Yash 19 : ಯಶ್‌ ಮುಂದಿನ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಡೈರೆಕ್ಷನ್‌..!

Yash Geethu Mohandas : ಯಶ್‌ ಮುಂದಿನ ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್‌ ಒಂದು ಕೇಳಿ ಬಂದಿದೆ. ಯಶ್‌ 19ಗೆ  ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. 

Written by - Krishna N K | Last Updated : Apr 15, 2023, 02:00 PM IST
  • ರಾಕಿಂಗ್‌ ಸ್ಟಾರ್‌ ಯಶ್‌ ಪ್ಯಾನ್ಸ್‌ಗೆ ಗುಡ್‌ ನ್ಯೂಸ್‌
  • ರಾಕಿ 19ನೇ ಸಿನಿಮಾಗೆ ಗೀತು ಮೋಹನ್‌ದಾಸ್‌ ಡೈರೆಕ್ಷನ್‌.
  • ಇನ್ನು 30 ದಿನಗಳಲ್ಲಿ ಗೀತು ಮೋಹನ್ ದಾಸ್ ಯಶ್‌ ಹೊಸ ಚಿತ್ರ ಘೋಷಣೆ ಸಾಧ್ಯತೆ.
Yash 19 : ಯಶ್‌ ಮುಂದಿನ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಡೈರೆಕ್ಷನ್‌..! title=

Yash19 : ಪ್ಯಾನ್‌ ಇಂಡಿಯಾ ಸ್ಟಾರ್‌, ಕನ್ನಡದ ಹೆಮ್ಮೆಯ ನಟ ಯಶ್ ಅವರು ಕೆಜಿಎಫ್ 2 ನಂತರ ಇದುವರೆಗೂ ಯಾವುದೇ ಸಿನಿಮಾ ಅನೌನ್ಸ್‌ ಮಾಡಿಲ್ಲ. ಇದೀಗ ರಾಕಿ ಭಾಯ್‌ ಕುರಿತು ಲೆಟೆಸ್ಟ್‌ ಅಪ್‌ಡೆಟ್‌ ಒಂದು ಹೊರಬಿದ್ದಿದ್ದು, ಯಶ್‌ 19ನೇ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರು ಆಕ್ಷನ್‌ ಕಟ್‌ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ.

ಹೌದು... ಸಧ್ಯ ರಾಕಿ ಪ್ಯಾನ್ಸ್‌ಗಳ ಕೂಗು ಒಂದೇ ಒಂದು, ಅದು ಯಶ್‌ ಮುಂದಿನ ಸಿನಿಮಾ ಯಾವುದು ಅಂತ. ಇದೀಗ ಈ ಬಗ್ಗೆ ಹೊಸ ಅಪ್‌ಡೇಟ್‌ ಒಂದು ಕೇಳಿ ಬಂದಿದ್ದು, ಯಶ್ ಮುಂದಿನ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಯಶ್‌ ಮತ್ತು ಗೀತಾ ಸಹ ಈ ಕುರಿತು ಯಾವುದೇ ನ್ಯೂಸ್‌ ನೀಡಿಲ್ಲ.

ಇದನ್ನೂ ಓದಿ: Samantha: ಮುಖ ಕಿತ್ತೋಗಿದೆ, ಹಣಕ್ಕಾಗಿ ಅರೆಬೆತ್ತಲೆ ಕುಣಿತಾಳೆ.. ಸಮಂತಾಳನ್ನು ಹೀಯಾಳಿಸಿದ ನಿರ್ಮಾಪಕ

ಯಶ್ ಮತ್ತು ಗೀತು ಮೋಹನ್‌ದಾಸ್ ಕಳೆದ ಒಂದು ವರ್ಷದಿಂದ ಹೊಸ ಪ್ರಾಜೆಕ್ಟ್‌ ಕುರಿತು ಚರ್ಚಿಸುತ್ತಿದ್ದಾರೆ. ಗೀತು ಅವರ ಪರಿಕಲ್ಪನೆಗೆ ಯಶ್ ಬೌಲ್ಡ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ರಾಕಿಂಗ್ ಸ್ಟಾರ್‌ಗೆ ಬಂದ ಹಲವು ಸ್ಕ್ರಿಪ್ಟ್‌ಗಳಲ್ಲಿ ಗೀತು ಸ್ಕ್ರಿಪ್ಟ್‌ ಫವರ್‌ ಫುಲ್‌ ಆಗಿದೆ ಅಂತ ಮೂಲಗಳು ತಿಳಿಸಿವೆ. ಇನ್ನು 30 ದಿನಗಳಲ್ಲಿ ಗೀತು ಮೋಹನ್ ದಾಸ್ ಹೊಸ ಚಿತ್ರ ಘೋಷಣೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. 

ಗೀತು ಮೋಹನ್‌ದಾಸ್ ಆರ್ ಯು ಲಿಸನಿಂಗ್‌..? ಎಂಬ ಕಿರುಚಿತ್ರದೊಂದಿಗೆ ನಿರ್ದೇಶನ ಪ್ರಾರಂಭಿಸಿದರು, ಇದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ಭಾರತದಲ್ಲಿ ಅತ್ಯುತ್ತಮ ಕಿರು ಕಾದಂಬರಿ ಹಾಗೂ ರಾಷ್ಟ್ರೀಯ ಪ್ರಶಸ್ತಿಗಾಗಿ 3 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತು. 2014 ರಲ್ಲಿ ಬಿಡುಗಡೆಯಾದ ಅವರ ಮೊದಲ ಚಲನಚಿತ್ರ ಲೈಯರ್ ಡೈಸ್ ಭಾರತದಲ್ಲಿ 2 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News