ʼಸಲ್ಮಾನ್‌ ಖಾನ್‌ ತಮ್ಮʼನ ಪಾತ್ರಕ್ಕೆ ʼರಾಘವ್‌ ಜುಯಲ್‌ʼ ಪಡೆದ ಹಣ ಎಷ್ಟು ಗೊತ್ತಾ..! ಶಾಕ್‌ ಆಗ್ತೀರಾ

Raghav Juyal in Kisi ka Bhai Kisi Ki Jaan : ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಚಿತ್ರದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ ಮತ್ತು ದಗ್ಗುಬಾಟಿ ವೆಂಕಟೇಶ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ತಮ್ಮನಾಗಿ ನಟಿಸಲು ನಟ, ಡ್ಯಾನ್ಸರ್‌, ನಿರೂಪಕ ರಾಘವ್‌ ಜ್ಯುಯಲ್‌ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತಿದೆ.

Written by - Krishna N K | Last Updated : May 5, 2023, 02:58 PM IST
  • ರಾಘವ್ ಜುಯಲ್ ತಮ್ಮ ಅದ್ಭುತ ಡಾನ್ಸ್‌ನಿಂದ ಗುರುತಿಸಿಕೊಂಡಿದ್ದಾರೆ.
  • ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಪ್ಲಸ್‌ನಲ್ಲಿ ಆಂಕರ್ ಆಗಿ ಜನಮನಗೆದ್ದಿದ್ದಾರೆ.
  • ಇದೀಗ ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ಸಿನಿಮಾಗೆ ರಾಘವ್‌ ಪಡೆದ ಸಂಭಾವನೆ ಮ್ಯಾಟರ್‌ ವೈರಲ್‌ ಆಗಿದೆ.
ʼಸಲ್ಮಾನ್‌ ಖಾನ್‌ ತಮ್ಮʼನ ಪಾತ್ರಕ್ಕೆ ʼರಾಘವ್‌ ಜುಯಲ್‌ʼ ಪಡೆದ ಹಣ ಎಷ್ಟು ಗೊತ್ತಾ..! ಶಾಕ್‌ ಆಗ್ತೀರಾ title=

dance plus raghav juyal paid 1 crores money for Juyal Kisi Ka Bhai Kisi Ki Jaan | ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಚಿತ್ರಕ್ಕೆ ʼರಾಘವ್‌ ಜುಯಲ್‌ʼ ಪಡೆದ ಹಣ ಎಷ್ಟು ಗೊತ್ತಾ..! ಶಾಕ್‌ ಆಗ್ತೀರಾ

Raghav Juyal, Raghav Juyal Kisi Ka Bhai Kisi Ki Jaan fees, Raghav Juyal movies, Raghav Juyal videos, Raghav Juyal dance, Raghav Juyal Kisi Ka Bhai Kisi Ki Jaan, Raghav Juyal Salman Khan, raghav juyal shehnaaz gill, Raghav Juyal host, Raghav Juyal acting, raghav juyal movies, kisi ka bhai kisi ki jaan raghav juyal, 

Raghav Juyal : ರಾಘವ್ ಜುಯಲ್ ತಮ್ಮ ಅದ್ಭುತ ಡಾನ್ಸ್‌ನಿಂದ ಗುರುತಿಸಿಕೊಂಡಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಪ್ಲಸ್‌ನಲ್ಲಿ ಆಂಕರ್ ಆಗಿ ಪ್ರೇಕ್ಷಕರನ್ನು ನಕ್ಕು ನಗಿಸುವ ಮೂಲಕ ಜನಮನಗೆದ್ದಿದ್ದಾರೆ. ʼಸೋನಾಲಿ ಕೇಬಲ್ʼ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ ರಾಘವ್‌, ಡ್ಯಾನ್ಸರ್ 3D, ABCD 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ನಟನೆಯ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಾಹುಲ್‌ ಚಿತ್ರಕ್ಕೆ ತೆಗೆದುಕೊಂಡ ಸಂಭಾವನೆ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಹೌದು.. ಇಂಡಿಯಾ ಟುಡೇ ವರದಿ ಪ್ರಕಾರ, ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ʼನಲ್ಲಿನ ಪಾತ್ರಕ್ಕಾಗಿ ರಾಘವ್ ಅವರಿಗೆ 1.2 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. ಸ್ಮಾಲ್‌ ಸ್ಕ್ರೀನ್‌ ಮೂಲಕ ಹೆಸರು ಮಾಡಿರುವ ರಾಘವ್‌ ಅವರಿಗೆ ಅಪಾರ ಅಭಿಮಾನಿ ಬಳಗ ಇದೆ. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಜನಪ್ರಿಯ ಟಿವಿ ರಿಯಾಲಿಟಿ ಸ್ಟಾರ್‌ಗಳ ಪಟ್ಟಿಯಲ್ಲಿ ಇವರೂ ಒಬ್ಬರು. 

ಇದನ್ನೂ ಓದಿ:  Karnataka Election 2023: ಚಂದನವನದ ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳ ಪಟ್ಟಿ ಇಲ್ಲಿದೆ

ಫರ್ಹಾದ್ ಸಾಮ್ಜಿ ನಿರ್ದೇಶನದ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಚಿತ್ರದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ ಮತ್ತು ದಗ್ಗುಬಾಟಿ ವೆಂಕಟೇಶ್ ನಟಿಸಿದ್ದಾರೆ. ಸಹ ನಟರಾಗಿ ರಾಘವ್ ಜುಯಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ, ಜಸ್ಸಿ ಗಿಲ್, ಸಿದ್ಧಾರ್ಥ್ ನಿಗಮ್ ಮತ್ತು ವಿನಾಲಿ ಭಟ್ನಾಗರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 21 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ 14 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭಾರತದಲ್ಲಿ 106.12 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. 

ಈ ಮಧ್ಯ, ರಾಘವ್ ಜುಯಲ್ ತನ್ನ ಸಹನಟ ಶೆಹನಾಜ್ ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಕುರಿತ ಫೋಟೋಗಳು ಅಂತರ್ಜಾಲದಲ್ಲಿ ಸಖತ್‌ ವೈರಲ್‌ ಆಗಿವೆ. ಆದ್ರೆ ಇದೇಲ್ಲ ಸುಳ್ಳು ಸುದ್ದಿ ಅಂತ ಜುಯಲ್‌ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ನಾನು ಚಿತ್ರದಕ್ಕಾಗಿ ಇಲ್ಲಿಗೆ ಬಂದಿದ್ದೇನೆ, ಜನರು ನನ್ನನ್ನು ನಟ, ಡ್ಯಾನ್ಸರ್‌ ಮತ್ತು ನಿರೂಪಕ ಎಂದು ನೆನಪಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅದನ್ನು ಹೊರತುಪಡಿಸಿ, ನನಗೂ ಬೇರೆ ಯಾವುದಕ್ಕೂ ಸಮಯವಿಲ್ಲ. ಇವೇಲ್ಲ ಆಧಾರರಹಿತ ಸುದ್ದಿಗಳು. ನಾನು ಡಬಲ್ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ನನಗೆ ಬೇರೆ ಯಾವುದಕ್ಕೂ ಸಮಯವಿಲ್ಲ ಎಂದು ಡೇಟಿಂಗ್‌ ರೂಮರ್ಸ್‌ ಬಗ್ಗೆ ಕ್ಲಾರೀಟಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News