casting couch ಕುರಿತು ಈ big boss ಬೆಡಗಿ ನೀಡಿದ ಬೆಚ್ಚಿಬೀಳಿಸುವ ಮಾಹಿತಿ

big boss ಸ್ಪರ್ಧಿಯಾಗಿದ್ದ ರಶ್ಮಿ ದೇಸಾಯಿ ಕಾಸ್ಟಿಂಗ್ ಕೌಚ್ ಕುರಿತು ಒಂದು ಸೆನ್ಸೇಷನಲ್ ಮಾಹಿತಿ ಹೊರಹಾಕಿದ್ದಾರೆ.

Last Updated : Mar 4, 2020, 12:03 PM IST
casting couch ಕುರಿತು ಈ big boss ಬೆಡಗಿ ನೀಡಿದ ಬೆಚ್ಚಿಬೀಳಿಸುವ ಮಾಹಿತಿ title=

ನವದೆಹಲಿ: ಬಿಗ್ ಬಾಸ್ 13 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ರಶ್ಮಿ ದೇಸಾಯಿ ಕಾಸ್ಟಿಂಗ್ ಕೌಚ್ ಕುರಿತು ಒಂದು ಬೆಚ್ಚಿಬೀಳಿಸುವ ಮಾಹಿತಿ ಹೊರಹಾಕಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ರಶ್ಮಿ ಆ ಕಹಿ ದಿನಗಳನ್ನು ಮರೆಯಲಾಗುವುದಿಲ್ಲ ಎಂದಿದ್ದಾರೆ. ತಮ್ಮ ಸಂಘರ್ಷದ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಇಲ್ಲದೆ ಯಾವುದೆ ಕೆಲಸ ಗಿಟ್ಟಿಸಲು ಸಾಧ್ಯವಿಲ್ಲ ಎಂದು ತಮಗೆ ಯಾರೋ ಹೇಳಿದ್ದರು ಎಂದಿದ್ದಾರೆ. ಆದರೆ, ತಾವು ಅದಕ್ಕೆ ಹೆಚ್ಚಿನ ಮಹತ್ವ ನೀಡಲಿಲ್ಲ. ತಮ್ಮ ಸಂಘರ್ಷದ ದಿನಗಳಲ್ಲಿ ವ್ಯಕ್ತಿಯೊಬ್ಬರು ತಮಗೆ ಫಿಗರ್ ಬಗ್ಗೆ ವಿಚಾರಿಸಿದ್ದರು. ಆದರೆ, ತಮಗೆ ಅದರ ಕುರಿತು ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ದ ರಶ್ಮಿ ತಪ್ಪಿಸಿಕೊಂಡಿದ್ದರು.

ಈ ಕುರಿತು ಮಾತನಾಡಿರುವ ರಶ್ಮಿ, ಆ ವ್ಯಕ್ತಿಯ ಹೆಸರು ಸೂರಜ್ ಆಗಿದ್ದು, ಆತ ಈಗ ಎಲ್ಲಿದ್ದಾನೆ ಎಂಬುದು ತಮಗೆ ತಿಳಿದಿಲ್ಲ. ಆದರೆ, ಆತ ಮಾಡಿದ್ದ ಆ ಕೃತ್ಯ ಎಂದಿಗೂ ಮರೆಯಲಾಗುವುದಿಲ್ಲ. ಆಡಿಶನ್ ನೆಪ ಹೇಳಿ ಸೂರಜ್ ತಮ್ಮನ್ನು ಸ್ಟುಡಿಯೋಗೆ ಕರೆಯಿಸಿಕೊಂಡಿದ್ದರು. ಅಂದು ಕೆಲಸದ ಪ್ರತಿ ತಾವೂ ಕೂಡ ತುಂಬಾ ಉತ್ಸಾಹಿತರಾಗಿದ್ದಾಗಿ ರಶ್ಮಿ ಹೇಳಿದ್ದಾರೆ. ಆದ್ರೆ ತಾವು ಸ್ಟುಡಿಯೋಗೆ ಭೇಟಿ ನೀಡಿದ್ದ ವೇಳೆ ಅಲ್ಲಿ ಕ್ಯಾಮರಾ ಕೂಡ ಇರಲಿಲ್ಲ ಹಾಗೂ ಯಾವುದೇ ತಂಡ ಕೂಡ ಇರಲಿಲ್ಲ. ಅಷ್ಟೇ ಯಾಕೆ ಯಾವುದೇ ಕಾರ್ಮಿಕರು ಕೂಡ ಅಲ್ಲಿ ಇರಲಿಲ್ಲ ಎಂದು ರಶ್ಮಿ ಹೇಳಿದ್ದಾರೆ.

ನನಗೆ ನೀಡಿದ ಡ್ರಿಂಕ್ ನಲ್ಲಿ ಮತ್ತು ಬರುವ ಪದಾರ್ಥ ಮಿಶ್ರಣ ಮಾಡಿ ಆತ ನನಗೆ ಕುಡಿಸಲು ಪ್ರಯತ್ನ ಮಾಡಿದ್ದ. ಆ ವೇಳೆ ತಾವು ತುಂಬಾ ಡಿಸ್ ಕಂಫರ್ಟ್ ಆಗಿದ್ದು, ಆತನನ್ನು ತಡೆಯಲು ತುಂಬಾ ಪ್ರಯತ್ನಿಸಿದ್ದಾಗಿ ರಶ್ಮಿ ಹೇಳಿಕೊಂಡಿದ್ದಾರೆ.

ನನಗೆ ಇಂತಹ ಸಂಗತಿಗಳಲ್ಲಿ ಯಾವುದೇ ರುಚಿ ಇಲ್ಲ ಎಂದು ತಾವು ಪದೆ ಪದೆ ಸುರಜ್ ಗೆ ಹೇಳಿದ್ದಾಗಿ ರಶ್ಮಿ ನೆನಪಿಸಿಕೊಂಡಿದ್ದಾರೆ. ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ತಮ್ಮ ತಾಯಿಯ ಬಳಿ ಹೋಗಿ ಅವರಿಗೆ ಎಲ್ಲ ವಿಷಯ ಹೇಳಿಕೊಂಡಿರುವುದಾಗಿ ರಶ್ಮಿ ಹೇಳಿದ್ದಾರೆ.

ಮಾರನೆ ದಿನ ಆತನನ್ನು ರೆಸ್ಟಾರೆಂಟ್ ವೊಂದಕ್ಕೆ ಬರಮಾಡಿಕೊಂಡ ತಮ್ಮ ತಾಯಿ ಆತನಿಗೆ ಕಪಾಳಮೋಕ್ಷ ಮಾಡಿ, ಎಚ್ಚರಿಕೆ ನೀಡಿದ್ದರು ಎಂದು ರಶ್ಮಿ ಹೇಳಿದ್ದಾರೆ.

ರಶ್ಮಿ ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. 19ನೇ ವಯಸ್ಸಿನಲ್ಲಿ ಅವರು ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಆದರೆ, ಕಿರುತೆರೆಯಲ್ಲಿ ಮೂಡಿಬಂದ 'ಉತರನ್' ಬಳಿಕ ರಶ್ಮಿ ಹೆಸರು ಮನೆ-ಮನೆಯಲ್ಲೂ ಚರ್ಚೆಗೆ ಬಂತು. ಇದೆ ಧಾರಾವಾಹಿಯ ಸೆಟ್ ನಲ್ಲಿ ರಶ್ಮಿ ತಮ್ಮ ಬಾಳಸಂಗಾತಿ ನಂದೀಶ್ ಅವರನ್ನು ಭೇಟಿಯಾಗಿದ್ದರು. 2012 ರಲ್ಲಿ ರಶ್ಮಿ ಹಾಗೂ ನಂದೀಶ್ ಹಸೆಮಣೆ ತುಳಿದಿದ್ದಾರೆ.

ಆದ್ರೆ, ವಿವಾಹದ ನಾಲ್ಕು ವರ್ಷಗಳ ಬಳಿಕ ಅವರು ಪರಸ್ಪರ ದೂರವಾಗಿದ್ದಾರೆ. ಒಂದೆಡೆ ನಂದೀಶ್ ಹಲವಾರು ಮಹಿಳೆಯರ ಜೊತೆ ಸಂಪರ್ಕ ಹೊಂದಿರುವುದೇ ಇದಕ್ಕೆ ಕಾರಣ ಎಂದು ರಶ್ಮಿ ಹೇಳಿಕೊಂಡಿದ್ದರೆ, ಇನ್ನೊಂದೆಡೆ ನಂದೀಶ್  ಕೂಡ ರಶ್ಮಿಯ ಅತ್ಯಂತ ಸೂಕ್ಸ್ಮ ವ್ಯವಹಾರಕ್ಕೆ ನಾನು ಬೇಸರಗೊಂಡಿದ್ದೆ ಎಂದು ಹೇಳಿದ್ದಾರೆ.

Trending News