Viral Video: ಊರಿಗೆ ಬಂದ ಮೊಸಳೆಗೆ ಕಾಲಿನಿಂದ ಒದ್ದ ವ್ಯಕ್ತಿ, ಆಮೇಲೆ ಏನಾಯ್ತು ನೋಡಿ!

Uttar Pradesh Viral Video: ಇಡೀ ಗ್ರಾಮದ ಜನರೇ ಮೊಸಳೆ ಕಂಡು ಹೆದರುತ್ತಿರುವಾಗ ಓರ್ವ ವ್ಯಕ್ತಿ ಯಾವುದೇ ಭಯವಿಲ್ಲದೆ ಬೀದಿಯಲ್ಲಿ ತೆವಳುತ್ತಾ ಸಾಗುತ್ತಿದ್ದ ಮೊಸಳಗೆ ಕಾಲಿನಿಂದ ಒದ್ದಿದ್ದಾನೆ. ಯಾವಾಗ ಆತ ಕಾಲಿನಿಂದ ಒದ್ದನೋ ಮೊಸಳೆ ವೇಗವಾಗಿ ಮುಂದಕ್ಕೆ ಓಡಿ ಹೋಗಿದೆ.

Written by - Puttaraj K Alur | Last Updated : Aug 8, 2024, 06:00 PM IST
  • ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯ ಗ್ರಾಮಕ್ಕೆ ನುಗ್ಗಿದ ಬೃಹತ್‌ ಮೊಸಳೆ
  • ಗ್ರಾಮದ ಬೀದಿಗಳಲ್ಲಿ ಗಂಟೆಗಟ್ಟಲೇ ಸುತ್ತಾಡಿ ಆತಂಕ ಮೂಡಿಸಿದ ಮೊಸಳೆ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗಿರುವ ವಿಡಿಯೋ
Viral Video: ಊರಿಗೆ ಬಂದ ಮೊಸಳೆಗೆ ಕಾಲಿನಿಂದ ಒದ್ದ ವ್ಯಕ್ತಿ, ಆಮೇಲೆ ಏನಾಯ್ತು ನೋಡಿ!   title=
ಗ್ರಾಮಕ್ಕೆ ಎಂಟ್ರಿ ಕೊಟ್ಟ ಮೊಸಳೆ!

Uttar Pradesh Viral Video: ಕರ್ನಾಟಕ ಸೇರಿದಂತೆ ದೇಶದಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಭಾರೀ ಮಳೆಯಿಂದ ಕೇರಳದ ವಯನಾಡು ತತ್ತರಿಸಿದ ಹೋಗಿದೆ. ಇದುವರೆಗೆ ೩೫೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ. ಮಳೆಯ ಅಬ್ಬರಕ್ಕೆ ದೇಶದ ಹಲವೆಡೆ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಕೆಲವು ಕಡೆ ಸೇತುವೆಗಳು ಕುಸಿದಿವೆ. ಮಳೆಯ ಹೊಡೆತಕ್ಕೆ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಹೊರಬೀಡಲಾಗುತ್ತಿದೆ. 

ಭಾರೀ ಮಳೆಯಿಂದ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವು ಪ್ರದೇಶಗಳಲ್ಲಿ ನೀರು ನುಗ್ಗಿ ಇನ್ನಿಲ್ಲದ ಅವಾಂತರ ಸೃಷ್ಟಿಯಾಗಿದೆ. ಹಲವು ಕಡೆ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಜನರು ವಾಸಿಸುವ ಪ್ರದೇಗಳಿಗೆ ಅಪಾಯಕಾರಿ ಜಲಚರಗಳು ನುಗ್ಗುತ್ತಿವೆ. ಹೀಗಾಗಿ ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಹಾವು, ಚೇಳು, ಮೊಸಳೆ ಹೀಗೆ ಜಲಚರಗಳು ಜನರಿಗೆ ಭಯ ಹುಟ್ಟಿಸುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯ ಹಳ್ಳಿಯೊಂದಕ್ಕೆ ಬೃಹತ್‌ ಆಕಾರದ ಮೊಸಳೆಯೊಂದು ಎಂಟ್ರಿ ಕೊಟ್ಟು ಆಂತಕ ಮೂಡಿಸಿತ್ತು. 

ಇದನ್ನೂ ಓದಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಇನ್ನಿಲ್ಲ 

ಗ್ರಾಮದ ಬೀದಿಗಳಲ್ಲಿ ತೆವಳುತ್ತಾ ಸಾಗುತ್ತಿದ್ದ ಮೊಸಳೆಯನ್ನು ಕಂಡು ಜನರು ಹೌಹಾರಿಹೋಗಿದ್ದಾರೆ. ವರದಿಗಳ ಪ್ರಕಾರ, ನಂಗಲ್ ಸೋತಿ ಎಂಬ ಗ್ರಾಮದಲ್ಲಿ ಮೊಸಳೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಬೃಹತ್‌ ಮೊಸಳೆಯನ್ನು ನೋಡಲು ಗ್ರಾಮದ ಜನರು ಜಮಾಯಿಸಿದ್ದರು. ಈ ವೇಳೆ ಮೊಸಳೆ... ಮೊಸಳೆ.. ಅಂತಾ ಕೂಗಾಡಿದ್ದಾರೆ. ಜನರ ಕೂಗಿಗೆ ಮೊಸಳೆಯೇ ಆತಂಕಗೊಂಡಿದ್ದು, ತನ್ನ ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳದತ್ತ ದೌಡಾಯಿಸಲು ಪ್ರಯತ್ನಿಸಿದೆ. 

ಇಡೀ ಗ್ರಾಮದ ಜನರೇ ಮೊಸಳೆ ಕಂಡು ಹೆದರುತ್ತಿರುವಾಗ ಓರ್ವ ವ್ಯಕ್ತಿ ಯಾವುದೇ ಭಯವಿಲ್ಲದೆ ಬೀದಿಯಲ್ಲಿ ತೆವಳುತ್ತಾ ಸಾಗುತ್ತಿದ್ದ ಮೊಸಳಗೆ ಕಾಲಿನಿಂದ ಒದ್ದಿದ್ದಾನೆ. ಯಾವಾಗ ಆತ ಕಾಲಿನಿಂದ ಒದ್ದನೋ ಮೊಸಳೆ ವೇಗವಾಗಿ ಮುಂದಕ್ಕೆ ಓಡಿ ಹೋಗಿದೆ. ಈ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್‌ ವೈರಲ್‌ ಆಗುತ್ತಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ವರುಣಾರ್ಭಟ: ಸಮೇಜ್ ಸೇತುವೆ ಬಳಿ ಮೇಘಸ್ಫೋಟದಿಂದ 13 ಮಂದಿ ಸಾವು 

ಮೊಸಳೆಯನ್ನು ಕಂಡ ಗ್ರಾಮಸ್ಥರು ಘಟನೆಯ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಗ್ರಾಮದ ಸುತ್ತಮುತ್ತವೇ ಸುಮಾರು ಎರಡ್ಮೂರು ಗಂಟೆಗಳ ಕಾಲ ಸುತ್ತಾಡಿದ ಮೊಸಳೆಯನ್ನು ಅರಣ್ಯ ಇಲಾಖೆ ತಂಡವು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News