Salaar movie : ʼಸಲಾರ್‌ʼ ಸಿಕ್ರೇಟ್‌ ರಿವೀಲ್‌..! ʼಪಾರ್ಟ್‌ 2ʼ ಕೂಡ ಬರುತ್ತೆ ಎಂದ ಡೈನಾಮಿಕ್‌ ಸ್ಟಾರ್‌

Devaraj on Salaar movie : ಸಲಾರ್‌ ಬಹು ತಾರಾಗಣ ಹೊಂದಿರುವ ಸಿನಿಮಾ, ಬಿಗ್‌ ಬಜೆಟ್‌ನಲ್ಲಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್‌ಗೆ ಜೊತೆಯಾಗಿ ನಟಿ ಶೃತಿ ಹಾಸನ್‌ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದರ ನಡುವೆ ಸಲಾರ್‌ನಲ್ಲಿ ನಟ ದೇವರಾಜ್‌ ಕೂಡ ನಟಿಸಿದ್ದಾಗಿ ಸ್ವತಃ ಅವರೇ ತಿಳಿಸಿದ್ದಾರೆ. ಅಲ್ಲದೆ ಒಂದು ಮುಖ್ಯ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.

Written by - Krishna N K | Last Updated : Apr 16, 2023, 04:32 PM IST
  • ಸಲಾರ್‌ ಬಹು ತಾರಾಗಣ ಹೊಂದಿರುವ ಸಿನಿಮಾ.
  • ಸಲಾರ್‌ನಲ್ಲಿ ನಟ ದೇವರಾಜ್‌ ಕೂಡ ನಟಿಸಿದ್ದಾರೆ.
  • ಇದೀಗ ಸಲಾರ್‌ ಗುಟ್ಟೊಂದನ್ನು ಡೈನಾಮಿಕ್‌ ಸ್ಟಾರ್‌ ರಟ್ಟು ಮಾಡಿದ್ದಾರೆ.
Salaar movie : ʼಸಲಾರ್‌ʼ ಸಿಕ್ರೇಟ್‌ ರಿವೀಲ್‌..! ʼಪಾರ್ಟ್‌ 2ʼ ಕೂಡ ಬರುತ್ತೆ ಎಂದ ಡೈನಾಮಿಕ್‌ ಸ್ಟಾರ್‌ title=

Salaar movie updates : ಡಾರ್ಲಿಂಗ್ ಪ್ರಭಾಸ್ ನಟನೆಯ ಪ್ರಶಾಂತ್‌ ನೀಲ್‌ ನಿರ್ದೇಶನದ ಬಹುನಿರೀಕ್ಷಿತ ʼಸಲಾರ್‌ʼ ಸಿನಿಮಾ ಟೈಟಲ್‌ ಅನೌನ್ಸ್‌ ಅದಾಗಿನಿಂದ ಸಖತ್‌ ಸುದ್ದಿಯಲ್ಲಿದೆ. ಡಾರ್ಲಿಂಗ್‌ ಪ್ಯಾನ್ಸ್‌ಗಳು ಸಹ ಸಲಾರ್‌ ಅಪ್‌ಡೇಟ್ಸ್‌ಗಳಿಗಾಗಿ ಬಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದೀಗ ಸಲಾರ್‌ ಕುರಿತು ಕನ್ನಡದ ಹಿರಿಯ ನಟ ಡೈನಾಮಿಕ್‌ ಸ್ಟಾರ್‌ ದೇವರಾಜ್‌ ಅವರು ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ.

ಹೌದು.. ಸಲಾರ್‌ ಬಹು ತಾರಾಗಣ ಹೊಂದಿರುವ ಸಿನಿಮಾ, ಬಿಗ್‌ ಬಜೆಟ್‌ನಲ್ಲಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರದ ಶೂಟಿಂಗ್‌ ಸಹ ಮುಕ್ತಾಯಗೊಂಡಿದೆ. ಈ ಚಿತ್ರದಲ್ಲಿ ಪ್ರಭಾಸ್‌ಗೆ ಜೊತೆಯಾಗಿ ನಟಿ ಶೃತಿ ಹಾಸನ್‌ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದರ ನಡುವೆ ಸಲಾರ್‌ನಲ್ಲಿ ನಟ ದೇವರಾಜ್‌ ಕೂಡ ನಟಿಸಿದ್ದಾಗಿ ಸ್ವತಃ ಅವರೇ ತಿಳಿಸಿದ್ದಾರೆ. ಅಲ್ಲದೆ, ಸಲಾರ್‌ ಕುರಿತು ಕೆಲವೊಂದಿಷ್ಟು ಇಂಟ್ರಸ್ಟಿಂಗ್‌ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: "ಪುಡ್‌ ಡೆಲಿವರಿ ಬಾಯ್‌ ಜೊತೆ ಅಮಾನವೀಯವಾಗಿ ನಡೆದುಕೊಂಡ ಹೃತಿಕ್ ರೋಷನ್ ಬಾಡಿಗಾರ್ಡ್‌"

ತೆಲುಗು ಯೂಟ್ಯೂಬ್‌ ಚಾನಲ್‌ ಒಂದಕ್ಕೆ ಸಂದರ್ಶನ ನೀಡಿದ ದೇವರಾಜ್‌, ಸಲಾರ್‌ ಸಿನಿಮಾದ ಕುರಿತು ಮಾತನಾಡುತ್ತಾ.. ʼಮೊದಲ ಭಾಗದಲ್ಲಿ ನಾನು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ, ಎರಡನೇ ಭಾಗದಲ್ಲಿ ಪ್ರಭಾಸ್ ಜೊತೆ ಹೆಚ್ಚಿನ ದೃಶ್ಯಗಳು ಮತ್ತು ಜಗಪತಿ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಕಾಂಬಿನೇಷನ್ ದೃಶ್ಯಗಳು ಇರುತ್ತವೆʼ ಎಂದು ಹೇಳಿದ್ದಾರೆ. ಇಷ್ಟು ಹೇಳಿದ್ದೆ ತಡ ನೆಟ್ಟಿಗರು ಸಲಾರ್‌ ಭಾಗ 2 ಸಹ ಬರುತ್ತೇ ಎನ್ನುವ ಸುದ್ದಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಮಾಡುತ್ತಿದ್ದಾರೆ.

ಈ ಹಿಂದೆ ಸಲಾರ್ ಉಗ್ರಂ ಚಿತ್ರದ ರಿಮೇಕ್ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರ್ ಹೇಳಿದ್ದರು. ಆದರೆ ನಂತರ ಪ್ರಶಾಂತ್ ನೀಲ್ ಇದು ಉಗ್ರಂ ರಿಮೇಕ್ ಅಲ್ಲ ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿದ್ದರು. ಇದುವರೆಗೂ ಸಲಾರ್‌ ಉಗ್ರಂ ಚಿತ್ರದ ರಿಮೇಕ್ ಅಲ್ಲ ಎನ್ನುವುದು ಸ್ಪಷ್ಟವಾಗಿಲ್ಲ. ಇದೀಗ ಸಲಾರ್ ಎರಡು ಭಾಗಗಲ್ಲಿ ರಿಲೀಸ್‌ ಆಗಲಿದೆ ಎಂಬ ವಿಚಾರ ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಈ ಕುರಿತು ಪ್ರಶಾಂತ್‌ ನೀಲ್‌ ಏನ್‌ ಹೇಳ್ತಾರೆ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News