Viral Video: ಪೊಲೀಸ್ ಠಾಣೆಯಲ್ಲೇ ಮಹಿಳೆಗೆ ಮನಬಂದಂತೆ ಥಳಿಸಿದ ಬಿಜೆಪಿ ನಾಯಕ!

Maharashtra Shocker: ಸುಷ್ಮಾ ಅಂಧಾರೆ ಹಂಚಿಕೊಂಡಿರುವ ವಿಡಿಯೋದಲ್ಲಿ, ಠಾಣೆಯೊಳಗೆ ಬೆಂಚಿನ ಮೇಲೆ ಯುವಕನೊಂದಿಗೆ ಕುಳಿತಿದ್ದ ಮಹಿಳೆಗೆ ಶಿವ ತಾಯ್ಡೆ ಕಪಾಳಮೋಕ್ಷ ಮಾಡುತ್ತಾನೆ. ಪೊಲೀಸ್ ಅಧಿಕಾರಿಗಳು ತಡೆಯುವವರೆಗೂ ಆಕೆಗೆ ಥಳಿಸಿದ್ದಾನೆ. ​

Written by - Puttaraj K Alur | Last Updated : Aug 7, 2024, 06:55 PM IST
  • ಪೊಲೀಸ್‌ ಠಾಣೆಯಲ್ಲೇ ಮಹಿಳೆ ಮೇಲೆ ಹಲ್ಲೆ ಮಾಡಿದ ಬಿಜೆಪಿ ನಾಯಕ
  • ಮಹಾರಾಷ್ಟ್ರದ ಬುಲ್ಧಾನಾದಲ್ಲಿ ನಡೆದಿರುವ ಆಘಾತಕಾರಿ ವಿಡಿಯೋ ವೈರಲ್‌
  • ಬಿಜೆಪಿ ನಾಯಕನ ದುರ್ವರ್ತನೆ ವ್ಯಾಪಕ ಆಕ್ರೋಶ, ಕ್ರಮಕ್ಕೆ ಆಗ್ರಹ!
Viral Video: ಪೊಲೀಸ್ ಠಾಣೆಯಲ್ಲೇ ಮಹಿಳೆಗೆ ಮನಬಂದಂತೆ ಥಳಿಸಿದ ಬಿಜೆಪಿ ನಾಯಕ! title=
ಮಹಿಳೆಯ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ!

Maharashtra Viral Video: ಪೊಲೀಸ್ ಠಾಣೆಯಲ್ಲೇ ಮಹಿಳೆಯೊಬ್ಬರಿಗೆ ಬಿಜೆಪಿ ನಾಯಕನೊಬ್ಬ ಮನಬಂದಂತೆ ಥಳಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಬಿಜೆಪಿ ನಾಯಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಮಹಾರಾಷ್ಟ್ರದ ಬುಲ್ಧಾನಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನಗರದ ಪೊಲೀಸ್ ಠಾಣೆಯೊಳಗೆ ಬಿಜೆಪಿ ಮುಖಂಡನೊಬ್ಬ ಮಹಿಳೆಯೊಬ್ಬರಿಗೆ ಥಳಿಸಿದ್ದಾನೆ. ಶಿವಸೇನಾದ ವಕ್ತಾರೆ ಸುಷ್ಮಾ ಅಂಧಾರೆ ಅವರು ಈ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಬಿಜೆಪಿ ನಾಯಕ ಕೃತ್ಯವನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್ 3 ರಂದು ಖಾಲಿ ಇರುವ 12 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ

ಮಹಿಳೆಯ ಮೇಲೆ ಹಲ್ಲೆ ಮಾಡಿರುವುದು ಸ್ಥಳೀಯ ಬಿಜೆಪಿ ನಾಯಕ ಶಿವ ತಾಯ್ಡೆ ಎಂದು ತಿಳಿದುಬಂದಿದ್ದು, ಆತ ಮಲ್ಕಾಪುರದ ಕೃಷಿ ಸಮಿತಿಯ ಅಧ್ಯಕ್ಷನೂ ಆಗಿದ್ದಾನೆ. ಸುಷ್ಮಾ ಅಂಧಾರೆ ಹಂಚಿಕೊಂಡಿರುವ ವಿಡಿಯೋದಲ್ಲಿ, ಠಾಣೆಯೊಳಗೆ ಬೆಂಚಿನ ಮೇಲೆ ಯುವಕನೊಂದಿಗೆ ಕುಳಿತಿದ್ದ ಮಹಿಳೆಗೆ ಶಿವ ತಾಯ್ಡೆ ಕಪಾಳಮೋಕ್ಷ ಮಾಡುತ್ತಾನೆ. ಪೊಲೀಸ್ ಅಧಿಕಾರಿಗಳು ತಡೆಯುವವರೆಗೂ ಆಕೆಗೆ ಥಳಿಸಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಬಿಡಿಯಲು ಪ್ರಯತ್ನಿಸಿದ್ದಾರೆ. ಮಹಿಳೆ ಮೇಳೆ ಹಲ್ಲೆ ಮಾಡಿದ ಬಿಜೆಪಿ ನಾಯಕನ ಮೇಲೆ ಆಕೆಯ ಜೊತೆಗೆ ಕುಳಿತುಕೊಂಡಿದ್ದ ಯುವಕನೂ ಸಹ ಹಲ್ಲೇ ಮಾಡಲು ಮುಂದಾಗಿದ್ದಾನೆ.  

ನಂತರ ಮಹಿಳೆ ಮತ್ತು ಪೊಲೀಸ್ ಅಧಿಕಾರಿಯ ಮುಂದೆಯೇ ಕುಳಿತು ಶಿವ ತಾಯ್ಡೆ ಏರು ಧ್ವನಿಯಲ್ಲಿ ಯಾವುದೋ ವಿಷಯದ ಬಗ್ಗೆ ಚರ್ಚಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಆತ ಸಿಟ್ಟಿನಿಂದ ಚೇರ್‌ಅನ್ನು ಹಿಂದಕ್ಕೆ ತಳ್ಳಿ ಎದ್ದು ಹೋಗುತ್ತಾನೆ. ಮಹಿಳೆ ಹಾಗೂ ಬಿಜೆಪಿ ನಾಯಕ ಪೊಲೀಸ್‌ ಠಾಣೆಗೆ ಏಕೆ ಬಂದಿದ್ದರು? ಮಹಿಳೆ ಮೇಲೆ ಆತ ಹಲ್ಲೆ ನಡೆಸಲು ಕಾರಣವೇನು ಅನ್ನೋದು ತಿಳಿದುಬಂದಿಲ್ಲ.

ಇದನ್ನೂ ಓದಿ: ಕಾಚಿಗುಡ - ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ವೇಳಾಪಟ್ಟಿ ಬದಲಾವಣೆ

NCP ನಾಯಕಿ, ಸಂಸದೆ ಸುಪ್ರಿಯಾ ಸುಲೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಸೇರಿದಂತೆ ಕೆಲವರನ್ನು ಟ್ಯಾಗ್‌ ಮಾಡಿ ವಿಡಿಯೋ ಹಂಚಿಕೊಂಡಿರುವ ಸುಷ್ಮಾ ಅಂಧಾರೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಿಡಿಕಾರಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News