ಜೈಲಿನಲ್ಲಿ ನನ್ನ ಬೆತ್ತಲೆ ಮಾಡಿ ಖಾಸಗಿ ಅಂಗ"ವನ್ನ ನೋಡಿದ್ರು...! ಖ್ಯಾತ ನಟಿಯ ಸಂಚಲನ ಹೇಳಿಕೆ

Kasthuri Shankar : ನಟಿ ಕಸ್ತೂರಿ ಶಂಕರ್ 90 ದಶಕದ ಟಾಪ್‌ ನಟಿಯರಲ್ಲಿ ಒಬ್ಬರು. ಕಳೆದ ವರ್ಷ ಈ ನಟಿಯ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ತೆಲುಗು ಜನರನ್ನು ಅವಮಾನಿಸಿದ ಕಾರಣ ವಿವಾದ ಭುಗಿಲೆದ್ದಿತ್ತು. ಇದರಿಂದ ಸೆರೆಮನೆ ವಾಸ ಅನುಭವಿಸಬೇಕಾಗಿ ಬಂತು.. ಇತ್ತೀಚೆಗಷ್ಟೇ.. ಜೈಲು ಜೀವನದ ಬಗ್ಗೆ ನಟಿ ನೀಡಿರುವ ಕಾಮೆಂಟ್‌ಗಳು ವೈರಲ್‌ ಆಗುತ್ತಿವೆ..

Written by - Krishna N K | Last Updated : Jan 17, 2025, 04:01 PM IST
    • ನಟಿ ಕಸ್ತೂರಿ ಶಂಕರ್ 90 ದಶಕದ ಟಾಪ್‌ ನಟಿಯರಲ್ಲಿ ಒಬ್ಬರು.
    • ನಟಿ ಕಸ್ತೂರಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು.
    • ಈ ಘಟನೆ ಅಂದು ದೊಡ್ಡ ಸಂಚಲನ ಸೃಷ್ಟಿಸಿತ್ತು.
ಜೈಲಿನಲ್ಲಿ ನನ್ನ ಬೆತ್ತಲೆ ಮಾಡಿ ಖಾಸಗಿ ಅಂಗ"ವನ್ನ ನೋಡಿದ್ರು...! ಖ್ಯಾತ ನಟಿಯ ಸಂಚಲನ ಹೇಳಿಕೆ title=

Kasthuri Shankar jail : ನಟಿ ಕಸ್ತೂರಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಚೆನ್ನೈಗೆ ಕರೆದೊಯ್ಯಲಾಯಿತು. ಈ ಘಟನೆ ಅಂದು ದೊಡ್ಡ ಸಂಚಲನ ಸೃಷ್ಟಿಸಿತ್ತು. ಮಹಿಳೆಯರ ಸೇವೆ ಮಾಡಲು ತೆಲುಗು ಜನರು ಬಂದಿದ್ದಾರೆ ಎಂದು ತಮಿಳುನಾಡಿನಲ್ಲಿ ಕಸ್ತೂರಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು.. ಅಲ್ಲದೆ, ದೂರು ಸಹ ದಾಖಲಾಗಿತ್ತು. 

ಈ ಕಾಮೆಂಟ್‌ಗಳು ತೆಲುಗು ಮತ್ತು ತಮಿಳು ಜನರ ನಡುವೆ ವಿವಾದ ಸೃಷ್ಟಿಸುವ ಉದ್ದೇಶದಿಂದ ಕೂಡಿವೆ ಎಂದು ನಟಿಯ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಮದ್ರಾಸ್ ನ್ಯಾಯಾಲಯವು ನಟಿ ಜಾಮೀನು ನಿರಾಕರಿಸಿತ್ತು ಇದರಿಂದಾಗಿ ಜೈಲುವಾಸವನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ:ಆ ನಟ ಬಲವಂತವಾಗಿ ಕಿಸ್ ಮಾಡಿದ್ದಕ್ಕೆ ವಾಂತಿ ಮಾಡಿ 100 ಸಲ ಮುಖ ತೊಳೆದಿದ್ದೆ: ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆ

ಇತ್ತೀಚೆಗಷ್ಟೇ ಜೈಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜೈಲಿನೊಳಗೆ ಪ್ರವೇಶಿಸಿದಾಗ ಬಟ್ಟೆ ಬಿಚ್ಚಿ ಸಂಪೂರ್ಣ ಬೆತ್ತಲಾಗಿ ತಪಾಸಣೆಗೆ ಒಳಗಾಗಬೇಕಾಯಿತು. ದೇಹದ ಪ್ರತಿಯೊಂದು ಭಾಗವನ್ನೂ ಕೂಲಂಕುಷವಾಗಿ ಪರೀಕ್ಷಿಸಿದರು ಎಂದು ನಟಿ ಹೇಳಿಕೊಂಡಿದ್ದಾರೆ... 

ಖಾಸಗಿ ಭಾಗದಲ್ಲಿಯೂ ಎನಾದರೂ ಇಟ್ಟುಕೊಂಡಿದ್ದಾಳೆ ಅಂತ ಪರೀಕ್ಷಿಸಿದರು.. ಜೈಲಿನಲ್ಲಿ ತಮಗೆ 644788798 ನಂಬರ್ ನಿಗದಿಪಡಿಸಲಾಗಿತ್ತು ಎಂದು ನಟಿ ಕಸ್ತೂರಿ ಬಹಿರಂಗಪಡಿಸಿದ್ದಾರೆ. ಆದರೆ, ಇದೆಲ್ಲವೂ ಜೈಲಿನ ವಿಧಿವಿಧಾನದ ಪ್ರಕಾರ ನಡೆದಿದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:'ಏಳು ಗಿರಿಗಳ  ಏಳು ಕಡಲಿನ ಆಚೆ': ವಿಷ್ಣು ಪ್ರಿಯಾ  ಪ್ರೇಮಗೀತೆ..  

ಮೊದಲೆರಡು ದಿನ ತುಂಬಾ ಒತ್ತಡ ಅನುಭವಿಸಿ ನಂತರ ಅಲ್ಲಿನ ವಾತಾವರಣಕ್ಕೆ ಒಂದಿಕೊಂಡೆ. ಜೈಲು ಜೀವನ ಅಷ್ಟು ಸುಲಭವಲ್ಲ. ಜೈಲಿನಲ್ಲಿ ಪದವಿಯವರೆಗೆ ಓದಬಹುದಾದ ಶಾಲೆಗಳಿವೆ ಎಂದಿರುವ ನಟಿ.. ತಾವು ದ್ರಾವಿಡ ರಾಜಕಾರಣದ ಪುಸ್ತಕಗಳನ್ನು ಓದುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News