ಆನ್‌ಲೈನ್ ಬೆಟ್ಟಿಂಗ್ ಪ್ರಕರಣ : ನಟಿ ಶ್ರದ್ಧಾ ಕಪೂರ್‌ಗೆ ಇಡಿ ಸಮನ್ಸ್

Mahadev betting app : ಮಹದೇವ್ ಬೆಟ್ಟಿಂಗ್‌ ಆ್ಯಪ್ ಬ್ಯಾಡ್ಮಿಂಟನ್, ಟೆನಿಸ್, ಫುಟ್‌ಬಾಲ್, ಕ್ರಿಕೆಟ್ ಮತ್ತು ಕಾರ್ಡ್ ಗೇಮ್‌ಗಳು ಸೇರಿದಂತೆ ಆನ್‌ಲೈನ್ ಆಟಗಳ ಸರಣಿಯಲ್ಲಿ ಅಕ್ರಮವಾಗಿ ಬಾಜಿ ಕಟ್ಟಲು ಅವಕಾಶ ಮಾಡಿಕೊಟ್ಟಿದೆ ಎಂದು ವರದಿಯಾಗಿದೆ. ಸಧ್ಯ ಈ ಆ್ಯಪ್ ಅನ್ನು ಪ್ರಚಾರ ಮಾಡಿದ್ದಕ್ಕಾಗಿ ಬಿಟೌನ್‌ ಸ್ಟಾರ್‌ಗಳು ಇಡಿ ವಿಚಾರಣೆ ಎದುರಿಸುತ್ತಿದ್ದಾರೆ.

Written by - Krishna N K | Last Updated : Oct 6, 2023, 12:17 PM IST
  • ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ನಟಿ ಶ್ರದ್ಧಾ ಕಪೂರ್‌ಗೆ ಇಡಿ ಸಮನ್ಸ್‌.
  • ಶ್ರದ್ಧಾ ಕಪೂರ್ ಅವರನ್ನು ಅಕ್ಟೋಬರ್ 6 ಶುಕ್ರವಾರದಂದು ಹಾಜರಾಗುವಂತೆ ತಿಳಿಸಲಾಗಿದೆ.
  • ರಣಬೀರ್ ಕಪೂರ್, ಹುಮಾ ಖುರೇಷಿ ಮತ್ತು ಕಪಿಲ್ ಶರ್ಮಾ ಅವರನ್ನು ವಿಚಾರಣೆ ಕರೆಯಲಾಗಿದೆ.
ಆನ್‌ಲೈನ್ ಬೆಟ್ಟಿಂಗ್ ಪ್ರಕರಣ : ನಟಿ ಶ್ರದ್ಧಾ ಕಪೂರ್‌ಗೆ ಇಡಿ ಸಮನ್ಸ್ title=

Shraddha Kapoor : ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಸಮನ್ಸ್‌ಗಳ ಪಟ್ಟಿಯಲ್ಲಿ ಇದೀಗ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹ ಸೇರಿದ್ದಾರೆ. ಸಧ್ಯ ಇಡಿ ನಟಿಯನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಕಳೆದ ಕೆಲವು ದಿನಗಳ ಹಿಂದೆ ರಣಬೀರ್ ಕಪೂರ್, ಹುಮಾ ಖುರೇಷಿ ಮತ್ತು ಕಪಿಲ್ ಶರ್ಮಾ ಅವರನ್ನು ವಿಚಾರಣೆ ಕರೆಯಲಾಗಿತ್ತು. 

ಈ ಆ್ಯಪ್ ಅನ್ನು ಪ್ರಚಾರ ಮಾಡಿದ ಆರೋಪದ ಮೇಲೆ ತನಿಖಾ ಸಂಸ್ಥೆ ಹುಮಾ ಖುರೇಷಿ ಮತ್ತು ಹಿನಾ ಖಾನ್ ಅವರಿಗೆ ಸಮನ್ಸ್ ನೀಡಿದೆ. ಸೆಪ್ಟೆಂಬರ್‌ನಲ್ಲಿ ದುಬೈನಲ್ಲಿ ನಡೆದ ಮಹಾದೇವ್ ಬೆಟ್ಟಿಂಗ್‌ ಆ್ಯಪ್‌ನ ಸೆಲೆಬ್ರೇಷನ್ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಕಪಿಲ್ ಶರ್ಮಾ ವಿಚಾರಣಗೆ ಕರೆಯಲಾಗಿತ್ತು. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಶ್ರದ್ಧಾ ಕಪೂರ್ ಅವರನ್ನು ಅಕ್ಟೋಬರ್ 6 ಶುಕ್ರವಾರದಂದು ಹಾಜರಾಗುವಂತೆ ತಿಳಿಸಲಾಗಿದೆ. ಆ್ಯಪ್ ಪ್ರಚಾರಕ್ಕಾಗಿ ನಟಿ ಸ್ವೀಕರಿಸಿದ ಹಣದ ಬಗ್ಗೆ ಅಧಿಕಾರಿ ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 'ಲಿಯೋ' ಟ್ರೈಲರ್ ನೋಡಿ ಚಿತ್ರಮಂದಿರ ಧ್ವಂಸ ಮಾಡಿದ ನಟ ವಿಜಯ್‌ ಫ್ಯಾನ್ಸ್‌..! ಕಾರಣ ಇಲ್ಲಿದೆ

ಗುರುವಾರ, ನಟ ರಣಬೀರ್ ಕಪೂರ್ ಅವರನ್ನು ರಾಯ್ಪುರದಲ್ಲಿರುವ ಇಡಿ ಪ್ರಾದೇಶಿಕ ಕಚೇರಿಗೆ ಶುಕ್ರವಾರದಂದು ಹಾಜರಾಗುವಂತೆ ಸಮನ್ಸ್ ನೀಡಿತ್ತು. ಪಿಟಿಐ ಪ್ರಕಾರ, ಹಿನಾ ಖಾನ್, ಕಪಿಲ್ ಶರಮ್ ಮತ್ತು ಹುಮಾ ಖುರೇಷಿ ಅವರಿಗೆ ವಿವಿಧ ದಿನಾಂಕಗಳನ್ನ ನೀಡಿ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಮಹದೇವ್ ಬೆಟ್ಟಿಂಗ್‌ ಆ್ಯಪ್ ಬ್ಯಾಡ್ಮಿಂಟನ್, ಟೆನಿಸ್, ಫುಟ್‌ಬಾಲ್, ಕ್ರಿಕೆಟ್ ಮತ್ತು ಕಾರ್ಡ್ ಗೇಮ್‌ಗಳು ಸೇರಿದಂತೆ ಆನ್‌ಲೈನ್ ಆಟಗಳ ಸರಣಿಯಲ್ಲಿ ಅಕ್ರಮವಾಗಿ ಬಾಜಿ ಕಟ್ಟಲು ಅವಕಾಶ ಮಾಡಿಕೊಟ್ಟಿದೆ ಎಂದು ವರದಿಯಾಗಿದೆ. ಸಧ್ಯ ಈ ಆ್ಯಪ್ ಅನ್ನು ಪ್ರಚಾರ ಮಾಡಿದ್ದಕ್ಕಾಗಿ ಬಿಟೌನ್‌ ಸ್ಟಾರ್‌ಗಳು ಇಡಿ ವಿಚಾರಣೆ ಎದುರಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News