Alia Bhatt: ಗಂಗೂಬಾಯಿ ಆಲಿಯಾ ಭಟ್‌‌ಗೆ ಒಲಿದ  ಫಿಲ್ಮ್‌ಫೇರ್ ಪ್ರಶಸ್ತಿ

Filmfare Awards 2023:  ಬಾಲಿವುಡ್‌ನಲ್ಲಿ ಗುರುವಾರ ರಾತ್ರಿ  68ನೇ ಆವೃತ್ತಿಯ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ ನಡೆದಿದೆ. ಈ ಸಂದರ್ಭದಲ್ಲಿ ಅನೇಕ ಚಿತ್ರಗಳಿಗೆ ಅತ್ಯುತ್ತಮ ಸಿನಿಮಾ, ಸೇರಿದಂತೆ ಉತ್ತಮ ನಟ ನಟಿ ಪ್ರಶಸ್ತಿ ಲಭಿಸಿದೆ.

Written by - Zee Kannada News Desk | Last Updated : Apr 28, 2023, 04:03 PM IST
  • ಗಂಗೂಬಾಯಿ ಆಲಿಯಾ ಭಟ್‌‌ಗೆ ಒಲಿದ ಫಿಲ್ಮ್‌ಫೇರ್ ಪ್ರಶಸ್ತಿ
  • ಮುಂಬೈಯಲ್ಲಿ ನಡೆದ 68ನೇ ಆವೃತ್ತಿಯ ಫಿಲ್ಮ್‌ಫೇರ್ ಪ್ರಶಸ್ತಿ
  • ಗಂಗೂಬಾಯಿ ಸೇರಿದಂತೆ ಅನೇಕ ಸಿನಿಮಾ, ನಟ ನಟಿಯರಿಗೆ ಫಿಲ್ಮ್‌ಫೇರ್
Alia Bhatt: ಗಂಗೂಬಾಯಿ ಆಲಿಯಾ ಭಟ್‌‌ಗೆ ಒಲಿದ  ಫಿಲ್ಮ್‌ಫೇರ್ ಪ್ರಶಸ್ತಿ title=

ಮುಂಬೈ: ಯಾವುದೇ ಸಿನಿಮಾ ಮಾಡಿದರೂ ಆ ಚಿತ್ರ ಎಷ್ಟು ಹಣ ಗಳಿಸಿದರೂ ಕೊನೆಗೂ ಶ್ರಮದ ಪ್ರತಿಫಲವಾಗಿ ಪ್ರಶಸ್ತಿ ಸಿಕ್ಕರೆ ಹಣಗಳಿಕೆಗಿಂತ ಹೆಚ್ಚಿನ ಸಂಸತಸಕ್ಕೆ ಕಾರಣವಾಗುತ್ತದೆ. ಕಳೆದ ಬಾರಿ ಅನೇಕ ಸಿನಿಮಾಗಳು ಹೊರ ಬಿದ್ದವು. ಕೆಲವು ಮನೋರಂಜನಾತ್ಮಕವಾಗಿದ್ದರೇ ಇನ್ನು ಕೆಲವು ಸಿನಿಮಾ ಕಾದಂಬರಿ ಒಳಗೊಂಡ ಜೀವನಕ್ಕೆ ಹತ್ತಿರವಾದ ಕಥೆಗಳು ಸಿನಿಮಾವಾಗಿ ಜನರ ಮನಸ್ಸಿನಲ್ಲಿ ಬೇರೂರಿದೆ. 

ಸದ್ಯ ಬಾಲಿವುಡ್‌ನಲ್ಲಿ ಗುರುವಾರ ರಾತ್ರಿ  68ನೇ ಆವೃತ್ತಿಯ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ ನಡೆದಿದೆ. ಈ ಸಂದರ್ಭದಲ್ಲಿ ಅನೇಕ ಚಿತ್ರಗಳಿಗೆ ಅತ್ಯುತ್ತಮ ಸಿನಿಮಾ, ಸೇರಿದಂತೆ ಉತ್ತಮ ನಟ ನಟಿ ಪ್ರಶಸ್ತಿ ಲಭಿಸಿದೆ. ಈ ಪಟ್ಟಿಯಲ್ಲಿ ಎಲ್ಲರ ಮನಗೆದ್ದ ಬಾಲಿವುಡ್‌ ಮಾತ್ರವಲ್ಲದೇ ಪರ ಭಾಷೆ ಸಿನಿ ಪ್ರಿಯಯರ ಮನ ಗೆದ್ದಿರುವ 'ಗಂಗೂಬಾಯಿ  ಸಿನಿಮಾಕ್ಕೆ ಒಲಿದೆ. 

ಅಲಿಯಾ ಭಟ್‌ ನಟನೆಯ ಗಂಗೂಬಾಯಿ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ. ಬಾಲಿವುಡ್‌ ಅನೇಕ ಸಿನಿತಾರೆಯರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಆಲಿಯಾ ಭಟ್‌ ತನ್ನ ವಯಸ್ಸಿಗೂ ಮೀರಿದ ಗಂಗೂಬಾಯಿ ಪಾತ್ರ ಮಾಡಿ ಎಲ್ಲರ ಮನಗೆದ್ದಿದ್ದರು.

ಇದನ್ನೂ ಓದಿ: Gurudev Hoysala Movie: ಡಾಲಿ ಧನಂಜಯ್‌ ಅಭಿಮಾನಿಗಳಿಗೆ ಮತ್ತೊಂದು ಗುಡ್‌ ನ್ಯೂಸ್ !‌ ಅದೇನು ಅಂತೀರಾ ಹಾಗಿದ್ದರೆ ಈ ಸ್ಟೋರಿ ಓದಿ..  

ಗಂಗೂಬಾಯಿ ಚಿತ್ರದ ಒಂದಿಷ್ಟು  ಹಿನ್ನಲೆ 
ಗುಜರಾತ್‌ನ ಕಾಠಿಯಾವಾಡಿ ಗ್ರಾಮದಲ್ಲಿ ಗಂಗಾ ಹರ್ಜೀವನದಾಸ್ ಜನಿಸಿದರು. ಬಳಿಕ ಗಂಗೂಬಾಯಿಯನ್ನು ಮೋಸಗೊಳಿಸಿ ವೇಶ್ಯಾವಾಟಿಕೆ ಧಂದೆಗೆ ತಳ್ಳಿದ್ದಿದ್ದರು. ಲೈಂಗಿಕತೆಯ ಬಗ್ಗೆ ಅರಿವೇ ಇರದ ಗಂಗಾಳನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದರು. ಬಳಿಕ ಆಕೆ ಅನೇಕ ಬಾರಿ ಅತ್ಯಾಚಾರಕ್ಕೆ ಒಳಗಾಗುವಳು . ಲೈಂಗಿಕತೆಯನ್ನು  ನೋವುನ್ನು ಅನುಭವಿಸುತ್ತಿದ್ದ ಗಂಗೂ ವೇಶ್ಯಾವಾಟಿಕೆ ಒಳಗಾಗುವ ಹೆಣ್ಣು ಮಕ್ಕಳನ್ನು ರಕ್ಷಿಸುತ್ತಿದ್ದಳು. ತಾನೂ ಅನುಭವಿಸಿದ ನೋವುವನ್ನು ಬೇರಾರು ಅನುಭವಿಸಬಾರದೆಂದು ಅದರ ವಿರುದ್ಧ ಹೋರಾಡಿ ಎಲ್ಲಾ ಹೆಣ್ಣು ಮಕ್ಕಳ ಆರಾಧಾಕಿಯಾಗಿ ಮೆರೆದಳು. 

ಇದನ್ನೂ ಓದಿ:Samantha Birthday: ಟಾಲಿವುಡ್‌ ಹಾಟ್‌ ಬೆಡಗಿ ಸಮಂತಾಗೆ ಇಂದು ಎಷ್ಟನೇ ವರ್ಷದ ಹುಟ್ಟು ಹಬ್ಬ ಗೊತ್ತಾ?

ಗಂಗೂಬಾಯಿ ಸಿನಿಮಾ ಹೊರತು ಪಡಿಸಿ, ಇನ್ನು ಹಲವು ಸನಿಮಾಗಳಿಗೆ ಪ್ರಶಸ್ತಿ ಒದಗಿದೆ. 
ಅತ್ಯುತ್ತಮ ಸಿನಿಮಾ- ಗಂಗೂಬಾಯಿ ಕಥಿಯಾವಾಡಿ
ಅತ್ಯುತ್ತಮ ನಟ- ರಾಜ್‌ಕುಮಾರ್ ರಾವ್ (ಬಧಾಯಿ ದೋ)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ಬಧಾಯಿ ದೋ (ನಿರ್ದೇಶನ: ಹರ್ಷವರ್ಧನ್‌ ಕುಲಕರ್ಣಿ)
ಅತ್ಯುತ್ತಮ ನಟ (ಕ್ರಿಟಿಕ್ಸ್)- ಸಂಜಯ್ ಮಿಶ್ರಾ (ವಧ್‌)
ಅತ್ಯುತ್ತಮ ನಟಿ- ಆಲಿಯಾ ಭಟ್ (ಗಂಗೂಬಾಯಿ ಕಥಿಯಾವಾಡಿ)
ಅತ್ಯುತ್ತಮ ನಟಿ (ಕ್ರಿಟಿಕ್ಸ್)- ಭೂಮಿ ಪೆಡ್ನೇಕರ್‌ (ಬಧಾಯಿ ದೋ)
ಅತ್ಯುತ್ತಮ ನಟಿ (ಕ್ರಿಟಿಕ್ಸ್)- ಟಬು (ಭೂಲ್‌ ಭುಲಯ್ಯಾ 2)
ಅತ್ಯುತ್ತಮ ನಿರ್ದೇಶಕ- ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಥಿಯಾವಾಡಿ)
ಅತ್ಯುತ್ತಮ ಪೋಷಕ ನಟ- ಅನೀಲ್ ಕಪೂರ್ (ಜುಗ್‌ಜುಗ್‌ ಜೀಯೋ)
ಅತ್ಯುತ್ತಮ ಪೋಷಕ ನಟಿ- ಶೀಬಾ ಚಡ್ಡಾ (ಬಧಾಯಿ ದೋ)

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News