Darshan : 'ಡಿ' ಬಾಸ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!‌ ರೀ ರಿಲೀಸ್‌ ಆಗಲಿದೆ 'ಮೆಜೆಸ್ಟಿಕ್'

ಫೆಬ್ರವರಿ 16ರಂದು ದರ್ಶನ್‌(challenge star Darshan) ಹುಟ್ಟುಹಬ್ಬ ಆಚರಿಸಲು ಅಭಿಮಾನಿ ಬಳಗ ಸಕಲ ತಯಾರಿ ನಡೆಸುತ್ತಿದೆ. ಈ ಹೊತ್ತಲ್ಲೇ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್‌ ಕೂಡ ಸಿಗ್ತಿದೆ.

Written by - Malathesha M | Last Updated : Feb 9, 2022, 01:47 PM IST
  • ಚಾಲೆಂಜ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್‌
  • ಈ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲು ನಿರ್ಮಾಪಕ ಎಂಜಿ ರಾಮಮೂರ್ತಿ ಮುಂದಾಗಿದ್ದಾರೆ
  • ದರ್ಶನ್‌ ಅವರಿಗೆ ಮೊದಲ ಸಿನಿಮಾ ಮೆಜೆಸ್ಟಿಕ್ ಅದ್ಭುತ ಯಶಸ್ಸು ತಂದು ಕೊಟ್ಟಿತ್ತು
Darshan : 'ಡಿ' ಬಾಸ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!‌ ರೀ ರಿಲೀಸ್‌ ಆಗಲಿದೆ 'ಮೆಜೆಸ್ಟಿಕ್' title=

ಬೆಂಗಳೂರು : ಚಾಲೆಂಜ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಹೀಗಾಗಿ ಫ್ಯಾನ್ಸ್ ಸಂಭ್ರಮದ ತಯಾರಿಯಲ್ಲಿದ್ದಾರೆ. ಈ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲು ನಿರ್ಮಾಪಕ ಎಂಜಿ ರಾಮಮೂರ್ತಿ ಮುಂದಾಗಿದ್ದಾರೆ. ಹಾಗಾದ್ರೆ ಡಿ ಬಾಸ್‌ ಅಭಿಮಾನಿಗಳಿಗೆ ಸಿಗ್ತಿರೋ ಗಿಫ್ಟ್‌ ಆದ್ರೂ ಏನು? ಇಲ್ಲಿದೆ ನೋಡಿ..

ಫೆಬ್ರವರಿ 16ರಂದು ದರ್ಶನ್‌(challenge star Darshan) ಹುಟ್ಟುಹಬ್ಬ ಆಚರಿಸಲು ಅಭಿಮಾನಿ ಬಳಗ ಸಕಲ ತಯಾರಿ ನಡೆಸುತ್ತಿದೆ. ಈ ಹೊತ್ತಲ್ಲೇ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್‌ ಕೂಡ ಸಿಗ್ತಿದೆ.

ಇದನ್ನೂ ಓದಿ : Jogi Prem: ಮಲ್ಟಿಪ್ಲೆಕ್ಸ್‌ಗಳಿಂದ ಕನ್ನಡ ಚಿತ್ರಗಳಿಗೆ ಅನ್ಯಾಯ..? ಸಿಡಿದೆದ್ದ ಡೈರೆಕ್ಟರ್‌ ಜೋಗಿ ಪ್ರೇಮ್..!

2 ದಶಕದ ಸಂಭ್ರಮ

2 ದಶಕಗಳ ಹಿಂದೆ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದ 'ಮೆಜೆಸ್ಟಿಕ್' ಸಿನಿಮಾ(Majestic Movie)ವನ್ನು ರೀ ರಿಲೀಸ್‌ ಮಾಡಲು ನಿರ್ಮಾಪಕ ಎಂ.ಜಿ.ರಾಮಮೂರ್ತಿ ಮುಂದಾಗಿದ್ದಾರೆ. ದರ್ಶನ್‌ ನಾಯಕನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ 'ಮೆಜೆಸ್ಟಿಕ್' ದೊಡ್ಡ ಹಿಟ್‌ ನೀಡಿತ್ತು. ಈ ಸಿನಿಮಾದಲ್ಲಿ ದರ್ಶನ್‌ ಮಾಸ್‌ ಲುಕ್‌ನಲ್ಲಿ ಮಿಂಚಿದ್ದರು. ಫೆಬ್ರವರಿ 8ಕ್ಕೆ 'ಮೆಜೆಸ್ಟಿಕ್' ಸಿನಿಮಾ 20 ವರ್ಷ ಪೂರೈಸಿದೆ. ಮತ್ತೊಂದ್ಕಡೆ ಫೆಬ್ರವರಿ 16ರಂದು ದರ್ಶನ್‌ ಹುಟ್ಟುಹಬ್ಬವಿದ್ದು, ಈ ಬಾರಿ ಡಿ ಬಾಸ್‌ ಬರ್ತ್‌ಡೇಯನ್ನ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಕಾರಣಕ್ಕೆ 'ಮೆಜೆಸ್ಟಿಕ್' ಸಿನಿಮಾ ಮತ್ತೊಮ್ಮೆ ಚಿತ್ರ ಮಂದಿರಗಳಲ್ಲಿ ರೀ ರಿಲೀಸ್ ಮಾಡಲು ಮುಂದಾಗಿದ್ದಾರೆ.

ಸೆಂಚ್ಯೂರಿ ಭಾರಿಸಿತ್ತು ಮೆಜೆಸ್ಟಿಕ್ ಸಿನಿಮಾ

ದರ್ಶನ್‌ ಅವರಿಗೆ ಮೊದಲ ಸಿನಿಮಾ ಮೆಜೆಸ್ಟಿಕ್(Majestic) ಅದ್ಭುತ ಯಶಸ್ಸು ತಂದು ಕೊಟ್ಟಿತ್ತು. ಈ ಸಿನಿಮಾ ಅಂದುಕೊಂಡ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಅಭಿಮಾನಿಗಳ ಮನ ಗೆದ್ದಿತ್ತು. ಇಂತಹ ಅದ್ಭುತ ಸಿನಿಮಾವನ್ನು ಮತ್ತೊಮ್ಮೆ ಚಿತ್ರ ಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ : Oscar Awards 2022: ಆಸ್ಕರ್ ಪ್ರಶಸ್ತಿಗೆ ಈ ಭಾರತೀಯ ಚಿತ್ರವೂ ನಾಮನಿರ್ದೇಶನಗೊಂಡಿದೆ

ಅಭಿಮಾನಿಗಳಿಗೆ ಹಬ್ಬದ ವಾತಾವರಣ..!

ರಾಜ್ಯದಲ್ಲಿ ಚಿತ್ರ ಮಂದಿರಗಳಲ್ಲಿ 100 ಪರ್ಸೆಂಟ್‌ ಆಕ್ಯುಪೆನ್ಸಿ ಸಿಕ್ಕು ಕೆಲವೇ ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಇದೇ ವಾರ 6 ಸಿನಿಮಾ(Movie), ಮುಂದಿನ ವಾರ 3 ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಈ ಹೊತ್ತಲ್ಲೇ 'ಮೆಜೆಸ್ಟಿಕ್' ರೀ ರಿಲೀಸ್‌ ಆಗ್ತಿರೋದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಡಿ ಬಾಸ್‌ ಹುಟ್ಟು ಹಬ್ಬದ ದಿನ ಚಿತ್ರ ಮಂದಿರಗಳ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗೋದು ಪಕ್ಕಾ ಆಗಿದೆ.

ಒಟ್ಟಿನಲ್ಲಿ ದರ್ಶನ್‌ ಬರ್ತ್‌ ಡೇ ದಿನ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್‌ ಸಿಗೋದು ಪಕ್ಕಾ ಆಗಿದೆ. ಆದರೆ ಎಷ್ಟು ಚಿತ್ರ ಮಂದಿರಗಳಲ್ಲಿ 'ಮೆಜೆಸ್ಟಿಕ್' ರೀ ರಿಲೀಸ್‌ ಆಗುತ್ತೆ ಅನ್ನೋದು ಇನ್ನೂ ಕನ್ಫರ್ಮ್‌ ಆಗಿಲ್ಲ. ಮತ್ತೊಂದ್ಕಡೆ ದಚ್ಚು ಅಭಿಮಾನಿಗಳು ಸಂಭ್ರಮದಿಂದ ಪೂರ್ವ ತಯಾರಿ ಆರಂಭಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News