ಭಾರತದ ಅತ್ಯಂತ ಶ್ರೀಮಂತ ಡಾನ್ಸ್‌ ಕೊರಿಯೋಗ್ರಫರ್‌ ಯಾರು ಗೊತ್ತೆ..! 1 ಸಾಂಗ್‌ಗೆ 50 ಲಕ್ಷ ರೂ..

Indian richest dance choreographer : ಭಾರತದ ಶ್ರೀಮಂತ ನೃತ್ಯ ಸಂಯೋಜಕ ಯಾರು ಅಂತ ನಿಮ್ಗೆ ಗೊತ್ತೆ..? ಅನೇಕ ಸ್ಟಾರ್‌ ನಟರಿಗೆ ಇವರು ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಮಾನಿಗಳು ಸಹ ಇವರ ಡಾನ್ಸ್‌ ಸ್ಟೈಲ್‌ಗೆ ಫಿದಾ ಆಗಿದ್ದಾರೆ. ಬನ್ನಿ.. ಯಾರು ಆ ಶ್ರೀಮಂತ ಡಾನ್ಸ್‌ ಕೊರಿಯೊಗ್ರಾಫರ್‌ ಅಂತ ತಿಳಿಯೋಣ

Written by - Krishna N K | Last Updated : Jan 11, 2024, 12:56 PM IST
  • ಭಾರತೀಯ ಸಿನಿ ರಂಗದಲ್ಲಿ ಡಾನ್ಸ್‌ ಕೋರಿಯೋಗ್ರಫರ್‌ಗೆ ತುಂಬಾ ಬೆಲೆ ಇದೆ.
  • ಭಾರತದ ಶ್ರೀಮಂತ ನೃತ್ಯ ಸಂಯೋಜಕ ಯಾರು ಅಂತ ನಿಮ್ಗೆ ಗೊತ್ತೆ..?
  • ಓರ್ವ ಡಾನ್ಸ್‌ ಕೋರಿಯೋಗ್ರಫರ್‌ ಮಾತ್ರ ಮುಂಚುಣಿಯಲ್ಲಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ಡಾನ್ಸ್‌ ಕೊರಿಯೋಗ್ರಫರ್‌ ಯಾರು ಗೊತ್ತೆ..! 1 ಸಾಂಗ್‌ಗೆ 50 ಲಕ್ಷ ರೂ.. title=

Indian Top dance choreographer : ಭಾರತೀಯ ಸಿನಿ ರಂಗದಲ್ಲಿ ಡಾನ್ಸ್‌ ಕೋರಿಯೋಗ್ರಫರ್‌ಗೆ ತುಂಬಾ ಬೆಲೆ ಇದೆ. ಏಕೆಂದ್ರ ಸಿನಿಮಾದಲ್ಲಿ ಬರುವ ಹಾಡುಗಳು ಚಿತ್ರಕ್ಕೆ ಬಿಗ್‌ ಬೂಸ್ಟ್‌ ನೀಡುತ್ತವೆ. ಒಂದು ಒಳ್ಳೆ ಹುಕ್‌ ಸ್ಟೆಪ್‌ ಸಿಕ್ತು ಅಂದ್ರೆ ಸಾಕು, ಅಭಿಮಾನಿಗಳು ಸಹ ರೀಲ್ಸ್‌ ಮಾಡಲು ಶುರು ಮಾಡ್ತಾರೆ, ಸಖತ್‌ ವೈರಲ್‌ ಸಹ ಆಗುತ್ತೆ. ಅದರಂತೆ ನಮ್ಮಲ್ಲಿ ಸಾಕಷ್ಟು ಪ್ರತಿಭಾನ್ವಿತ ನೃತ್ಯ ಸಂಯೋಜಕರಿದ್ದರೂ ಸಹ ಓರ್ವ ಡಾನ್ಸ್‌ ಕೋರಿಯೋಗ್ರಫರ್‌ ಮಾತ್ರ ಮುಂಚುಣಿಯಲ್ಲಿದ್ದಾರೆ.

ಹೌದು.. ಚಿತ್ರರಂಗದಲ್ಲಿ ಸಿನಿಮಾ ಕಥೆಗಳು ಮತ್ತು ಹಾಡುಗಳು ಯಾವಾಗಲೂ ಒಂದಕ್ಕೊಂದು ನಂಟು ಹೊಂದಿರುತ್ತವೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಕಥೆಯ ಜೊತೆಗೆ ಹಾಡುಗಳು, ಹಾಡಿಗೆ ತಕ್ಕಂತೆ ಡಾನ್ಸ್‌ ಕೂಡ ಬಹು ಮುಖ್ಯವಾಗಿರುತ್ತೆ. ಆದ್ದರಿಂದ ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕರ ಪ್ರಾಮುಖ್ಯತೆಯೂ ಹೆಚ್ಚು. ಇಂದು ಚಿತ್ರರಂಗದಲ್ಲಿ ಅನೇಕ ಟಾಪ್ ಕೊರಿಯೋಗ್ರಾಫರ್‌ಗಳಿದ್ದಾರೆ, ಅವರು ಹೇಳಿಕೊಟ್ಟಂತೆ ನಟ-ನಟಿಯರು ಕುಣಿಯುತ್ತಾರೆ. ಈ ಪೈಕಿ ಭಾರತದ ಅತ್ಯಂತ ಶ್ರೀಮಂತ ನೃತ್ಯ ನಿರ್ದೇಶಕರು ಯಾರು ಅಂತ ನಿಮಗೆ ಗೊತ್ತೆ..? 

ಇದನ್ನೂ ಓದಿ:ಡಿವೋರ್ಸ್ ಬಳಿಕ ದಟ್ಟ ಅರಣ್ಯದಲ್ಲಿ ಅಡುಗೆ ಮಾಡಿಕೊಂಡು ತಿಂದ ಮೆಗಾಪುತ್ರಿ: ವಿಡಿಯೋ ವೈರಲ್!

ಭಾರತದ ಟಾಪ್ ಕೊರಿಯೋಗ್ರಾಫರ್ ಯಾರು ಅಂತ ಪ್ರಶ್ನೆ ಬಂದಾಗ, ಮೊದಲಿಗೆ ತಟ್‌ ಅಂತ ನೆನಪಾಗುವ ಹೆಸರು ಫರಾ ಖಾನ್.. ಎರಡು ದಶಕಗಳಿಂದ ಭಾರತದ ಟಾಪ್ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಆದಾಯ ಗಳಿಸುವವರಲ್ಲಿ ಇವರೂ ಒಬ್ಬರು. ವರದಿಗಳ ಪ್ರಕಾರ, ಫರಾ ನೃತ್ಯ ಸಂಯೋಜಕರಾಗಿ ಪ್ರತಿ ಹಾಡಿಗೆ 50 ಲಕ್ಷ ರೂ. ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ಫರಾ ಖಾನ್ ನೃತ್ಯಗಾರ್ತಿ ಮತ್ತು ನೃತ್ಯ ಸಂಯೋಜಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರು, ಅಲ್ಲದೆ, ಅನೇಕ ಚಲನಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮೈ ಹೂ ನಾ, ತೀಸ್ ಮಾರ್ ಖಾನ್ ಮತ್ತು ಹ್ಯಾಪಿ ನ್ಯೂ ಇಯರ್‌ನಂತಹ ಹಿಟ್‌ಗಳನ್ನು ನಿರ್ದೇಶಿಸಿದ್ದಾರೆ. ಚಲನಚಿತ್ರ ನಿರ್ದೇಶನ ಮತ್ತು ನಿರ್ಮಾಣ ಫರಾ ಅವರ ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡಿದೆ. 

ಇದನ್ನೂ ಓದಿ:ಸಂಕ್ರಾಂತಿ ಹಬ್ಬದಂದು ಇನ್ನಷ್ಟು ಹೊಸತನದೊಂದಿಗೆ ಶುರುವಾಗ್ತಿದೆ "ಬೊಂಬಾಟ್ ಭೋಜನ ಸೀಸನ್ 4"

ವರದಿಗಳ ಪ್ರಕಾರ, ನೃತ್ಯ ಸಂಯೋಜಕಿಯಾಗಿರುವ ಫರಾ ಖಾನ್ ಅವರ ನಿವ್ವಳ ಮೌಲ್ಯದ ಬಗ್ಗೆ ಹೇಳುವುದಾದರೆ, ಅವರ ಸಂಪತ್ತು 85 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎನ್ನಲಾಗಿದೆ. ಬ್ಯಾಕ್‌ಅಪ್ ಡ್ಯಾನ್ಸರ್ ಆಗಿ ವೃತ್ತಿ ಜೀವನ ಆರಂಭಿಸಿದ ಫರಾ ಇಂದು ಶ್ರೀಮಂತ ನೃತ್ಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವುದು ಬಹು ದೊಡ್ಡ ಸಾಧನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News