Rashmika Mandanna : ಐಟಂ ಸಾಂಗ್‌ಗೆ ರಶ್ಮಿಕಾ ಸಂಭಾವನೆ ಎಷ್ಟು ಗೊತ್ತಾ?

Rashmika Mandanna in Item Song : ರಶ್ಮಿಕಾ ಮಂದಣ್ಣ ಯಾವಾಗಲೂ ಯಾವುದಾದರೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.ಸದಾ ಫೋಟೋಶೂಟ್‌ ಮತ್ತು ತಮ್ಮ ಸ್ಟೇಟ್‌ಮೆಂಟ್‌ಗಳಿಂದ ಸುದ್ದಿಯಲ್ಲಿರುತ್ತಿದ್ದ  ರಶ್ಮಿಕಾ ಈ ಬಾರಿ ಐಟಂ ಸಾಂಗ್‌ ವಿಚಾರಕ್ಕೆ ಸುದ್ದಿ ಯಲ್ಲಿದ್ದಾರೆ. 

Written by - Chetana Devarmani | Last Updated : Dec 7, 2022, 03:33 PM IST
  • ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಲಿದ್ದಾರೆ ಕಿರಿಕ್‌ ಬೆಡಗಿ
  • ಮಹೇಶ್‌ ಬಾಭು ನಟನೆಯ ಸಿನಿಮಾದ ಐಟಂ ಸಾಂಗ್‌
  • ಐಟಂ ಸಾಂಗ್‌ಗೆ ರಶ್ಮಿಕಾ ಸಂಭಾವನೆ ಎಷ್ಟು ಗೊತ್ತಾ?
Rashmika Mandanna : ಐಟಂ ಸಾಂಗ್‌ಗೆ ರಶ್ಮಿಕಾ ಸಂಭಾವನೆ ಎಷ್ಟು ಗೊತ್ತಾ? title=
ರಶ್ಮಿಕಾ ಮಂದಣ್ಣ

Rashmika Mandanna in Item Song : ರಶ್ಮಿಕಾ ಮಂದಣ್ಣ ಯಾವಾಗಲೂ ಯಾವುದಾದರೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.ಸದಾ ಫೋಟೋಶೂಟ್‌ ಮತ್ತು ತಮ್ಮ ಸ್ಟೇಟ್‌ಮೆಂಟ್‌ಗಳಿಂದ ಸುದ್ದಿಯಲ್ಲಿರುತ್ತಿದ್ದ  ರಶ್ಮಿಕಾ ಈ ಬಾರಿ ಐಟಂ ಸಾಂಗ್‌ ವಿಚಾರಕ್ಕೆ ಸುದ್ದಿ ಯಲ್ಲಿದ್ದಾರೆ. ರಶ್ಮಿಕಾಗೆ ಸಿನಿಮಾವೊಂದರಲ್ಲಿ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಲು ಆಫರ್‌ ಬಂದಿದೆಯಂತೆ. ಇದಕ್ಕೆ ಈ ಕಿರಿಕ್‌ ಬೆಡಗಿ ಭಾರೀ ಮೊತ್ತದ ಸಂಭಾವನೆ ಕೇಳಿದ್ದು, ಈ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. 

ಇದನ್ನೂ ಓದಿ : Janhvi Kapoor: ಗುಂಡಿನ ಮತ್ತಲ್ಲಿದ್ರಾ ಜಾನ್ವಿ? ಶ್ರೀದೇವಿ ಪುತ್ರಿ ಬಗ್ಗೆ ಹೀಗೋಂದು ಪ್ರಶ್ನೆ ಹುಟ್ಟಿದ್ಯಾಕೆ!

ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ನಟಿಯರೇ ವಿಶೇಷ ಹಾಡುಗಳಿಗೂ ಹೆಜ್ಜೆ ಹಾಕ್ತಾರೆ. ಸೌತ್‌ ಸಿನಿರಂಗದ ಸ್ಟಾರ್ ನಾಯಕಿಯರಾದ ಪೂಜಾ ಹೆಗ್ಡೆ, ತಮನ್ನಾ, ರೆಜಿನಾ, ಕಾಜಲ್ ಮತ್ತು ಸಮಂತಾ ಈಗಾಗಲೇ ಐಟಂ ಸಾಂಗ್‌ಗಳಲ್ಲಿ ಮಿಂಚಿದ್ದಾರೆ. ಇದಕ್ಕಾಗಿ ನಾಯಕಿಯರು ದೊಡ್ಡ ಮೊತ್ತದ ಸಂಭಾವನೆಯನ್ನೂ ತೆಗೆದುಕೊಳ್ಳುತ್ತಾರೆ. ಇದೀಗ ರಶ್ಮಿಕಾ ಕೂಡ ಒಂದು ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಆದರೆ ಗಮನಸೆಳೆದಿದ್ದು ಅವರು ಕೇಳಿರುವ ಸಂಭಾವನೆ. ಇದಕ್ಕಾಗಿ ಭಾರೀ ಶುಲ್ಕ ಪಡೆಯಲು ರಶ್ಮಿಕಾ ನಿರ್ಧರಿಸಿದ್ದಾರೆ. 

ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರುತ್ತಿರುವುದು ಗೊತ್ತಿರುವ ಸಂಗತಿ. ಸದ್ಯ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಪೂಜಾ ಹೆಗ್ಡೆ ಇದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ನಟಿ ರಶ್ಮಿಕಾ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಕಿರಿಕ್‌ ಬೆಡಗಿ ಸುಮಾರು 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. 

ಇದನ್ನೂ ಓದಿ : BBK9 : ದೊಡ್ಮನೆಯಲ್ಲಿ ಬಿಗ್‌ ಫೈಟ್‌! ಕೈ - ಕೈ ಮಿಲಾಯಿಸಿದ ಸ್ಪರ್ಧಿಗಳು!?

ಸದ್ಯ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ, ತಮಿಳು ಸ್ಟಾರ್ ವಿಜಯ್ ದಳಪತಿ ವಾರಿಸು ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಲ್ಲೂ ಹಲವು ಚಿತ್ರಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಈ ಎಲ್ಲದರ ಮಧ್ಯೆ ರಶ್ಮಿಕಾ ಅವರಿಗೆ ಬೈಕಾಟ್‌ ಬಿಸಿ ಕೂಡ ತಟ್ಟಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News