ಶಾರುಖ್‌ ಪಠಾನ್‌ ಸಿನಿಮಾ ಕಲೆಕ್ಷನ್‌ ಬಗ್ಗೆ ಕಾಜೋಲ್‌ ವ್ಯಂಗ್ಯ..1000 ಕೋಟಿ ರೂ. ಗಳಿಕೆ ಮಾಡಿದ್ದು ಸುಳ್ಳಾ..?

Kajol on Patan film collection : ಕಿಂಗ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ ಕಲೆಕ್ಷನ್‌ ಬಗ್ಗೆ ನಟಿ ಕಾಜೋಲ್‌ ಮಾತು ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು, ಈ ಕಾಮೆಂಟ್‌ಗೆ ಶಾರುಖ್‌ ಖಾನ್‌ ಫ್ಯಾನ್ಸ್‌ ಗರಂ ಆಗಿದ್ದಾರೆ.  

Written by - Savita M B | Last Updated : Jul 17, 2023, 01:04 PM IST
  • ಬಾಲಿವುಡ್‌ ನಟಿ ಕಾಜೋಲ್‌ ಹಾಗೂ ಶಾರುಖ್‌ ಖಾನ್‌ ಎಲ್ಲರ ಆಲ್‌ ಟ್ಫೈಮ್‌ ಫೇವರೆಟ್‌ ಜೋಡಿ
  • ಇದೀಗ ನಟಿ ಕಾಜೋಲ್‌ ಹೆಚ್ಚಾಗಿ ವೆಬ್‌ಸ್ಟೋರಿಗಳಲ್ಲಿ ನಟಿಸುತ್ತಿದ್ದಾರೆ
  • ನಟಿ ಪಠಾಣ್‌ ಸಿನಿಮಾದ ಕಲೆಕ್ಷನ್‌ ಬಗ್ಗೆ ನಟಿ ಅಪಹಾಸ್ಯ ಮಾಡಿದ್ದಾರೆ
ಶಾರುಖ್‌ ಪಠಾನ್‌ ಸಿನಿಮಾ ಕಲೆಕ್ಷನ್‌ ಬಗ್ಗೆ ಕಾಜೋಲ್‌ ವ್ಯಂಗ್ಯ..1000 ಕೋಟಿ ರೂ. ಗಳಿಕೆ ಮಾಡಿದ್ದು ಸುಳ್ಳಾ..?  title=

Patan Collection : ಬಾಲಿವುಡ್‌ ನಟಿ ಕಾಜೋಲ್‌ ಹಾಗೂ ಶಾರುಖ್‌ ಖಾನ್‌ ಎಲ್ಲರ ಆಲ್‌ ಟ್ಫೈಮ್‌ ಫೇವರೆಟ್‌ ಜೋಡಿ. ಇದೀಗ ನಟಿ ಕಾಜೋಲ್‌ ಹೆಚ್ಚಾಗಿ ವೆಬ್‌ಸ್ಟೋರಿಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರು ತಮನ್ನಾ ಹಾಗೂ ವಿಜಯ್‌ ವರ್ಮಾ ಅವರ ಲಸ್ಟ್‌ ಸ್ಟೋರಿಸ್‌ 2 ಸಿರೀಸ್‌ನಲ್ಲಿ ನಟಿಸಿ ಭಾರೀ ಸುದ್ದಿಯಲ್ಲಿದ್ದಾರೆ. 

ಇನ್ನು ಪಠಾಣ್‌ ಸಿನಿಮಾ ಬಾಲಿವುಡ್‌ನಲ್ಲಿ ದೂಳ್‌ ಎಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ರಿಲೀಸ್‌ಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ ಈ ಸಿನಿಮಾ ತೆರೆ ಮೇಲೆ ಅಪ್ಪಳಿಸಿ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ನಟಿ ಕಾಜೋಲ್‌ ಬಾಲಿವುಡ್‌ ಬಾಕ್ಸಾಫಿಸ್‌ ಕೊಳ್ಳೆಹೊಡೆದ ಪಠಾಣ್‌ ಸಿನಿಮಾದ ಕಲೆಕ್ಷನ್‌ ಬಗ್ಗೆ ನಟಿ ಅಪಹಾಸ್ಯ ಮಾಡಿದ್ದಾರೆ. ಅವರ ಕಾಮೆಂಟ್‌ಗೆ ಅಭಿಮಾನಿಗಳು ಹಾಗೂ ಚಿತ್ರತಂಡ ಗರಂ ಆಗಿದೆ.

ಇದನ್ನೂ ಓದಿ-Monalisa : ಬಿಕಿನಿಯಲ್ಲಿ ಮಿಂಚಿದ ನಟಿ ಮೋನಾಲಿಸಾ..! ಫೋಟೋಸ್‌ ನೋಡಿ

ಕಾಜೋಲ್‌ ನಟನೆಯ ʼದಿ ಟ್ರಯಲ್‌ ವೆಬ್‌ ಸಿರೀಸ್‌ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಇದರ ಪ್ರಚಾರಕ್ಕಾಗಿ ಸಂದರ್ಶನವೊಂದರಲ್ಲಿ ಭಾಗಿಯಾದ ವೇಳೆ ನಟಿಗೆ ʼನೀವು ಶಾರುಖ್‌ ಖಾನ್‌ಗೆ ಏನಾದರೂ ಪ್ರಶ್ನೆ ಕೇಳಬೇಕಾ.?ʼ ಎಂದು ಸಂದರ್ಶಕ ಕೇಳಿದ್ದಾರೆ. ಆಗ ಕಾಜೋಲ್‌ ಏನಪ್ಪಾ ಕೇಳೋದು? ಶಾರುಖ್‌ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಬಳಿಕ ನಟಿ ಏನನ್ನೋ ಯೋಚಿಸಿಕೊಂಡು ʼನಿಜಕ್ಕೂ ಪಠಾಣ್‌ ಸಿನಿಮಾ ಎಷ್ಟು ಕಲೆಕ್ಷನ್‌ ಮಾಡಿತ್ತು..? ಎಂದು ಪ್ರಶ್ನಿಸಿದ್ದಾರೆ. ನಂತರ ಲೇವಡಿ ಮಾಡಿ ನಕ್ಕಿದ್ದಾರೆ. 

ಸಿನಿಮಾ ಗಳಿಕೆ ಬಗ್ಗೆ ಕಾಜೋಲ್‌ ಈ ರೀತಿ ವ್ಯಂಗ್ಯ ಮಾಡಿದ್ದಕ್ಕೆ ಶಾರುಖ್‌ ಅಭಿಮಾನಿಗಳು ಬೇಸರವ್ಯಕ್ತಪಡಿಸಿದ್ದಾರೆ. "ನಿಜಕ್ಕೂ ಪಠಾಣ್‌ ಸಿನಿಮಾ ಎಷ್ಟು ಕಲೆಕ್ಷನ್‌ ಮಾಡಿತು..?" ಅಂದರೆ ಅದರ ಅರ್ಥ ಅಷ್ಟು ಕಲೆಕ್ಷನ್‌ ಮಾಡಿಲ್ಲ ಅಂತ ಅರ್ಥಾನಾ..? ಅಥಚವಾ ಹೆಚ್ಚು ಗಳಿಸಿ ಸುಳ್ಳು ಹೇಳಿದ್ರು ಅಂತಾನಾ..? ಎಂದು ಕೆಲವರು ಚರ್ಚಿಸುತ್ತಿದ್ದರೆ, ಇನ್ನು ಕೆಲವರು ತಮ್ಮ ಸ್ನೇಹಿತನ ಸಿನಿಮಾ ಬಗ್ಗೆ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-ಮದುವೆ ಸಂಭ್ರಮದ ಮಧ್ಯೆಯೇ ಈ ನಿರ್ಧಾರ ತೆಗೆದುಕೊಂಡ ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ! ಕಾರಣ ?

ಇನ್ನು ಈ ವಿಚಾರವಾಗಿ ಸ್ವಯಂ ಘೋಷಿತ ವಿಮರ್ಶಕ ಕಮಾಲ್‌ ಆರ್‌. ಖಾನ್‌ ಟ್ವೀಟ್‌ ಮಾಡಿ ʼಪಠಾಣ್‌ ಸಿನಿಮಾ ಕಲೆಕ್ಷನ್‌ ಕುರಿತು ಲೇವಡಿ ಮಾಡಿದ್ದಾರೆ ಶಾರುಖ್‌ ಸುಳ್ಳು ಲೆಕ್ಕ ಕೊಟ್ಟಿದ್ದಾರೆ ಎಂದು ಕಾಜೋಲ್‌ ಜೊತೆ ಮನೇಲಿ ಅಜಯ್‌ ದೇವಗನ್‌ ಚರ್ಚೆ ಮಾಡಿರಬೇಕು ಅದಕ್ಕೆ ಆಕೆ ಹೀಗೆ ಮಾತನಾಡಿದ್ದಾಳೆ ಇದೇ ಬಾಲಿವುಡ್‌ನ ನಿಜವಾದ ಮುಖʼ ಎಂದು ಬರೆದುಕೊಂಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News