Ek Love Ya: ಪ್ರೇಮ್ ನಿರ್ದೇಶನದ 'ಏಕ್‌ ಲವ್‌ ಯಾ' ಸಿನಿಮಾ ರಿಲೀಸ್‌ ಡೇಟ್ ಫಿಕ್ಸ್

Ek love ya: ಇದೀಗ 'ಏಕ್‌ ಲವ್‌ ಯಾ' ಚಿತ್ರತಂಡ ಅಧಿಕೃತವಾಗಿ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ. 

Edited by - Chetana Devarmani | Last Updated : Feb 6, 2022, 12:50 PM IST
  • ಜೋಗಿ ಪ್ರೇಮ್‌ ನಿರ್ದೇಶನದ 'ಏಕ್‌ ಲವ್‌ ಯಾ' ಚಿತ್ರ
  • 'ಏಕ್‌ ಲವ್‌ ಯಾ' ಸಿನಿಮಾ ರಿಲೀಸ್‌ ಡೇಟ್ ಫಿಕ್ಸ್
  • ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ನಿರ್ದೇಶಕ ಪ್ರೇಮ್
Ek Love Ya: ಪ್ರೇಮ್ ನಿರ್ದೇಶನದ 'ಏಕ್‌ ಲವ್‌ ಯಾ' ಸಿನಿಮಾ ರಿಲೀಸ್‌ ಡೇಟ್ ಫಿಕ್ಸ್  title=
ಏಕ್‌ ಲವ್‌ ಯಾ

ಜೋಗಿ ಪ್ರೇಮ್‌ ನಿರ್ದೇಶನದ 'ಏಕ್‌ ಲವ್‌ ಯಾ' (Ek Love Ya) ಚಿತ್ರಕ್ಕಾಗಿ ಸಿನಿಪ್ರಿಯರು ಕಾತುರರಾಗಿದ್ದಾರೆ. ಜನವರಿ 21ಕ್ಕೆ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಮೂರನೇ ಅಲೆಯಾ ಭೀತಿ ಮತ್ತು ಚಿತ್ರಮಂದಿರಗಳಲ್ಲಿ ಶೇ.50 ಪ್ರವೇಶಾತಿ ಇದ್ದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಇದನ್ನೂ ಓದಿ: Lata Mangeshkar: ಗಾಯನ ನಿಲ್ಲಿಸಿದ ಭಾರತ ರತ್ನ ಲತಾ ಮಂಗೇಶ್ಕರ್

ಇದೀಗ 'ಏಕ್‌ ಲವ್‌ ಯಾ' ಚಿತ್ರತಂಡ ಅಧಿಕೃತವಾಗಿ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ (Prem) ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ (Ek Love Ya Trailer) ಫೆ.11 ರಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ.  

ಈ ಚಿತ್ರದಲ್ಲಿ ರಾಣಾ (Raanna) ನಾಯಕರಾಗಿ ನಟಿಸಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್‌ (Rachita Ram), ಗ್ರೀಷ್ಮಾ ನಾಣಯ್ಯ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ಅರ್ಜುನ್ ಜನ್ಯಾ (Arjun Janya) ಸಂಗೀತ ಸಂಯೋಜನೆ  ಮಾಡಿದ್ದು, ರಕ್ಷಿತಾಸ್​ ಫಿಲ್ಮ್​ ಫ್ಯಾಕ್ಟರಿ (Rakshita) ಬ್ಯಾನರ್​ನಲ್ಲಿ ಸಿನಿಮಾ ನಿರ್ಮಿಸಲಾಗಿದೆ. 

ಇದನ್ನೂ ಓದಿ: ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್.. 'ಜೇಮ್ಸ್' ಅಧಿಕೃತ ಟೀಸರ್ ಬಿಡುಗಡೆ ಡೇಟ್ ಫಿಕ್ಸ್

ಕೊವಿಡ್‌ ಮಾರ್ಗಸೂಚಿ (Corona) ಬದಲಾದ ನಂತರ ಏಕ್‌ ಲವ್‌ ಯಾ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಫೆಬ್ರವರಿ 24 ರಂದು ಜೋಗಿ ಪ್ರೇಮ್‌ ನಿರ್ದೇಶನದ 'ಏಕ್‌ ಲವ್‌ ಯಾ' ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News