ʼಜವಾನ್‌ʼ ಬಾಯ್ಕಾಟ್‌ಗೆ ಒತ್ತಾಯ : ಕಿಂಗ್‌ ಖಾನ್‌ ಚಿತ್ರಕ್ಕೆ ಅಡ್ಡಿಯಾಗ್ತಾರಾ ʼಉದಯನಿಧಿʼ

BoycottJawan : ನಿನ್ನೆ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ಶಾರುಖ್ ಖಾನ್ ನಟನೆಯ ʼಜವಾನ್ʼ ಚಿತ್ರಕ್ಕೆ ವಿಘ್ನ ಎದುರಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಕಿಂಗ್‌ ಖಾನ್‌ ಸಿನಿಮಾದ ವಿರುದ್ಧ ಬಾಯ್ಕಾಟ್‌ ಘೋಷಣೆ ಕೇಳಿಬರುತ್ತಿದೆ. ಇದಕ್ಕೆ ಕಾರಣ ಉದಯನಿಧಿ.. ಈ ಕುರಿತ ಕಂಪ್ಲೀಟ್‌ ಇಲ್ಲಿದೆ ನೋಡಿ..

Written by - Krishna N K | Last Updated : Sep 8, 2023, 01:31 PM IST
  • ಶಾರುಖ್ ಖಾನ್ ನಟನೆಯ ʼಜವಾನ್ʼ ಚಿತ್ರಕ್ಕೆ ವಿಘ್ನ ಎದುರಾಗಿದೆ.
  • ಕಿಂಗ್‌ ಖಾನ್‌ ಸಿನಿಮಾದ ವಿರುದ್ಧ ಬಾಯ್ಕಾಟ್‌ ಘೋಷಣೆ ಕೇಳಿಬರುತ್ತಿದೆ.
  • ಜವಾನ್‌ ಚಿತ್ರ ನಿನ್ನೆ (ಸೆ.7) ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.
ʼಜವಾನ್‌ʼ ಬಾಯ್ಕಾಟ್‌ಗೆ ಒತ್ತಾಯ : ಕಿಂಗ್‌ ಖಾನ್‌ ಚಿತ್ರಕ್ಕೆ ಅಡ್ಡಿಯಾಗ್ತಾರಾ ʼಉದಯನಿಧಿʼ title=

Udhayanidhi Jawan : ಜವಾನ್‌ ಚಿತ್ರ ನಿನ್ನೆ (ಸೆ.7) ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲದೆ, ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ನಿರ್ಮಿಸುತ್ತಿದೆ. ಹೀಗಿರುವಾಗ ಕಿಂಗ್‌ಖಾನ್‌ ಸಿನಿಮಾದ ವಿರುದ್ಧ ಬಾಯ್ಕಾಟ್‌ ಘೋಷಣೆ ಮೊಳಗಿದ್ದು, ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

ಹೌದು.. ಅಟ್ಲಿ ನಿರ್ದೇಶನ ಜವಾನ್‌ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ರಿಲೀಸ್‌ ಆಗಿ ಕೇವಲ ಒಂದು ದಿನ ಕಳೆದಿದ್ದು, ಇದೀಗ ಚಿತ್ರ ವಿವಾದಕ್ಕೆ ಸಿಲುಕಿದೆ. ಎಕ್ಸ್‌ನಲ್ಲಿ (ಟ್ವಿಟರ್) #BoycottJawan ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡ್ ಆಗಿದೆ. 

ಇದನ್ನೂ ಓದಿ: ʼಜೈಲರ್‌ʼ ನಲ್ಲಿ ನಟಿಸಿದ್ದ ಖ್ಯಾತ ತಮಿಳು ನಟ ಮಾರಿಮುತ್ತು ಹೃದಯಾಘಾತದಿಂದ ನಿಧನ..!

ಅಟ್ಲಿ ನಿರ್ದೇಶನದ ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದೆ. ಮುಖ್ಯವಾಗಿ ಉದಯನಿಧಿ ಸ್ಟಾಲಿನ್ ಒಡೆತನದ ರೆಡ್ ಜೈಂಟ್ ಮೂವೀಸ್ ಸಂಸ್ಥೆ ಈ ಚಿತ್ರವನ್ನು ತಮಿಳುನಾಡಿನಲ್ಲಿ ವಿತರಿಸಿದೆ. ಇದೇ ಇದೀಗ ಚಿತ್ರಕ್ಕೆ ಕಂಟಕವಾಗಿ ಕಾಡುತ್ತಿದೆ.

ಉದಯನಿಧಿ ಸ್ಟಾಲಿನ್ ಪ್ರಸಿದ್ಧ ಚಲನಚಿತ್ರ ನಟ, ನಿರ್ಮಾಪಕ ಮತ್ತು ತಮಿಳುನಾಡು ರಾಜ್ಯ ಸಚಿವ. ಇತ್ತೀಚಿಗೆ ಅವರು ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಉದಯನಿಧಿ ಮೇಲೆ ದೂರುಗಳು ಸಹ ದಾಖಲಾಗಿವೆ. ಹೀಗಿರುವಾಗ ಅವರು ವಿತರಣೆ ಮಾಡುತ್ತಿರುವ ಸಿನಿಮಾ ಜವಾನ್‌ ಬಾಯ್ಕಾಟ್‌ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ಓದಿ: ಆನ್‌ಲೈನ್‌ನಲ್ಲಿ 'ಜವಾನ್' ಲೀಕ್: ಪೈರಸಿಗೆ ಬಲಿಯಾಗುತ್ತಾ ಕಿಂಗ್‌ ಖಾನ್‌ ನ್ಯೂ ಸಿನಿಮಾ?

ಕೆಲ ದಿನಗಳ ಹಿಂದೆ ಸಚಿವ ಉದಯನಿಧಿ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಸಿ ಅದನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಸ್ಟಾಲಿನ್‌ ಪುತ್ರ, ಯಾವುದೇ ಕಾನೂನು ಸವಾಲು ಎದುರಿಸಲು ನಾನು ಸಿದ್ಧ. ಕೇಸರಿ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಶಾಶ್ವತವಾಗಿ ಹೋರಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Jawan Collection Day 1 : ಜವಾನ್‌ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನವೇ ಹೊಸ ದಾಖಲೆ

ಸಧ್ಯ ಉದಯನಿಧಿ ಸ್ಟಾಲಿನ್ ರೆಡ್ ಜೈಂಟ್ ಮೂವೀಸ್ ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದಾರೆ, ಅದು ಚಲನಚಿತ್ರಗಳನ್ನು ವಿತರಿಸುತ್ತದೆ. ಜವಾನ್ ಸೇರಿದಂತೆ ಮುಂಬರುವ ಪ್ಯಾನ್-ಇಂಡಿಯಾ ಚಲನಚಿತ್ರಗಳ ವಿತರಣಾ ಹಕ್ಕುಗಳನ್ನು ಪ್ರೊಡಕ್ಷನ್ ಹೌಸ್ ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News