ಸಲಾರ್‌ನಲ್ಲಿ ಚಂದನವನದ ಕಲಾಕರ್ಸ್‌ ಹವಾ! ಯಾರೆಲ್ಲಾ ಇದ್ದಾರೇ ಗೊತ್ತೇ?

Salaar Cast:  ಟಾಲಿವುಡ್‌ ಸ್ಟಾರ್‌ ಪ್ರಭಾಸ್‌ ಹಾಗೂ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಕಾಂಬೇದ ಸಲಾರ್‌ ಸಿನಿಮಾದಲ್ಲಿ, ಹಲವಾರು ಕನ್ನಡದ ಸುಪ್ರಸಿದ್ದ ಕಲಾವಿದರೇ ಇದ್ದಾರೆ. ಹಾಗಾದ್ರೆ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ ಯಾವೆಲ್ಲಾ ನಟರು ಇದ್ದಾರೆಂದು ತಿಳಿದುಕೊಳ್ಳೋಣ.

Written by - Zee Kannada News Desk | Last Updated : Dec 26, 2023, 04:05 PM IST
  • ಸಲಾರ್ ಸಿನಿಮಾ ಒಂದು ರೀತಿ ಕಲಾವಿದರಿಗೆ ಒಳ್ಳೆ ಅವಕಾಶ ಚಿತ್ರವೇ ಆಗಿದ್ದು, ಇದರಲ್ಲಿ ಸಾಕಷ್ಟು ಪಾತ್ರಗಳಿದ್ದರೂ ಕೂಡ ಎಲ್ಲ ಪಾತ್ರಗಳ ಮೇಲೆ ಕ್ಯಾಮೆರಾ ಪೋಕಸ್ ಆಗಿದೆ.
  • ಸಲಾರ್‌ನಲ್ಲಿ ಗುಳ್ಟು ಚಿತ್ರ ಖ್ಯಾತಿಯ ನಟ ನವೀನ್ ಶಂಕರ್ ಮೈತುಂಬ ವಿಭೂತಿ ಹಚ್ಚಿಕೊಂಡು ವಿಶೇಷವಾಗಿಯೇ ಗಮನ ಸೆಳೆಯುತ್ತಿದ್ದು, ಪಂಡಿತ್ ಅನ್ನುವ ಪಾತ್ರದ ಮೂಲಕ ಅಬ್ಬರಿಸಿದ್ದಾರೆ.
  • ಖಾನ್ಸಾರ್ ಲೋಕದ ಒಂದು ಪ್ರಾಂತ್ಯವನ್ನ ಹಂಚಿಕೊಂಡ ವ್ಯಕ್ತಿ ಪಾತ್ರವಾಗಿಯೇ ಡೈನಾಮಿಕ್‌ ಸ್ಟಾರ್‌ ದೇವರಾಜ್ ಕಾಣಿಸಿಕೊಂಡು, ಆದರೆ ಈ ಪಾತ್ರಕ್ಕೆ ಇಲ್ಲಿ ಮಾತುಗಳೇ ಇಲ್ಲ.
ಸಲಾರ್‌ನಲ್ಲಿ ಚಂದನವನದ ಕಲಾಕರ್ಸ್‌ ಹವಾ! ಯಾರೆಲ್ಲಾ ಇದ್ದಾರೇ ಗೊತ್ತೇ?  title=

Sandalwood Actors In Salaar: ಟಾಲಿವುಡ್‌ನ  ಸ್ಟಾರ್‌ ನಟ ಪ್ರಭಾಸ್‌ ನಟನೆಯ ಸಲಾರ್ ಸಿನಿಮಾ ಸಖತ್‌ ಸದ್ದು ಮಾಡುತ್ತಿದೆ. ಇದು ಮೂಲತಃ ತೆಲುಗು ಸಿನಿಮಾ ಆದರೂ, ಈ ಚಿತ್ರದ ಯಶಸ್ಸಿನ ಹಿಂದೆ ಕನ್ನಡ ಟೆಕ್ನಿಷನ್‌ಗಳ ಕೈಚಳವಿದೆ. ಸಲಾರ್‌ ಸಿನಿಮಾ ಸೆಟ್ ನಿರ್ಮಿಸುವ ಕೆಲಸದಿಂದ ಹಿಡಿದು ಕ್ಯಾಮರಾ ವರ್ಕ್ ವರೆಗೂ ಕರುನಾಡ ಕಲಾವಿದರಿದ್ದಾರೆ. ಸಲಾರ್‌ ಸಿನಿಮಾದ ಡೈರೆಕ್ಟರ್ ಪ್ರಶಾಂತ್ ನೀಲ್ ಕನ್ನಡದವರೇ, ಚಿತ್ರ ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್‌ ಕೂಡ ಕೂಡ ಕನ್ನಡ ನೆಲದ ಸಂಸ್ಥೆಯೇ ಆಗಿದೆ.

ಸಲಾರ್ ಸಿನಿಮಾದಲ್ಲಿ ತೆರೆ ಮೇಲೆ ಪ್ರಭಾಸ್‌ ಮಿಂಚಿದ್ದರೂ, ಟಿಕ್ನಿಷಿಯನ್‌ಗಳ ಪಾತ್ರ ಬಹಳ ಪ್ರಮುಖವಾಗಿದೆ. ಸಲಾರ್ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳಿದ್ದರೂ ಎಲ್ಲ ಪಾತ್ರಗಳ ಮೇಲೆ ಕ್ಯಾಮರಾ ಫೋಕಸ್ ಆಗಿದೆ. ನಿರ್ದೇಶಕ ಪ್ರಶಾಂತ್‌ ನೀಲ್ ಕಲ್ಪನೆಯಂತೆಯೇ ಕ್ಯಾಮರಾಮನ್ ಭುವನ್ ಗೌಡ ಎಲ್ಲ ಪಾತ್ರಗಳನ್ನೂ ಸೆರೆಹಿಡಿದಿದ್ದಾರೆ. ಛಾಯಾಗ್ರಾಹಕ ಭುವನ್ ಗೌಡ ಸಹ ಕನ್ನಡದವರೇ ಆಗಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಬರುವ ಭಜರಂಗಿ ಲೋಕಿ ಪಾತ್ರ ಸಹ ಬಹಳ ಇಂಟ್ರಸ್ಟಿಂಗ್ ಆಗಿದೆ. ಇಲ್ಲಿ ಈ ಪಾತ್ರಕ್ಕೆ ಯಾವುದೇ ಡೈಲಾಗ್‌ ಇಲ್ವೇ ಇಲ್ಲ. ಹಾವ-ಭಾವದ ಮೂಲಕವೇ ಪಾತ್ರಕ್ಕೆ ಜೀವ ತುಂಬಲಾಗಿದೆ.

ಇದನ್ನೂ ಓದಿ: "ಸಲಾರ್‌ ನೋಡಿ ಹೊಟ್ಟೆಯಲ್ಲಿರುವ ಮಗುನೂ ಎಂಜಾಯ್‌ ಮಾಡ್ತು": ಗರ್ಭಿಣಿಯ ರಿವ್ಯೂ ವೈರಲ್!‌

ಸಲಾರ್‌ನಲ್ಲಿ ಗುಳ್ಟು ಚಿತ್ರ ಖ್ಯಾತಿಯ ನಟ ನವೀನ್ ಶಂಕರ್  ಮೈತುಂಬ ವಿಭೂತಿ ಹಚ್ಚಿಕೊಂಡು ವಿಶೇಷವಾಗಿಯೇ  ಗಮನ ಸೆಳೆಯುತ್ತಿದ್ದು, ಪಂಡಿತ್ ಅನ್ನುವ ಪಾತ್ರದ ಮೂಲಕ ಅಬ್ಬರಿಸುತ್ತಾ, ಖಾನ್ಸಾರ್‌ ನಲ್ಲಿರೊ ಹಲವು ಗುಂಪುಗಳಲ್ಲಿ ಇವರು ಸಹ ಮಿಂಚಿದ್ದಾರೆ. ಭಜರಂಗಿ ಚಿತ್ರದ ಮಧು ಗುರುಸ್ವಾಮಿ ಪಾತ್ರಕ್ಕೂ ಇಲ್ಲಿ ಮಹತ್ವವಿದ್ದು, ಚಿತ್ರದ ಮೊದಲಾರ್ಧದಲ್ಲಿಯೇ ಈ ಪಾತ್ರ ಬರುತ್ತಿದ್ದು, ಇಡೀ ಸಿನಿಮಾದಲ್ಲೂ ಈ ಒಂದು ಪಾತ್ರ ಹೆಚ್ಚು ಕಾಣಿಸುತ್ತಿದ್ದು, ಆದರೆ ಹೆಚ್ಚಾಗಿ ಪೋನ್‌ನಲ್ಲಿಯೇ ಅನ್ನೋದು ಇಲ್ಲಿ ಗಮನಿಸೋ ವಿಷಯವೇ ಆಗಿದೆ.

ಖಾನ್ಸಾರ್ ಲೋಕದ ಒಂದು ಪ್ರಾಂತ್ಯವನ್ನ ಹಂಚಿಕೊಂಡ ವ್ಯಕ್ತಿ ಪಾತ್ರವಾಗಿಯೇ ಡೈನಾಮಿಕ್‌ ಸ್ಟಾರ್‌ ದೇವರಾಜ್ ಕಾಣಿಸಿಕೊಂಡು, ಆದರೆ ಈ ಪಾತ್ರಕ್ಕೆ ಇಲ್ಲಿ ಮಾತುಗಳೇ ಇಲ್ಲ. ಬರೀ ಎಕ್ಸಪ್ರೆಷನ್‌ಗಳೇ ಜೊತೆಗೆ ವಿಚಿತ್ರ ಮ್ಯಾನರಿಸಂ ಇರೋದು ಈ ಪಾತ್ರದ ವಿಶೇಷ ಅಂತಲೇ ಹೇಳಬಹುದು ನೋಡಿ. ಕೆಜಿಎಫ್‌ನ ಗರುಡ ರಾಮ್ ಒಳ್ಳೆ ಪಾತ್ರವನ್ನೆ ಮಾಡಿದ್ದರೂ, ಇಲ್ಲಿ ಗರುಡನ ಯಾವ ಛಾಯೆ ಇಲ್ಲಿ ಕಾಣಿಸೋದೇ ಇಲ್ಲ. ರುದ್ರ ರಾಜ ಮನ್ನಾರ್ ಆಗಿಯೇ ಕಾಣಿಸಿಕೊಂಡು, ಚಿತ್ರ ತುಂಬೆಲ್ಲ ಮಾತುಗಳ ಮೂಲಕ ಅಬ್ಬರಿಸಿದರೂ ಸಹ, ಇಲ್ಲಿ ಆ್ಯಕ್ಷನ್‌ಗಳೇನೂ ಇಲ್ಲ ಅನ್ನೋದು ಕೂಡ ಒಂದು ವಿಶೇಷವಾಗಿದೆ.

ಇದನ್ನೂ ಓದಿ: ಸಲಾರ್‌ನಲ್ಲಿ ಯಶ್‌, ಐಟಂ ಸಾಂಗ್‌ನಲ್ಲಿ ಸಿಮ್ರನ್ ಕೌರ್, ಉಗ್ರಂ ರಿಮೇಕ್‌: ಗಾಸಿಪ್ಸ್‌ ನಿಜವಾಗಿದೆಷ್ಟು?

ಹಾಗೆ ಕನ್ನಡದ ಮತ್ತೊಬ್ಬ ನಟ ಪ್ರಮೋದ್ ಪಂಜು ಪಾತ್ರಕ್ಕೂ ಮಹತ್ವ ಕೊಡಲಾಗಿದ್ದು, ಈ ನಟ ಪೃಥ್ವಿರಾಜ್ ಸುಕುಮಾರ್‌ನ ನಿರ್ವಹಿಸಿರೋ ವರದರಾಜ್ ಮನ್ನಾರ್ ಸಹೋದರನ ಪಾತ್ರದ ಮೂಲಕ ಮಿಂಚಿದ್ದಾರೆ. ಆಕ್ರೋಶವನ್ನ ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸುತ್ತಾ, ಒಂದು ರೀತಿ ಸೆಕೆಂಡ್ ಹಾಫ್‌ನಲ್ಲಿ ಪೂರ್ತಿಯಾಗಿಯೇ ಇದ್ದಾರೆ. ಒಟ್ಟಾರೆ ಹೇಳೋದಾದ್ರೆ ಸಲಾರ್ ಕನ್ನಡಿಗರಿಗೂ ಮಹತ್ವ ಕೊಟ್ಟ ಟಾಲಿವುಡ್‌ ಸಿನಿಮಾ ಅಂತಲೇ ಹೇಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News