'ಮೆಂಟಲ್ ಹೈ ಕ್ಯಾ' ಅಂತಿರೋ ಕಂಗನಾ ರಾವತ್ ನಿಜವಾಗ್ಲೂ ಮೆಂಟಲ್ ಆಗಿದಾಳಾ?

'ಮೆಂಟಲ್ ಹೈ ಕ್ಯಾ' ಚಿತ್ರದಲ್ಲಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳನ್ನು ಮೆಂಟಲ್ ಮಾಡಲು ರೆಡಿಯಾಗಿದ್ದಾರೆ.

Last Updated : Mar 10, 2018, 10:21 AM IST
'ಮೆಂಟಲ್ ಹೈ ಕ್ಯಾ' ಅಂತಿರೋ ಕಂಗನಾ ರಾವತ್ ನಿಜವಾಗ್ಲೂ ಮೆಂಟಲ್ ಆಗಿದಾಳಾ? title=

ಸಖತ್ ಬೋಲ್ಡ್ ಅಂಡ್ ಬ್ಯುಟಿಫುಲ್ ಬಾಲಿವುಡ್ ನಟಿ ಕಂಗನಾ ರಾವತ್ ಹೆಸರು ಕೇಳ್ತಿದ್ದ ಹಾಗೇ ಅಭಿಮಾನಿಗಳು, ಪಡ್ಡೆಹುಡುಗರು ಹುಚ್ಚರಾಗ್ತಾರೆ. ಯಾಕಂದ್ರೆ ಪಾತ್ರಗಳಿಗೆ ತಕ್ಕಂತೆ ಹಾಟ್ ಅಂಡ್ ಗ್ಲಾಮರಸ್ ಆಗಿ ಅಭಿನಯಿಸುವುದರಲ್ಲಿ ಕಂಗನಾ ಎತ್ತಿದ ಕೈ. 

ಈ ಹಿಂದೆ ಕೂಡ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದ ಕಂಗನಾ, ಇದೀಗ ತಮ್ಮ 'ಮೆಂಟಲ್ ಹೈ ಕ್ಯಾ' ಚಿತ್ರದಲ್ಲಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳನ್ನು ಮೆಂಟಲ್ ಮಾಡಲು ರೆಡಿಯಾಗಿದ್ದಾರೆ. ಅಷ್ಟೇ ಅಲ್ಲ, ಟಾಪ್ ಲೆಸ್ ಆಗಿ ಬಾತ್ ಟಬ್'ನಲ್ಲಿ ಕೂತು ತನ್ನ ಗುಂಗುರು ಕೂದಲನ್ನು ಮುಂದೆ ಬಿಟ್ಟುಕೊಂಡು, ಲಿಪ್​ಸ್ಟಿಕ್ ಹಚ್ಚಿಕೊಳ್ಳುತ್ತಾ ಮಾದಕವಾಗಿ ಕೊಟ್ಟಿರೋ ಪೋಸ್ ಈಗ ಸಖತ್ ವೈರಲ್ ಆಗಿದೆ. ಪಡ್ಡೆ ಹುಡುಗರಂತೂ ಈ ಫೋಟೋ ನೋಡಿ ಫುಲ್ ಫಿದಾ ಆಗ್ಬಿಟ್ಟಿದ್ದಾರೆ. 

ಮೆಟಲ್ ಹೈ ಕ್ಯಾ ಚಿತ್ರದ ನಾಯಕ ನಟನಾಗಿ ಅಭಿನಯಿಸಿರುವ ರಾಜ್​ಕುಮಾರ್ ರಾವ್ ಕೂಡ ಒಂದು ಕೈನಲ್ಲಿ ಸೇಬು ಹಿಡಿದುಕೊಂಡು ಚಾಕುವಿನಲ್ಲಿ ಕತ್ತರಿಸಿ ಅದರಿಂದ ರಕ್ತ ಬರುತ್ತಿರುವ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಎರಡೂ ಚಿತ್ರಗಳೂ ಸಖತ್ ವೈರಲ್ ಆಗಿವೆ. 

ರಾಷ್ಟ್ರೀಯ ಪ್ರಶಸ್ತಿ-ವಿಜೇತ ಪ್ರಕಾಶ್ ಕೋವೆಲಮುಡಿ ಅವರು ನಿರ್ದೇಶಿಸಿರುವ ಮೆಂಟಲ್ ಹೈ ಕ್ಯಾ ಚಿತ್ರವನ್ನು ಏಕ್ತಾ ಕಪೂರ್ ಅವರ ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಶೈಲೇಶ್ ಆರ್ ಸಿಂಗ್ ಅವರ ಕರ್ಮ ಮೀಡಿಯಾ ನಿರ್ಮಿಸಿದೆ. 

Trending News