BBK 10: ವಿನಯ್ ‘ಅಣ್ಣ’ನಿಗೆ ತುಕಾಲಿ ಸೇವೆ ಮಾಡ್ತಿರೋದಾದ್ರೂ ಯಾಕೆ?

Bigg Boss Kannada Season 10: ಇದನ್ನು ಕೇಳಿ ತುಕಾಲಿ ಸಂತು, ವರ್ತೂರು ಸಂತೋಷ್‌ ಮತ್ತು ತನಿಷಾ ಶಾಕ್‌ ಆಗುತ್ತಾರೆ. 

Written by - Chetana Devarmani | Last Updated : Jan 10, 2024, 11:09 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ವಿನಯ್‌ ಆಜ್ಞೆಯನ್ನು ಪಾಲಿಸುತ್ತಿರುವ ತುಕಾಲಿ
  • ತುಕಾಲಿ ಸಂತು ಈ ಸೇವೆ ಮಾಡ್ತಿರೋದಾದ್ರೂ ಯಾಕೆ?
BBK 10: ವಿನಯ್ ‘ಅಣ್ಣ’ನಿಗೆ ತುಕಾಲಿ ಸೇವೆ ಮಾಡ್ತಿರೋದಾದ್ರೂ ಯಾಕೆ? title=

Bigg Boss Kannada Season 10: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಫಿನಾಲೆ ವೀಕ್‌ ಸನಿಹದಲ್ಲಿದೆ. ಈ ಮಧ್ಯೆ ಬಿಗ್‌ ಬಾಸ್‌ ಟಿಕೆಟ್‌ ಟು ಫಿನಾಲೆ ಎಂದು ಸ್ಪರ್ಧಿಗಳಿಗೆ ಟಾಸ್ಕ್‌ನ್ನು ನೀಡುತ್ತಿದ್ದಾರೆ. ವಾರ ಪೂರ್ತಿ ಬಿಗ್‌ ಬಾಸ್‌ ನೀಡುವ ಟಾಸ್ಕ್‌ಗಳಲ್ಲಿ ಗೆದ್ದು ಅತಿ ಹೆಚ್ಚು ಅಂಕ ಹೊಂದಿದವರು ಫಿನಾಲೆಗೆ ಡೈರೆಕ್ಟ್‌ ಎಂಟ್ರಿ ಪಡೆಯುತ್ತಾರೆ. ಈ ಮಧ್ಯೆ ಬಿಗ್‌ ಬಾಸ್‌ ಮನೆಯಲ್ಲಿ ಹೊಸದೊಂದು ಬೆಳವಣಿಗೆ ಕಂಡುಬಂದಿದೆ. ತುಕಾಲಿ ಸಂತು ಅವರು ವಿನಯ್‌ ಹೇಳಿದ ಎಲ್ಲ ಆಜ್ಞೆಯನ್ನು ಪಾಲಿಸುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ವೀಕ್ಷಕರ ಪ್ರಶ್ನೆಯಾಗಿದೆ.

ಬಿಗ್‌ ಬಾಸ್‌ ಮನೆಯಗಾರ್ಡನ್‌ ಏರಿಯಾದಲ್ಲಿ ರಾತ್ರಿ ವೇಳೆ ವಿನಯ್‌, ತುಕಾಲಿ ಸಂತು, ವರ್ತೂರು ಸಂತೋಷ್‌ ಮತ್ತು ತನಿಷಾ ಮಾತನಾಡುತ್ತ ಕುಳಿತಿರುತ್ತಾರೆ. ಈ ವೇಳೆ ವಯಸ್ಸಿನ ಬಗ್ಗೆ ಮಾತುಕತೆ ನಡೆಯುತ್ತಿರುತ್ತದೆ. ಆಗ ವಿನಯ್‌ ತಮ್ಮ ನಿಜವಾದ ವಯಸ್ಸನ್ನ ರಿವೀಲ್‌ ಮಾಡುತ್ತಾರೆ. ಇದನ್ನು ಕೇಳಿ ತುಕಾಲಿ ಸಂತು, ವರ್ತೂರು ಸಂತೋಷ್‌ ಮತ್ತು ತನಿಷಾ ಶಾಕ್‌ ಆಗುತ್ತಾರೆ. 

ಇದನ್ನೂ ಓದಿ: ಬಿಗ್ ಬಾಸ್ ನಲ್ಲಿ ನೇರವಾಗಿ ಫೈನಲ್ ಗೆ ಟಿಕೆಟ್ ಪಡೆದ ಸ್ಪರ್ಧಿ! ಇವರಿಗಿಲ್ಲ ಇನ್ನು ನಾಮಿನೇಷನ್ ಭಯ 

ವಿನಯ್‌ ಗೌಡ ತಮಗೆ ಈ ಮಾರ್ಚ್‌ ಬಂದರೆ 40 ವರ್ಷ ತುಂಬುತ್ತೆ ಎಂದು ಹೇಳಿದಾಗ ತುಕಾಲಿ ಸಂತು, ವರ್ತೂರು ಸಂತೋಷ್‌ ಮತ್ತು ತನಿಷಾ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ವಿನಯ್‌ ವಯಸ್ಸು ತಿಳಿದ ತುಕಾಲಿ ಇದ್ದಕ್ಕಿದ್ದಂತೆ ಅವರಿಗೆ ಸಿಕ್ಕಾಪಟ್ಟೆ ಗೌರವ ಕೊಡಲು ಶುರು ಮಾಡುತ್ತಾರೆ. 

ʻಅಣ್ಣ ನೀವ್‌ ಹೇಳಿದ್ದೆಲ್ಲ ತಲೆ ಮೇಲೆ ಹೊತ್ಕೊಂಡು ಮಾಡ್ತಿನಿʼ ಎಂದು ತುಕಾಲಿ ಹೇಳುತ್ತಾರೆ. ಅಣ್ಣ ನೀರೆನಾದ್ರೂ ಬೇಕೇ ಎಂದು ತುಕಾಲಿ ಕೇಳುತ್ತಾರೆ. ಇದಕ್ಕೆ ವಿನಯ್‌ ತಮ್ಮ ಮಗ್‌ ಕೊಟ್ಟು ಇದನ್ನ ತೊಳೆದು ಬಿಸಿ ನೀರು ತುಂಬಿಕೊಂಡು ಬಾ ಎನ್ನುತ್ತಾರೆ. ಆಗ ತುಕಾಲಿ ಮನೆಯೊಳಗೆ ಹೋಗುತ್ತಾರೆ. ಇಲ್ಲಿಂದ ತುಕಾಲಿ ಸಂತು ಅವರು ವಿನಯ್‌ ಹೇಳಿದ ಕೆಲಸ ಏನೇ ಇದ್ರೂ ಅದನ್ನು ಮಾಡಲು ಅಋಂಭಿಸುತ್ತಾರೆ. ತುಕಾಲಿ ಅವರಿಗಿಂತ ವಿನಯ್‌ ವಯಸ್ಸಿನಲ್ಲಿ ದೊಡ್ಡವರಾದ ಕಾರಣ ಹೀಗೆ ಅವರು ಹೇಳಿದ ಪ್ರತಿ ಕೆಲಸವನ್ನೂ ತುಕಾಲಿ ಮಾಡುತ್ತಿದ್ದಾರೆ. 

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಸಿಕ್ಕ ಪೇಮೆಂಟ್ ಎಷ್ಟು? ಮಾಹಿತಿ ಬಹಿರಂಗಪಡಿಸಿದ ನಟಿ ಸಿರಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News