ಬಿಗ್‌ ಬಾಸ್‌ ಮನೆಯೇ ಮೊದಲ ಪಾಠಶಾಲೆ: ಮೈಕಲ್ ಮೇಷ್ಟ್ರ ನುಡಿ ರೋಮಾಂಚನ!

Bigg Boss Kannada Season 10 : ‘ಮನೆಯೇ ಮೊದಲ ಪಾಠಶಾಲೆ’ ಎಂಬ ಮಾತು ಬಿಗ್‌ಬಾಸ್ ಮನೆಯಲ್ಲಿ ಅಕ್ಷರಶಃ ಸತ್ಯವಾಗುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ‘ಪ್ರಾಥಮಿಕ ಶಾಲೆ’ ಪ್ರಾರಂಭವಾಗಿದೆ! 

Written by - Chetana Devarmani | Last Updated : Dec 12, 2023, 05:14 PM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಶಾಲೆಯಾದ ಬಿಗ್‌ ಬಾಸ್‌ ಮನೆ
  • ಮೈಕಲ್ ಮೇಷ್ಟ್ರ ನುಡಿ ರೋಮಾಂಚನ!
ಬಿಗ್‌ ಬಾಸ್‌ ಮನೆಯೇ ಮೊದಲ ಪಾಠಶಾಲೆ: ಮೈಕಲ್ ಮೇಷ್ಟ್ರ ನುಡಿ ರೋಮಾಂಚನ! title=

Bigg Boss Kannada Season 10 : ‘ಮನೆಯೇ ಮೊದಲ ಪಾಠಶಾಲೆ’ ಎಂಬ ಮಾತು ಬಿಗ್‌ಬಾಸ್ ಮನೆಯಲ್ಲಿ ಅಕ್ಷರಶಃ ಸತ್ಯವಾಗುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ‘ಪ್ರಾಥಮಿಕ ಶಾಲೆ’ ಪ್ರಾರಂಭವಾಗಿದೆ! ಹಾಗಾದ್ರೆ ವಿದ್ಯಾರ್ಥಿಗಳು ಯಾರು? ಕಳೆದ ವಾರ ರಕ್ಕಸರ ಹಾಗೆ ಕಿತ್ತಾಡಿದ್ದವರೇ ಈ ವಾರ ಪುಟ್ಟ ಮಕ್ಕಳಾಗಿ ಶಾಲೆಗೆ ಸೇರಿಕೊಂಡಿದ್ದಾರೆ. ಒಬ್ಬರ ಕೈಗೆ ಇನ್ನೊಬ್ಬರು ಕಚ್ಚುತ್ತ, ಒಬ್ಬರ ಬಗ್ಗೆ ಇನ್ನೊಬ್ಬರು ದೂರು ಹೇಳುತ್ತ, ಎಲ್ಲರ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡುತ್ತ ಕೋಲಾಹಲವೆದ್ದಿದ್ದ ಮನೆಯಲ್ಲಿ ಕಲರವ ಉಂಟುಮಾಡುತ್ತಿದ್ದಾರೆ. 

ಕ್ರೌರ್ಯ ಮೆರೆದಾಡಿದ್ದ ಜಾಗದಲ್ಲಿ ಕೌಮಾರ್ಯದ ಮುಗ್ಧತೆ ಅರಳುತ್ತಿದೆ. ಈ ಸ್ಪೆಷಲ್ ಟಾಸ್ಕ್‌ನ ಮಜಾ ಹೇಗಿರುತ್ತದೆ ಎಂಬುದು ಇಂದು JioCinema ಬಿಡುಗಡೆ ಮಾಡಿರುವ ಎರಡು ಪ್ರೋಮೊಗಳಲ್ಲಿ ಸ್ಪಷ್ಟವಾಗಿ ತಿಳಿಯುವಂತಿದೆ. ಈ ವಾರದ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಮನೆಯ ಎಲ್ಲ ಸದಸ್ಯರನ್ನು ಬಾಲ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಎಲ್ಲ ಸ್ಪರ್ಧಿಗಳೂ ಪ್ರಾಥಮಿಕ ಶಾಲೆಯ ಸಮವಸ್ತ್ರ ತೊಟ್ಟು ಅಕ್ಷರಶಃ ಮಕ್ಕಳೇ ಆಗಿಬಿಟ್ಟಿದ್ದಾರೆ. ಒಬ್ಬೊಬ್ಬರೂ ಇನ್ನೊಬ್ಬರ ಚೇಷ್ಟೆಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಈ ವಾರವಿಡೀ ಮಕ್ಕಳಾಟದ ಮನರಂಜನೆ ಭರಪೂರ ಸಿಗಲಿದೆ.

ಇದನ್ನೂ ಓದಿ: BBK 10: ಬಿಗ್ ಬಾಸ್ ಮನೆಯಲ್ಲಿ ತನಿಷಾಗೆ ಐ ಲವ್ ಯೂ ಎಂದ ವರ್ತೂರ್! ನಾಚಿ ನೀರಾದ ‘ಬೆಂಕಿ’ ಒಪ್ಪಿಗೆ ಕೊಟ್ಟೇಬಿಟ್ರಾ? 

ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೇನೂ ಭರ್ತಿಯಾಗಿಯಾಯ್ತು. ಹಾಗಾದ್ರೆ ಅವರಿಗೆ ಪಾಠ ಮಾಡುವ ಗುರುಗಳು ಯಾರು? ಮೊದಲ ತರಗತಿಯಲ್ಲಿ ‘ವ್ಯಕ್ತಿತ್ವ ವಿಕಸನ’ದ ಬಗ್ಗೆ ಪಾಠ ಮಾಡಲು ಬಂದವರು, ತನಿಷಾ ಟೀಚರ್! ಅಷ್ಟು ಸುಂದರ ಟೀಚರ್ ಪಾಠ ಮಾಡಲು ಬಂದರೆ ಹಾಜರಿಗೇನು ಕಮ್ಮಿ? ಅದರಲ್ಲಿಯೂ ಲಾಸ್ಟ್‌ ಬೆಂಚ್‌ ಹುಡುಗ ವರ್ತೂರು ಸಂತೋಷ್‌ ಅಂತೂ, ‘ನೀವ್ ಚೆನ್ನಾಗ್ ಕಾಣಿಸ್ತಾ ಇದೀರಾ ಮಿಸ್‌’ ಎಂದು ನಿಂತಲ್ಲೇ ಕೈ ಬೀಸಿದ್ದಾರೆ. ಅದಕ್ಕೆ ತನಿಷಾ ಮಿಸ್ ನಾಚಿಕೊಂಡಿದ್ದಂತೂ ನೋಡಿ ಕಲಿಯಬೇಕು ಎನ್ನುವ ಹಾಗೇ ಇತ್ತು. ಆದರೆ ನಾಚಿಕೆಯನ್ನು ಮುಚ್ಚಿಟ್ಟುಕೊಂಡ ಮಿಸ್‌, ವರ್ತೂರ್‍ಗೆ ಬೆಂಚ್‌ ಮೇಲೆ ನಿಂತುಕೊಳ್ಳುವ ಶಕ್ಷೆ ಕೊಟ್ಟಿದ್ದಾರೆ. ಅಲ್ಲದೇ ಸ್ಲೇಟಿನ ಮೇಲೆ, ‘ಐ ಲವ್ ಯೂ’ ಎಂದು ಬರೆದು ಓದುವಂತೆ ಕೇಳುತ್ತಿದ್ದಾರೆ.

ವ್ಯಕ್ತಿತ್ವ ವಿಕಸದ ಪಾಠಗಳನ್ನು ಕೇಳಿದ ಮೇಲೆ ಭಾಷೆಯ ಪಾಠವೂ ಬೇಕಲ್ಲವೇ? ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಪಾಠ ಮಾಡಿಲ್ಲವೆಂದರೆ ಹೇಗೆ? ಕನ್ನಡ ಕಲಿಸಲು ಬಂದ ಮೇಷ್ಟ್ರು ಯಾರು ಗೊತ್ತೆ? ವಿದೇಶದಿಂದ ಬಂದಿರುವ ಮೈಕಲ್‌, ಕೋಟು ತೊಟ್ಟು ‘ಕನ್ನಡ ತರಗತಿ’ ಮಾಡಲು ಸಜ್ಜಾಗಿದ್ದಾರೆ. 

ಇದನ್ನೂ ಓದಿ: BBK 10: "ನನಗೇನೂ ಕಾಣಿಸ್ತಾ ಇಲ್ಲ" ಅಂತ ಕಣ್ಣೀರಿಟ್ಟ ಸಂಗೀತಾ: ಕಾರ್ತಿಕ್‌ ಕ್ಷಮೆ ಕೇಳಿದ್ದು ಯಾಕೆ?

‘ವಿದೇಶದಿಂದ ಬಂದಿದೀನಿ. ಕನ್ನಡ ಭಾಷೆಯ ಮೇಲೆ ನನಗೆ ಪ್ರೀತಿ ಆಯ್ತು. ಈಗ ಪಂಡಿತ ಆಗಲು ಯತ್ನಿಸುತ್ತಿದ್ದೇನೆ’ ಎಂದಿದ್ದಾರೆ ಮೈಕಲ್ ಮೇಷ್ಟ್ರು. ಅಷ್ಟೇ ಅಲ್ಲ, ಪುಂಡ ಹುಡುಗ ಕಾರ್ತಿಕ್‌ಗೆ, ‘ಆಂಗ್ಲ ಭಾಷೆ ಬಳಕೆ ಮಾಡಿದರೆ ಶಿಕ್ಷೆ ಕೊಡ್ತೀನಿ’ ಎಂದು ಎಚ್ಚರಿಕೆ ಬೇರೆ ನೀಡಿದ್ದಾರೆ. ‘ಎಲ್ಲಾದರೂ ಇರು ಎಂತಾದರೂ ಇರು

ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಮೈಕಲ್ ಹೇಳುತ್ತಿದ್ದರೆ ವಿದ್ಯಾರ್ಥಿಗಳ ಬಾಯಲ್ಲಿ ‘ಕನ್ನಡ… ರೋಮಾಂಚನವೀ ಕನ್ನಡ’ ಎಂಬ ಹಾಡು ತಂತಾನೆಯೇ ಹೊಮ್ಮಿದೆ. 

ಈ ಕನ್ನಡ ಕ್ಲಾಸ್‌ ಅನ್ನು ನೋಡಿದ ಎಲ್ಲರಿಗೂ ರೋಮಾಂಚನ ಹುಟ್ಟಿಸುವುದಂತೂ ಖಂಡಿತ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News