Toxic movie : ಯಶ್‌ ʼಟಾಕ್ಸಿಕ್‌ʼ ಮೂಲಕ ಸ್ಯಾಂಡಲ್‌ವುಡ್‌ಗೆ ಬಿಟೌನ್‌ ಬೇಬಿ ಕರೀನಾ ಎಂಟ್ರಿ..! 

Yash Kareena Kapoor : ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್ 2 ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ 1,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿದೆ. ಸಾಕಷ್ಟು ಗ್ಯಾಪ್‌ನ ನಂತರ ರಾಕಿಭಾಯ್‌ ʼಟಾಕ್ಸಿಕ್‌ʼ ಮೂಲಕ ತೆರೆಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಇದೀಗ ಈ ಸಿನಿಮಾಗೆ ಸಂಬಂಧ ಪಟ್ಟ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ.

Written by - Krishna N K | Last Updated : Jan 4, 2024, 03:52 PM IST
  • ರಾಕಿಂಗ್‌ ಸ್ಟಾರ್‌ ಯಶ್ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ.
  • ಸಾಕಷ್ಟು ಗ್ಯಾಪ್‌ನ ನಂತರ ರಾಕಿಭಾಯ್‌ ʼಟಾಕ್ಸಿಕ್‌ʼ ಮೂಲಕ ತೆರೆಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ.
  • 'ಟಾಕ್ಸಿಕ್' ನಲ್ಲಿ ಬಿಟೌನ್‌ ಬೇಬಿ ಕರೀನಾ ಕಪೂರ್ ನಾಯಕಿಯಾಗಿ ನಟಿಸಲು ಸಿದ್ಧರಾಗಿದ್ದಾರೆ.
Toxic movie : ಯಶ್‌ ʼಟಾಕ್ಸಿಕ್‌ʼ ಮೂಲಕ ಸ್ಯಾಂಡಲ್‌ವುಡ್‌ಗೆ ಬಿಟೌನ್‌ ಬೇಬಿ ಕರೀನಾ ಎಂಟ್ರಿ..!  title=

Kareena Kapoor in Toxic : ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್ ಅವರ ಮುಂದಿನ ಚಿತ್ರ 'ಟಾಕ್ಸಿಕ್' ನಲ್ಲಿ ಬಿಟೌನ್‌ ಬೇಬಿ ಕರೀನಾ ಕಪೂರ್ ನಾಯಕಿಯಾಗಿ ನಟಿಸಲು ಸಿದ್ಧರಾಗಿದ್ದಾರೆ. ಈ ಕುರಿತು ಸುದ್ದಿ ಕಾಡ್ಗಿಚ್ಚಿನಂತೆ ಸೋಷಿಯಲ್‌ ಮೀಡಿಯಾದಲ್ಲಿ ಹಬ್ಬುತ್ತಿದೆ. ಅಲ್ಲದೆ, ಚಿತ್ರತಂಡ ಈ ಕುರಿತು ಅವರ ಜೊತೆ ಮಾತುಕತೆ ಮಾತುಕತೆ ಪ್ರಾರಂಭಿಸಿದೆ ಎಂದು ಹೇಳಲಾಗಿದೆ.

ಹೌದು.. ಯಶ್ ಕೆಜಿಎಫ್‌ ನಂತರ ಸಾಕಷ್ಟು ಗ್ಯಾಪ್‌ ತೆಗೆದುಕೊಂಡು ಇದೀಗ 'ಟಾಕ್ಸಿಕ್' ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಬಿಗ್‌ ಬಜೆಟ್‌ನಲ್ಲಿ ಅದ್ಧೂರಿಯಾಗಿ ರೆಡಿಯಾಗುತ್ತಿರುವ ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಇದನ್ನೂ ಓದಿ:ಕ್ಯಾಪ್ಟನ್ ಮಿಲ್ಲರ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಲೈಂಗಿಕ ಕಿರುಕುಳ! ಖ್ಯಾತ ನಟಿಯಿಂದ ಧರ್ಮದೇಟು

ಇದೀಗ ಈ ಸಿನಿಮಾದ ಬಗ್ಗೆ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದ್ದು, ಮೊದಲ ಬಾರಿಗೆ ಕರೀನಾ ಟಾಕ್ಸಿಕ್‌ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ, ಆದ್ರೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ಯಶ್ ಕಳೆದ ವರ್ಷ ಟಾಕ್ಸಿಕ್ ಚಿತ್ರವನ್ನು ಘೋಷಿಸಿದರು. ಚಿತ್ರ ತಂಡ ಮತ್ತು ನಾಯಕಿ ಸೇರಿದಂತೆ ಇತರ ತಾರಾಬಳಗದ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಇದೀಗ ಈ ಸಿನಿಮಾದಲ್ಲಿ ಕರೀನಾ ಕಪೂರ್‌ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅಂದು ಕೊಂಡಂತೆ ಆದ್ರೆ ಟಾಕ್ಸಿಕ್‌ ಕರೀನಾ ಅವರ ಚೊಚ್ಚಲ ಕನ್ನಡ ಚಿತ್ರವಾಗಲಿದೆ.

ಇದನ್ನೂ ಓದಿ:BBK 10 : ಡ್ರೋನ್‌ ಪ್ರತಾಪ್‌ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..! COVID-19 ಆತಂಕ

ಫಿಲ್ಮ್‌ಫೇರ್ ಪ್ರಕಾರ, ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ಯಶ್ ಮುಂದಿನ ದಿನಗಳಲ್ಲಿ ಕರೀನಾ ಸ್ಟಾರ್‌ಕಾಸ್ಟ್‌ಗೆ ಸೇರುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಕೆಲವೇ ವಾರಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. 

ಟಾಕ್ಸಿಕ್ ಯಶ್ ಅವರ 19ನೇ ಚಿತ್ರ. ಕಳೆದ ತಿಂಗಳಷ್ಟೇ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಾಯಿತು. ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸಾಯಿ ಪಲ್ಲವಿ ಯಶ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News