Megastar Chiranjeevi: ಮೆಗಾಸ್ಟಾರ್ ಹನುಮಂತನ ಭಕ್ತನಾದದ್ದು ಹೇಗೆ?.. ಇಂಟ್ರೆಸ್ಟಿಂಗ್‌ ಮ್ಯಾಟರ್‌ ಬಿಚ್ಚಿಟ್ಟ ಚಿರಂಜೀವಿ

Chiranjeevi Hanuman connection: ಮೆಗಾಸ್ಟಾರ್ ಚಿರಂಜೀವಿ ಹನುಮಂತನ ಪರಮ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ಮೊದಲು ದೇವರನ್ನೇ ನಂಬಿರದ ಚಿರಂಜೀವಿ ಆಂಜನೇಯದ ಭಕ್ತನಾಗಿದ್ದು ಹೇಗೆ..? ಕಾರಣ ಏನು ಎನ್ನುವುದರ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.. 

Written by - Savita M B | Last Updated : Jan 8, 2024, 10:54 AM IST
  • ಮೆಗಾಸ್ಟಾರ್ ಚಿರಂಜೀವಿ ಹನುಮಂತನ ಭಕ್ತ ಎಂಬುದು ಗೊತ್ತೇ ಇದೆ
  • ಹನುಮಾನ್‌ ಫ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೆಗಾಸ್ಟಾರ್‌ ಚಿರಂಜೀವಿ
  • ಮಕ್ಕಳಾಗಿದ್ದಾಗ ನಾವ್ಯಾರು ದೇವರ ಭಕ್ತರಾಗಿರಲಿಲ್ಲ..
Megastar Chiranjeevi: ಮೆಗಾಸ್ಟಾರ್ ಹನುಮಂತನ ಭಕ್ತನಾದದ್ದು ಹೇಗೆ?.. ಇಂಟ್ರೆಸ್ಟಿಂಗ್‌ ಮ್ಯಾಟರ್‌ ಬಿಚ್ಚಿಟ್ಟ ಚಿರಂಜೀವಿ   title=

Chiranjeevi: ಮೆಗಾಸ್ಟಾರ್ ಚಿರಂಜೀವಿ ಹನುಮಂತನ ಭಕ್ತ ಎಂಬುದು ಗೊತ್ತೇ ಇದೆ.. ಅಲ್ಲದೇ ಅವರು ತಮ್ಮ ಮನೆಯಲ್ಲಿ ದೇವಸ್ಥಾನವನ್ನೂ ಕಟ್ಟಿದ್ದಾರೆ... ಕಾರಣ ತಾವು ಈ ಮಟ್ಟಕ್ಕೆ ಬರಲು ಆಂಜನೇಯಸ್ವಾಮಿಯೇ ಕಾರಣ ಎನ್ನುವುದು ನಟನ ಬಲವಾದ ನಂಬಿಕೆ..

ಹನುಮಾನ್‌ ಫ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೆಗಾಸ್ಟಾರ್‌ ಚಿರಂಜೀವಿ ತನ್ನ ಆರಾಧ್ಯ ದೈವ ಹನುಮಂತನ ಬಗ್ಗೆ ಮಾತನಾಡುವ ಸಂದರ್ಭವೇ ಸಿಗಲಿಲ್ಲ. ಆದರೆ ಇದೀಗ ಆ ಅವಕಾಶ ಒಲಿದು ಬಂದಿದೆ ಎಂದು ಆಂಜನೇಯ ಸ್ವಾಮಿ ಭಕ್ತಿಯ ಕುರಿತು ಮಾತನಾಡಿದ್ದಾರೆ..

ಇದನ್ನೂ ಓದಿ-ರಾಕಿಂಗ್ ಸ್ಟಾರ್‌ ಹುಟ್ಟುಹಬ್ಬದಂದೇ ದುರಂತ: ಯಶ್‌ ಬ್ಯಾನರ್‌ ಕಟ್ಟುವಾಗ 3 ಅಭಿಮಾನಿಗಳ ಸಾವು!

"ನಾನು ಈ ಮಟ್ಟಕ್ಕೆ ಬರಲು, ಈ ಶಿಸ್ತು, ಕಠಿಣ ಪರಿಶ್ರಮಕ್ಕೆ ಹನುಮಂತನೇ ಕಾರಣ" ಎನ್ನುತ್ತಾರೆ ಚಿರು. ಒಂದು ರೀತಿಯಲ್ಲಿ ಆಂಜನೇಯ ಅವರ ಜಾತಿಯ ದೇವರು.. ಇಲ್ಲಿ ಹಿಂದೂ ಧರ್ಮ ಅಥವಾ ಇತರೆ ಧರ್ಮದ ವಿಚಾರವಲ್ಲ, ಸ್ಪೂರ್ತಿದಾಯಕ ವ್ಯಕ್ತಿತ್ವ, ಆತನಿಗೆ ಶರಣಾದರೆ ನಮ್ಮನ್ನು ಹೇಗೆ ಮುಂದೆ ಕೊಂಡೊಯ್ಯಬಹುದು ಎಂಬುದಕ್ಕೆ ಚಿರು ನಿದರ್ಶನ ಎನ್ನುತ್ತಿದ್ದಾರೆ ನೆಟ್ಟಿಗರು.. 

ಇದನ್ನೂ ಓದಿ-Guntur Kaaram Trailer Release: ಆಕ್ಷನ್ ಪ್ಯಾಕ್ಡ್ 'ಗುಂಟೂರು ಖಾರಂ' ಟ್ರೇಲರ್‌ ಔಟ್!

ಮಕ್ಕಳಾಗಿದ್ದಾಗ ನಾವ್ಯಾರು ದೇವರ ಭಕ್ತರಾಗಿರಲಿಲ್ಲ.. ನನ್ನ ತಂದೆ ಕಮ್ಯುನಿಸ್ಟ್ ಆಗಿದ್ದರು.. ಯಾವುದೇ ಕಾರಣಕ್ಕೂ ದೇವರನ್ನು ನಂಬುತ್ತಿರಲಿಲ್ಲ.. ಅಮ್ಮನ ಒತ್ತಡಕ್ಕೆ ಮಣಿದು ಒಮ್ಮೊಮ್ಮೆ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಿದ್ದೆವು. ನಾನು ಏಳನೇ ತರಗತಿ ಓದುತ್ತಿದ್ದಾಗ ಪೊನ್ನೂರಿನಲ್ಲಿ ಆಂಜನೇಯಸ್ವಾಮಿ ದೇವಸ್ಥಾನವಿತ್ತು. ಸಂಜೆ ಟ್ಯೂಷನ್ ಗೆ ಹೋಗಿ ಬರುವಾಗ ಆ ದೇವಸ್ಥಾನದಲ್ಲಿ ಪ್ರಸಾದ ಕೊಡುತ್ತಿದ್ದರು. ಆ ಪ್ರಸಾದಕ್ಕಾಗಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿದ್ದೆವು.. ಬಳಿಕ ಇದೇ ಪ್ರಸಾದದ ಮೂಲಕ ಭಕ್ತಿ ಮೂಡಿತು" ಎಂದಿದ್ದಾರೆ. 

"ನನ್ನ ಕೊರಳಲ್ಲಿ ಈಗಲೂ ಆ ಲಾಕೆಟ್ ಇದೆ.. ಆರಂಭದಲ್ಲಿ ಆ ಲಾಕೆಟ್ ತನ್ನ ಸಿನಿಮಾಗಳಲ್ಲಿ ಕೊರಳಲ್ಲಿ ಕಾಣಿಸುತ್ತಿತ್ತು.. ಆದರೆ  ``ಅಣ್ಣಯ್ಯ~ ಸಿನಿಮಾದ ಶೂಟಿಂಗ್ ವೇಳೆ ಲಾಕೆಟ್ ತೆಗೆಯಬೇಕಿತ್ತು. ಪಕ್ಕದಲ್ಲಿದ್ದವನಿಗೆ ಕೊಟ್ಟೆ, ಆಮೇಲೆ ಆತ ಅದನ್ನು ವಾಪಸ್‌ ಕೊಡಲೇ ಇಲ್ಲ.. ಆಗ ಅನ್ನಿಸಿದ್ದು.. ದೇವರ ಮೇಲಿನ ಭಕ್ತಿ ಮನಸ್ಸಿನಲ್ಲಿರಬೇಕು ಹೊರತು ಸರಪಳಿಯಲ್ಲ.. ಆದರೆ ಅದನ್ನು ತಿಳಿದುಕೊಳ್ಳಲು ನನಗೆ ಇಷ್ಟು ಸಮಯ ಹಿಡಿಯಿತು.. ಅಂದಿನಿಂದ ಯಾವುದೇ ಕಷ್ಟ, ಸಮಸ್ಯೆ ಎದುರಾದಾಗ ರಾತ್ರಿ ಹನುಮಂತನನ್ನು ಮನದಲ್ಲೇ ಮಾತನಾಡಿಸಿ, ಬೆಳಗ್ಗೆ ಪರಿಹಾರ ಕಂಡುಕೊಳ್ಳುತ್ತೇನೆ.. ಇಲ್ಲಿಯವರೆಗೂ ತಮ್ಮ ಜೀವನ ಯಶಸ್ವಿಯಾಗಲು ಹನುಮಂತನೇ ಕಾರಣ ಎಂದು ಚಿರು ಹೇಳಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News