ಬಿಡುಗಡೆ ಸಿದ್ಧವಾಯ್ತು ʼಚಾಂಪಿಯನ್ʼ : ತೆರೆ ಮೇಲೆ ಮೋಡಿ ಮಾಡಲು ಸಚಿನ್‌, ಅದಿತಿ ರೆಡಿ

ಕ್ರೀಡಾ ಕಥಾಹಂದರ ಹೊಂದಿರುವ "ಚಾಂಪಿಯನ್" ಬಿಡುಗಡೆಗೆ ಸಿದ್ಧವಾಗಿದ್ದು, ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಶಿವಂ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಸಿನಿಮಾವನ್ನು ಶಿವಾನಂದ್ ಎಸ್ ನೀಲಣ್ಣನವರ್ ನಿರ್ಮಿಸಿದ್ದು, ಚಿತ್ರಕ್ಕೆ ಶಾಹುರಾಜ್ ಶಿಂಧೆ ಆಕ್ಷನ್‌ ಕಟ್‌ ಹೇಳಿದ್ದಾರೆ.

Written by - Krishna N K | Last Updated : Oct 12, 2022, 03:59 PM IST
  • ಕ್ರೀಡಾ ಕಥಾಹಂದರ ಹೊಂದಿರುವ "ಚಾಂಪಿಯನ್" ಬಿಡುಗಡೆಗೆ ಸಿದ್ಧ
  • ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಶಾಹುರಾಜ್ ಶಿಂಧೆ ಸಿನಿಮಾ
  • ನಾಯಕನಟ ಸಚಿನ್ ಧನಪಾಲ್‌ಗೆ ಜೊತೆಯಾಗಿ ಅದಿತಿ ಪ್ರಭುದೇವ ನಟನೆ
ಬಿಡುಗಡೆ ಸಿದ್ಧವಾಯ್ತು ʼಚಾಂಪಿಯನ್ʼ : ತೆರೆ ಮೇಲೆ ಮೋಡಿ ಮಾಡಲು ಸಚಿನ್‌, ಅದಿತಿ ರೆಡಿ title=

ಬೆಂಗಳೂರು : ಕ್ರೀಡಾ ಕಥಾಹಂದರ ಹೊಂದಿರುವ "ಚಾಂಪಿಯನ್" ಬಿಡುಗಡೆಗೆ ಸಿದ್ಧವಾಗಿದ್ದು, ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಶಿವಂ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಸಿನಿಮಾವನ್ನು ಶಿವಾನಂದ್ ಎಸ್ ನೀಲಣ್ಣನವರ್ ನಿರ್ಮಿಸಿದ್ದು, ಚಿತ್ರಕ್ಕೆ ಶಾಹುರಾಜ್ ಶಿಂಧೆ ಆಕ್ಷನ್‌ ಕಟ್‌ ಹೇಳಿದ್ದಾರೆ.

ಚಾಂಪಿಯನ್‌ಗೆ ನಾಯಕನಾಗಿ ಸಚಿನ್ ಧನಪಾಲ್ ಅಭಿನಯಿಸಿದ್ದು, ಅದಿತಿ ಪ್ರಭುದೇವ ನಾಯಕಿ ಪಾತ್ರ ಮಾಡಿದ್ದಾರೆ. ಹಿರಿಯ ನಟ ದೇವರಾಜ್, ಸುಮನ್, ಪ್ರದೀಪ್ ರಾಹುತ್, ಚಿಕ್ಕಣ್ಣ, ಆದಿ ಲೋಕೇಶ್, ರಂಗಾಯಣ ರಘು, ಅವಿನಾಶ್, ಕಾಕ್ರೋಜ್ ಸುಧಿ, ಶೋಭರಾಜ್, ಅಶೋಕ್ ಶರ್ಮ, ಪ್ರಶಾಂತ್ ಸಿದ್ದಿ, ಗಿರಿ, ಮಂಡ್ಯ ರಮೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌. ಖ್ಯಾತ ನಟಿ ಸನ್ನಿಲಿಯೋನ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. 

ಇದನ್ನೂ ಓದಿ: ಬಿಗ್‌ಬಾಸ್‌ನಲ್ಲಿ ನೋಣಗಳ ಗಣಗಣ : ಫನ್ನಿಯಾಗಿತ್ತು ಟಂಗ್ ಟ್ವಿಸ್ಟಿಂಗ್ ಟಾಸ್ಕ್

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸರವಣನ್ ನಟರಾಜನ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿರುವ "ಚಾಂಪಿಯನ್" ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಇನ್ನು ʼಚಾಂಪಿಯನ್ʼ ಚಿತ್ರದ ಬಗ್ಗೆ ಕನಸು ಕಂಡಿದ್ದ ನಿರ್ದೇಶಕ ಶಾಹುರಾಜ್ ಶಿಂಧೆ ಚಿತ್ರ ಬಿಡುಗಡೆಗೂ ಮುಂಚೆಯೇ ವಿಧಿವಶರಾಗಿರುವುದು ನಿಜಕ್ಕೂ ದುಃಖದ ಸಂಗತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News