Vikram Success: ನಟ ಸೂರ್ಯನಿಗೆ ರೋಲೆಕ್ಸ್ ವಾಚ್ ಗಿಫ್ಟ್ ನೀಡಿದ ಕಮಲ್ ಹಾಸನ್!

‘ವಿಕ್ರಮ್’ ಚಿತ್ರದ ಯಶಸ್ಸಿನ ಬೆನ್ನಲ್ಲಿಯೇ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ಕಮಲ್ ಹಾಸನ್ ದುಬಾರಿ ಮೊತ್ತದ ಲೆಕ್ಸಾಸ್ ಕಾರನ್ನು ಗಿಫ್ಟ್ ಆಗಿ ನೀಡಿದ್ದರು.

Written by - Puttaraj K Alur | Last Updated : Jun 8, 2022, 04:41 PM IST
  • ‘ವಿಕ್ರಮ್’ ಚಿತ್ರದ ಯಶಸ್ಸಿನ ಬೆನ್ನಲ್ಲಿಯೇ ಉಡುಗೊರೆ ಅಮಲಿನಲ್ಲಿ ನಟ ಕಮಲ್ ಹಾಸನ್
  • ನಿರ್ದೇಶಕರಿಗೆ ದುಬಾರಿ ಬೆಲೆಯ ಕಾರು, 13 ಮಂದಿ ಸಹಾಯಕ ನಿರ್ದೇಶಕರಿಗೆ ಬೈಕ್ ಗಿಫ್ಟ್
  • ಸ್ಟಾರ್ ನಟ ಸೂರ್ಯನಿಗೆ ದುಬಾರಿಯ ಬೆಲೆಯ ರೋಲೆಕ್ಸ್‌ ವಾಚ್ ಉಡುಗೊರೆ ನೀಡಿದ ಹಿರಿಯ ನಟ
Vikram Success: ನಟ ಸೂರ್ಯನಿಗೆ ರೋಲೆಕ್ಸ್ ವಾಚ್ ಗಿಫ್ಟ್ ನೀಡಿದ ಕಮಲ್ ಹಾಸನ್! title=
ಉಡುಗೊರೆ ಅಮಲಿನಲ್ಲಿ ನಟ ಕಮಲ್ ಹಾಸನ್

ನವದೆಹಲಿ: ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಕಮಾಲ್ ಮಾಡಿದೆ. ರಿಲೀಸ್ ಆದ ಕೇವಲ 4 ದಿನಗಳಲ್ಲಿಯೇ ಈ ಚಿತ್ರ 200 ಕೋಟಿ ರೂ. ಗಳಿಸಿದೆ. ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ಕಮಲ್ ಹಾಸನ್ ಅವರು ಸದ್ಯ ಉಡುಗೊರೆಯ ಅಮಲಿನಲ್ಲಿದ್ದಾರೆ.   

ಹೌದು, ‘ವಿಕ್ರಮ್’ ಚಿತ್ರದ ಯಶಸ್ಸಿನ ಬೆನ್ನಲ್ಲಿಯೇ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ದುಬಾರಿ ಮೊತ್ತದ ಲೆಕ್ಸಾಸ್ ಕಾರನ್ನು ಗಿಫ್ಟ್ ಆಗಿ ನೀಡಿದ್ದರು. ಇದಲ್ಲದೆ ತಮ್ಮ ಚಿತ್ರದ ಯಶಸ್ಸಿಗೆ ಶ‍್ರಮಿಸಿದ 13 ಮಂದಿ ಸಹಾಯಕ ನಿರ್ದೇಶಕರಿಗೂ ಹೊಚ್ಚ ಹೊಸ TVS Apache RTR 160 ಬೈಕ್‍ನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ವಿಕ್ರಂನಲ್ಲಿ ವಿಶೇಷ ಪಾತ್ರ ಮಾಡಿರುವ ಸ್ಟಾರ್ ನಟ ಸೂರ್ಯನಿಗೆ ದುಬಾರಿ ಮೌಲ್ಯದ ಗಿಫ್ಟ್ ನೀಡಿದ್ದಾರೆ.

ಇದನ್ನೂ ಓದಿ: ರಜನಿಕಾಂತ್‌ ಜೊತೆ ತೆರೆ ಹಂಚಿಕೊಳ್ಳಲಿರುವ ಶಿವರಾಜ್‌ಕುಮಾರ್! ಯಾವ ಸಿನಿಮಾ? ಇಲ್ಲಿದೆ ನೋಡಿ...

‘ವಿಕ್ರಮ್’ನಲ್ಲಿ ನಟ ಸೂರ್ಯ ಬರೋದು ಕೇವಲ ಐದೇ ನಿಮಿಷ.. ಅದು ಕ್ಲೈಮ್ಯಾಕ್ಸ್‌ನಲ್ಲಿ. ಆದರೂ ಅವರ ಪಾತ್ರಕ್ಕೆ ದೊಡ್ಡ ತೂಕವಿದೆ. ಹೀಗಾಗಿಯೇ ಅವರಿಗೆ ಕಮಲ್ ಹಾಸನ್ ಅವರು ದುಬಾರಿ ಮೌಲ್ಯದ ರೋಲೆಕ್ಸ್ ವಾಚ್‍ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ತಮಗೆ ಸಿಕ್ಕ ದುಬಾರಿ ಗಿಫ್ಟ್ ನಿಂದ ಸೂರ್ಯ ಖುಷಿಯಾಗಿದ್ದಾರೆ. ತಮಗೆ ಕಮಲ್ ಹಾಸನ್ ನೀಡುತ್ತಿರುವ ಗಿಫ್ಟ್ ನ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಇಂತಹ ಕ್ಷಣವು ಜೀವನವನ್ನು ಮತ್ತಷ್ಟು ಸುಂದರಗೊಳಿಸುತ್ತದೆ! ನಿಮ್ಮ #ರೋಲೆಕ್ಸ್‌ಗೆ ಧನ್ಯವಾದಗಳು ಅಣ್ಣಾ!' ಎಂಬ ಕ್ಯಾಪ್ಶನ್ ಜೊತೆಗೆ ಕಮಲ್ ಹಾಸನ್‍ರನ್ನು ಟ್ಯಾಗ್ ಮಾಡಿ ಸೂರ್ಯ ಪೋಸ್ಟ್ ಹಂಚಿಕೊಂಡಿದ್ದಾರೆ. ಬಿಡುಗಡೆಯಾದ ಕೇವಲ 2 ದಿನಗಳಲ್ಲಿ ‘ವಿಕ್ರಮ್’ ಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶೇಷ ಅತಿಥಿ ಪಾತ್ರದಲ್ಲಿ ಸೂರ್ಯ ಮಿಂಚಿದ್ದಾರೆ.  

ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ಪುತ್ರ ಆವ್ಯನ್... ಈ ಹೆಸರಿನ ಅರ್ಥವೇನು ಗೊತ್ತೇ!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News