ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹೊಸ ಉಡುಪಿಗೆ ಮನಸೋತು ಕೆ.ಎಲ್.ರಾಹುಲ್ ಹೇಳಿದ್ದೇನು?

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಭಾರತದ ಕ್ರಿಕೆಟರ್ ಕೆ.ಎಲ್.ರಾಹುಲ್ ನಡುವೆ ಹಲವಾರು ಊಹಾಪೋಹಗಳು ನಡೆಯುತ್ತಿರುವ ಬೆನ್ನಲ್ಲೇ ಈಗ ಇದಕ್ಕೆ ಸಾಕ್ಷಿ ಎನ್ನುವಂತೆ ರಾಹುಲ್ ಅತಿಯಾ ಪೋಸ್ಟ್ ಗೆ ಇನ್ಸ್ಟಾಗ್ರಾಂ ನಲ್ಲಿ ನೀಡಿರುವ ಪ್ರತಿಕ್ರಿಯೆ ಮತ್ತಷ್ಟು ಪುಷ್ಟಿಕರಿಸುವಂತೆ ಮಾಡಿದೆ.

Last Updated : Apr 9, 2020, 10:09 PM IST
ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹೊಸ ಉಡುಪಿಗೆ ಮನಸೋತು ಕೆ.ಎಲ್.ರಾಹುಲ್ ಹೇಳಿದ್ದೇನು?  title=
file photo

ನವದೆಹಲಿ: ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಭಾರತದ ಕ್ರಿಕೆಟರ್ ಕೆ.ಎಲ್.ರಾಹುಲ್ ನಡುವೆ ಹಲವಾರು ಊಹಾಪೋಹಗಳು ನಡೆಯುತ್ತಿರುವ ಬೆನ್ನಲ್ಲೇ ಈಗ ಇದಕ್ಕೆ ಸಾಕ್ಷಿ ಎನ್ನುವಂತೆ ರಾಹುಲ್ ಅತಿಯಾ ಪೋಸ್ಟ್ ಗೆ ಇನ್ಸ್ಟಾಗ್ರಾಂ ನಲ್ಲಿ ನೀಡಿರುವ ಪ್ರತಿಕ್ರಿಯೆ ಮತ್ತಷ್ಟು ಪುಷ್ಟಿಕರಿಸುವಂತೆ ಮಾಡಿದೆ.

ಇನ್ಸ್ಟಾಗ್ರಾಂನಲ್ಲಿ ಕಂಗೊಳಿಸುವ ಹೊಸ ಉಡುಪಿನೊಂದಿಗೆ ಮಿಂಚುತ್ತಿರುವ ಅತಿಯಾ ಶೆಟ್ಟಿ ಪೋಸ್ಟ್ ಗೆ ಕೆ.ಎಲ್.ರಾಹುಲ್ ನೈಸ್ ಶರ್ಟ್ ಎಂದು ಪ್ರತಿಕ್ರಿಯಿಸಿದ್ದಾರೆ.ಇದನ್ನು ತಕ್ಷಣ ಗುರುತಿಸಿದ ಗಲ್ಲಿ ಬಾಯ್ ತಾರೆ ಸಿದ್ಧಾಂತ್ ಚತುರ್ವೇದಿ ಕಾಮೆಂಟ್ ವಿಭಾಗದಲ್ಲಿ ಬೆಂಕಿಯ ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.

 
 
 
 

 
 
 
 
 
 
 
 
 

party of two! 📸 ft with @sashajairam

A post shared by Athiya Shetty (@athiyashetty) on

ಕಳೆದ ವರ್ಷ ಅಥಿಯಾ ಮತ್ತು ಕೆ.ಎಲ್. ರಾಹುಲ್ ಅವರ ಸಂಬಂಧದ ವದಂತಿಗಳು ಹೊರಬಂದವು, ಕ್ರಿಕೆಟಿಗ ಆಕೆಗೆ ಜನ್ಮದಿನದ ಶುಭಾಶಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಂತರ. ಈ ವರ್ಷದ ಆರಂಭದಲ್ಲಿ, ಕ್ರಿಕೆಟಿಗ ಅಥಿಯಾ ಜೊತೆಗೆ ತನ್ನ ಚಿತ್ರವನ್ನು ಪೋಸ್ಟ್ ಮಾಡಿದ್ದು, ಅದು ತುಂಬಾ ವೈರಲ್ ಆಗಿದೆ.ಕೆ.ಎಲ್.ರಾಹುಲ್ ಅವರು ಸುನಿಯೆಲ್ ಶೆಟ್ಟಿ ಅವರ ಚಿತ್ರ ಹೇರಾ ಫೆರಿ ಎಂಬ ಶೀರ್ಷಿಕೆಯನ್ನು ಉಲ್ಲೇಖಿಸಿ 'ಹಲೋ, ದೇವಿ ಪ್ರಸಾದ್?' ಎಂದು ಬರೆದುಕೊಂಡಿದ್ದರು.

ಸುನಿಯೆಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು, 2015 ರ ಹೀರೋ ಚಿತ್ರದ ಮೂಲಕ ಸೂರಜ್ ಪಾಂಚೋಲಿ ಜೊತೆಯಾಗಿ ನಟಿಸಿದ್ದು, ಇದು ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿದೆ. ಅವರು ಮುಬಾರಕನ್ ನಲ್ಲಿಯೂ ಕಾಣಿಸಿಕೊಂಡರು ಮತ್ತು ಕೊನೆಯದಾಗಿ ಮೋಟಿಚೂರ್ ಚಕ್ನಾಚೂರ್ ನಲ್ಲಿ ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಕಾಣಿಸಿಕೊಂಡಿದ್ದರು.

Trending News