್ಣದ ಉಡುಗೆಗಳನ್ನು ತೊಟ್ಟಿದ್ದಾರೆ. ಈ ವಿಡಿಯೋ ಇಪ್ಪತ್ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ. ಅಷ್ಟಲ್ಲದೇ ʼಜವಾನ್‌ʼ ಟ್ರೈಲರ್‌ನ್ನು ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News