Bachchhan Paandey Trailer: ಖತರ್ನಾಕ್ ಅವತಾರದಲ್ಲಿ ಕಾಣಿಸಿಕೊಂಡ Akshay Kumar

Bachchhan Paandey Trailer: ಅಕ್ಷಯ್ ಕುಮಾರ್ (Akshay Kumar) ಅಭಿನಯದ ಬಚ್ಚನ್ ಪಾಂಡೆ (Bachchhan Paandey)  ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಿಮಗೆ ಅಕ್ಷಯ್ ಅವರ ಭಯಾನಕ ಲುಕ್ ಕಾಣಿಸಲಿದೆ.  

Written by - Nitin Tabib | Last Updated : Feb 18, 2022, 02:18 PM IST
  • ಅಕ್ಷಯ್ ಪಾಂಡೆ ಬಚ್ಚನ್ ಪಾಂಡೆ ಟ್ರೈಲರ್ ಬಿಡುಗಡೆ.
  • ಚಿತ್ರದಲ್ಲಿ ಅಕ್ಷಯ ತುಂಬಾ ಖತರ್ನಾಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
  • ಚಿತ್ರ ಮಾರ್ಚ್ 18ಕ್ಕೆ ಬಿಡುಗಡೆಯಾಗಲಿದೆ.
Bachchhan Paandey Trailer: ಖತರ್ನಾಕ್ ಅವತಾರದಲ್ಲಿ ಕಾಣಿಸಿಕೊಂಡ Akshay Kumar title=
Bachchhan Paandey Trailer (Twitter)

Bachchhan Paandey Trailer Out: ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಪ್ರತಿ ಬಾರಿಯೂ ಹೊಸತನ್ನು ತಂದು ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಾರೆ. ಅಕ್ಷಯ್ ಅಭಿನಯದ ಬಚ್ಚನ್ ಪಾಂಡೆ (Bachchhan Paandey)  ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅಭಿಮಾನಿಗಳ ಈ ನಿರೀಕ್ಷೆ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಇಂದು ಬಚ್ಚನ್ ಪಾಂಡೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದರಲ್ಲಿ ಅಕ್ಷಯ್ ಭಯಾನಕ ಲುಕ್‌ನಲ್ಲಿ ಅದ್ಭುತವಾದ ಆಕ್ಷನ್ ಮಾಡುತ್ತಿರುವುದು ಕಂಡುಬಂದಿದೆ. ಕೃತಿ ಸನೋನ್ (Kriti Sanon), ಅರ್ಷದ್ ವಾರ್ಸಿ (Arshad Warsi), ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಮತ್ತು ಪಂಕಜ್ ತ್ರಿಪಾಠಿ (Pankaj Tripathi)  ಚಿತ್ರದಲ್ಲಿ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಚ್ಚನ್ ಪಾಂಡೆ ಟ್ರೈಲರ್ (Bachchhan Paandey Trailer) ಹೇಗಿದೆ ನೋಡೋಣ ಬನ್ನಿ.

ಟ್ರೈಲರ್ ಹೇಗಿದೆ?
ಚಿತ್ರದ ಟ್ರೈಲರ್ ಕೃತಿ ಸನೋನ್ ಕನಸಿನಿಂದ ಆರಂಭವಾಗುತ್ತದೆ. ಬಚ್ಚನ್ ಪಾಂಡೆ ಕುರಿತು ಚಿತ್ರ ಮಾಡುವುದು ಅವಳ ಕನಸು. ಚಿತ್ರದಲ್ಲಿ ಆಕೆ ಓರ್ವ ನಿರ್ದೆಶಕಿಯಾಗಿದ್ದಾಳೆ. ಟ್ರೈಲರ್ ನಲ್ಲಿ ಅವಳು ತನ್ನ ಸ್ನೇಹಿತ ಅರ್ಶದ್ ವಾರ್ಸಿಗೆ ಬಚ್ಚಾ ಪಾಂಡೆ ಕುರಿತು ಚಿತ್ರ ತಯಾರಿಸಲು ಹೇಳುತ್ತಾಳೆ. ಆಗ ಬಚ್ಚನ್ ಪಾಂಡೆ ಕುರಿತು ಚಿತ್ರ ತಯಾರಿಸುವುದು ರಿಸ್ಕಿ ಸಂಗತಿಯಾಗಿದೆ ಎಂದು ಹೇಳುತ್ತಾರೆ. ಆತ ಓರ್ವ ಕಿಲ್ಲರ್ ಆಗಿದ್ದಾನೆ ಎಂದು ಸಮಜಾಯಿಸಿ ಹೇಳುತ್ತಾರೆ. ಬಚ್ಚನ್ ಪಾಂಡೆ ಅವರ ಒಂದು ಕಣ್ಣು ಕಲ್ಲಿನ ಕಣ್ಣಾಗಿದೆ ಎಂದು ಹೇಳುತ್ತಾರೆ. ಆಗ ಬಚ್ಚನ್ ಪಾಂಡೆ ಅವರ ಖತರ್ನಾಕ್ ಲುಕ್ ತೆರೆ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಅವರು ಜಬರ್ದಸ್ತ್ ಆಕ್ಷನ್ ನಡೆಸುತ್ತಿರುವುದನ್ನು ತೋರಿಸಲಾಗಿದೆ.

ಜನರ ಹತ್ಯೆಗೈಯುವುದು ಬಚ್ಚನ್ ಪಾಂಡೆ ವೃತ್ತಿ. ಚಿತ್ರ ನಿರ್ಮಿಸಲು ಸಹಾಯ ಮಾಡಿದರೆ, ಚಿತ್ರದ ಆಫಾರ್ ನೀಡುವುದಾಗಿ ಅರ್ಶದ್ ವಾರ್ಷಿಗೆ ಕೃತಿ ಆಮೀಷ ಒಡ್ಡುತ್ತಾಳೆ. ಆ ಬಳಿಕ ಇಬ್ಬರು ಸೇರಿ ಬಚ್ಚನ್ ಪಾಂಡೆ ಮೇಲೆ ಚಿತ್ರ ನಿರ್ಮಿಸಲು ಹೊರಡುತ್ತಾರೆ. ಇಬ್ಬರು ಮೊದಲು ಬಚ್ಚನ್ ಪಾಂಡೆ ಚಮಚಾಗಳನ್ನು ಹಿಡಿಯುತ್ತಾರೆ ಮತ್ತು ವಿಷಯದ ಕುರಿತು ಅವರಿಗೆ ಮಾಹಿತಿ ನೀಡುತ್ತಾರೆ. ಬಳಿಕ ಕೃತಿ ಸನೋನ್ ಬಚ್ಚನ್ ಪಾಂಡೆಯನ್ನು ಭೇಟಿಯಾಗುತ್ತಾಳೆ. ಇದರ ಜೊತೆಗೆಯೇ ಜಾಕ್ವೆಲಿನ್ ಫರ್ನಾಂಡಿಸ್ ಎಂಟ್ರಿಯಾಗುತ್ತದೆ. ಆಕೆ ಬಚ್ಚನ್ ಪಾಂಡೆಯ ಗರ್ಲ್ ಫ್ರೆಂಡ್ ಆಗಿರುತ್ತಾಳೆ ಮತ್ತು ಪಾಂಡೆ ಆಕೆಯನ್ನು ಕೂಡ ಚಿತ್ರದಲ್ಲಿ ಹತ್ಯೆಗೈದಿರುತ್ತಾನೆ.

ಇದನ್ನೂ ಓದಿ-"ಮದುವೆಯಾಗಲು ನಾನಿನ್ನೂ ಚಿಕ್ಕವಳು" ಎಂದ 'ಪುಷ್ಪ' ಚೆಲುವೆ.. ಸಂಗಾತಿ ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ

ಕೃತಿ ಬಚ್ಚನ್ ಪಾಂಡೆ ಕುರಿತು ಚಿತ್ರ ನಿರ್ಮಿಸುತ್ತಾಳೋ ಅಥವಾ ಇಲ್ಲವೋ ಅಥವಾ ತನ್ನ ಸ್ನೇಹಿತನ ಜೊತೆಗೆ ಸೇರಿ ಅಲ್ಲಿಂದ ಕಾಲು ಕೀಳುವಲ್ಲಿ ಯಶಸ್ವಿಯಾಗುತ್ತಾಳೆಯಾ ಎಂಬುದನ್ನು ತಿಳಿಯಲು ನೀವು ಚಿತ್ರ ಬಿಡುಗಡೆಯವರೆಗೆ ಕಾಯಬೇಕು. ಆದರೆ ಇದೊಂದು ಬ್ಲಾಕ್ ಬಸ್ಟರ್ ಹಿಟ್ ಚಿತ್ರವಾಗಿರುವ ಎಲ್ಲಾ ಸಂಕೇತಗಳು ಚಿತ್ರದ ಟ್ರೈಲರ್ ನಲ್ಲಿ ಕಂಡುಬರುತ್ತಿವೆ.

ಇದನ್ನೂ ಓದಿ-'ಅಥರ್ವ' ರಗಡ್ ಲುಕ್ ನಲ್ಲಿ ಕೂಲ್ ಕ್ಯಾಪ್ಟನ್.. ಧೋನಿ ಮೊದಲ ಪೋಸ್ಟರ್ ಬಿಡುಗಡೆ

ಬಚ್ಚನ್ ಪಾಂಡೆ ಮಾರ್ಚ್ 18ರಂದು ಬೆಳ್ಳಿ ಪರದೆಗೆ ಬರಲಿದೆ. ಫರ್ಹಾದ್  ಸಾಮಜಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಹೋಳಿ ಹಬ್ಬದಂದು ಧಮಾಲ್ ಸೃಷ್ಟಿಸಲು ಮಾಡಲು  ಚಿತ್ರ ಸಿದ್ಧಗೊಂಡಿದೆ.

ಇದನ್ನೂ ಓದಿ-'ಮೇಡ್ ಇನ್ ಚೈನಾ'.. ಇದು ಪ್ರಾಡಕ್ಟ್‌ ಅಲ್ಲ, ಕನ್ನಡದ ಡಿಫರೆಂಟ್‌ ಸಿನಿಮಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News