ನನ್ನ ನೋಡ್ಬೇಕು ಅಂದ್ರೆ ಅದನ್ನ ತೋರಿಸಬೇಕು..! ಸಂಸದೆ ಕಂಗನಾ ಹೊಸ ರೂಲ್ಸ್‌

Kangana Ranaut New Rules : ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆಯಾಗಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಆಯ್ಕೆಯಾಗಿದ್ದಾರೆ.. ಸಧ್ಯ ಸಂಸದೆ ತಮ್ಮನ್ನು ಭೇಟಿಯಾಗಲು ಬರುವವರಿಗೆ ಹಲವಾರು ಹೊಸ ನಿಯಮಗಳನ್ನು ವಿಧಿಸಿದ್ದಾರೆ.. ಏನಿದು ಹೊಸ ಸುದ್ದಿ..? ಬನ್ನಿ ತಿಳಿಯೋಣ..

Written by - Krishna N K | Last Updated : Jul 12, 2024, 05:33 PM IST
    • ಬಾಲಿವುಡ್‌ ನಟಿ, ಮಂಡಿ ಕ್ರೇತ್ರದ ಬಿಜೆಪಿ ಸಂಸದೆ ಕಂಗನಾ ರಣವಾತ್‌
    • ಕಂಗನಾ ರಣವಾತ್‌ ತಮ್ಮ ಭೇಟಿಯಾಗಲು ಆಧಾರ್ ಕಾರ್ಡ್‌ನೊಂದಿಗೆ ಬರಬೇಕು
    • ತಮ್ಮನ್ನು ಏಕೆ ಭೇಟಿಯಾಗಲು ಬರುತ್ತಿದ್ದೀರಿ ಅಂತ ಲಿಖಿತವಾಗಿ ಬರೆಯಬೇಕು
ನನ್ನ ನೋಡ್ಬೇಕು ಅಂದ್ರೆ ಅದನ್ನ ತೋರಿಸಬೇಕು..! ಸಂಸದೆ ಕಂಗನಾ ಹೊಸ ರೂಲ್ಸ್‌ title=
Kangana Ranaut

Kangana Ranaut : ಬಾಲಿವುಡ್‌ ನಟಿ, ಮಂಡಿ ಕ್ರೇತ್ರದ ಬಿಜೆಪಿ ಸಂಸದೆ ಕಂಗನಾ ರಣವಾತ್‌ ತಮ್ಮ ಭೇಟಿಯಾಗಲು ಆಧಾರ್ ಕಾರ್ಡ್‌ನೊಂದಿಗೆ ಬರಬೇಕು ಅಂತ ತಿಳಿಸಿದ್ದಾರೆ. ಅಲ್ಲದೆ, ತಮ್ಮನ್ನು ಏಕೆ ಭೇಟಿಯಾಗಲು ಬರುತ್ತಿದ್ದೀರಿ ಅಂತ ಲಿಖಿತವಾಗಿ ಬರೆಯಬೇಕು. ಇದು ನನ್ನ ಕ್ಷೇತ್ರದ ಜನತೆಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಕೊಗೊಂಡ ನಿರ್ಧಾರ ಅಂತ ಸಂಸದರು ತಿಳಿಸಿದ್ದಾರೆ..

ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ ರನೌತ್, ಹಿಮಾಚಲ ಪ್ರದೇಶವು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದ್ದರಿಂದ ಮಂಡಿ ಪ್ರದೇಶದಿಂದ ನನ್ನನ್ನು ಭೇಟಿಯಾಗಲು ಬರುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು. ನೀವು ನನ್ನನ್ನು ಏಕೆ ಭೇಟಿಯಾಗಲು ಬರುತ್ತಿದ್ದೀರಿ ಎಂದು ಲಿಖಿತವಾಗಿ ಬರೆಯಬೇಕು. ನನ್ನ ಕ್ಷೇತ್ರದ ಜನತೆಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.. 

ಇದನ್ನೂ ಓದಿ:ಹುಡುಗರ ಜೊತೆ ರೂಮ್‌ನಲ್ಲಿದ್ದ ಸ್ಟಾರ್‌ ನಟಿಗೆ, ಮ್ಯಾನೇಜರ್‌ನಿಂದ ಮೋಸ..! ಅದು ಚನ್ನಾಗಿಲ್ಲ ಅಂತ ಹಾಸ್ಯ

ಉತ್ತರ ಹಿಮಾಚಲದ ಜನರು ಅವರನ್ನು ಭೇಟಿಯಾಗಲು ಬಯಸಿದರೆ ಮನಾಲಿಯಲ್ಲಿರುವ ಅವರು ಮನೆಗೆ ಭೇಟಿ ನೀಡಬಹುದು. ಮಂಡಿಯಲ್ಲಿರುವ ಜನರು ನಗರದ ನನ್ನ ಕಚೇರಿಗೆ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ನಿಮ್ಮ ವಿನಂತಿಗಳು ಮತ್ತು ಸಮಸ್ಯೆಗಳ ಬಗ್ಗೆ ನನ್ನನ್ನು ವೈಯಕ್ತಿಕವಾಗಿ ಭೇಟಿ ಮಾಡುವುದು ಉತ್ತಮ. ಲೋಕಸಭೆ ಸಂಸದನಾಗಿ ಸ್ಥಳೀಯ ಸಮಸ್ಯೆಗಳ ಪರಿಹಾರ ಮಾತ್ರವಲ್ಲ, ರಾಷ್ಟ್ರೀಯ ಸಮಸ್ಯೆಗಳನ್ನೂ ಬಗೆಹರಿಸುವುದು ನನ್ನ ಕೆಲಸ ಎಂದಿದ್ದಾರೆ ನೂತನ ಸಂಸದೆ.

ಇನ್ನು ಕಂಗನಾ ರಣಾವತ್ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಂಗನಾ ರಣಾವತ್ ವಿರುದ್ಧ ಸೋತ ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್, ಜನಪ್ರತಿನಿಧಿಯೊಬ್ಬರು ಈ ರೀತಿ ಮಾಡುವುದು ಸರಿಯಲ್ಲ. ಜನರು ಅವರನ್ನು ಭೇಟಿಯಾಗಬೇಕಾದರೆ ಆಧಾರ್ ಕಾರ್ಡ್ ತರುವ ಅಗತ್ಯವಿಲ್ಲ. ಆದ್ದರಿಂದ ರಾಜ್ಯದ ಪ್ರತಿಯೊಂದು ಭಾಗದ ಜನರನ್ನು ಭೇಟಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾಳೆ ಈ ಸುಂದರಿ..! ಹುಡುಗರು ಟಿವಿ ಬಿಟ್ಟು ಎದ್ರೆ ಕೇಳಿ..

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಪರವಾಗಿ ಕಂಗನಾ ರಣಾವತ್ ಸ್ಪರ್ಧಿಸಿದ್ದರು. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ಹಾಗೂ ಹಿಮಾಚಲ ಪ್ರದೇಶದ ಹಾಲಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದರು. ಕಂಗನಾ ರಣಾವತ್ 5.37 ಲಕ್ಷ ಮತಗಳನ್ನು ಪಡೆಯುವ ಮೂಲಕ ಗೆದ್ದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News