Merry Christmas 2020: ಸಂತಾ Coca-Cola ಮೆದುಳಿನ ಕೂಸೇ? ಇಲ್ಲಿದೆ Santa-Cola ಕನೆಕ್ಷನ್

Merry Christmas 2020: ಪ್ರತಿಸಲದಂತೆ ಈ ಬಾರಿಯೂ ಕೂಡ ತಂಪು ಪಾನೀಯ ಕಂಪನಿ ಕೋಕಾ-ಕೋಲಾ ತನ್ನ ಒಂದು ವ್ಯವಹಾರ ಲಾಭಕ್ಕಾಗಿ ಸಾಂಟಾ ಕ್ಲಾಸ್ ಎಂಬ ಪರಿಕಲ್ಪನೆ ಹುಟ್ಟುಹಾಕಿದೆಯೇ ಎಂಬ ಪ್ರಶ್ನೆ ಮತ್ತೊಮ್ಮೆ ಉದ್ಭವಿಸಿದೆ. ಹತ್ತಿರದಿಂದ ನೋಡಿದಾಗ, ನಿಖರವಾಗಿ ಒಂದು ಕೆಂಪು-ಬಿಳಿ ಬಣ್ಣವನ್ನು ಕೋಕಾ-ಕೋಲಾ ಹೆಸರಿನಲ್ಲಿ ಮತ್ತು ಸಾಂತಾ ಅವರ ಬಟ್ಟೆಗಳಲ್ಲಿ ನೀವು ಕಾಣಬಹುದು. ಆದರೆ, ಕೋಕ್ ಕಂಪನಿ ಸಾಂಟಾ ಜೊತೆ ತನ್ನ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತದೆ. ಹಾಗಾದರೆ ಯಾಕೆ ಈ ಎರಡು ಹೆಸರುಗಳಿಗೆ ಪರಸ್ಪರ ಕನೆಕ್ಷನ್ ಕಲ್ಪಿಸಲಾಗುತ್ತದೆ?

Written by - Nitin Tabib | Last Updated : Dec 25, 2020, 02:52 PM IST
  • ಕೊರೊನಾ ಪ್ರಕೋಪದ ನಡುವೆಯೂ ಕೂಡ ಇಂದು ವಿಶ್ವಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ
  • ಕೋಕಾ-ಕೋಲಾ ತನ್ನ ಒಂದು ವ್ಯವಹಾರ ಲಾಭಕ್ಕಾಗಿ ಸಾಂಟಾ ಕ್ಲಾಸ್ ಎಂಬ ಪರಿಕಲ್ಪನೆ ಹುಟ್ಟುಹಾಕಿದೆಯೇ ಎಂಬ ಪ್ರಶ್ನೆ ಮತ್ತೊಮ್ಮೆ ಉದ್ಭವಿಸಿದೆ.
  • ಈ ಕುರಿತು ಕೋಕಾ-ಕೋಲಾ ಕಂಪನಿ ನೀಡಿರುವ ಸ್ಪಷ್ಟನೆ ಏನು ಎಂಬುದನ್ನು ಇಲ್ಲಿ ತಿಳಿಯಿರಿ.
Merry Christmas 2020: ಸಂತಾ Coca-Cola ಮೆದುಳಿನ ಕೂಸೇ? ಇಲ್ಲಿದೆ Santa-Cola ಕನೆಕ್ಷನ್ title=
Merry Christmas 2020 (File Image)

ನವದೆಹಲಿ:  Merry Christmas 2020: ಕೊರೊನಾ ಪ್ರಕೋಪದ ನಡುವೆಯೂ ಕೂಡ ಇಂದು ವಿಶ್ವಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.  ಪ್ರತಿಸಲದಂತೆ ಈ ಬಾರಿಯೂ ಕೂಡ ತಂಪು ಪಾನೀಯ ಕಂಪನಿ ಕೋಕಾ-ಕೋಲಾ ತನ್ನ ಒಂದು ವ್ಯವಹಾರ ಲಾಭಕ್ಕಾಗಿ ಸಾಂಟಾ ಕ್ಲಾಸ್ ಎಂಬ ಪರಿಕಲ್ಪನೆ ಹುಟ್ಟುಹಾಕಿದೆಯೇ ಎಂಬ ಪ್ರಶ್ನೆ ಮತ್ತೊಮ್ಮೆ ಉದ್ಭವಿಸಿದೆ. ಹತ್ತಿರದಿಂದ ನೋಡಿದಾಗ, ನಿಖರವಾಗಿ ಒಂದು ಕೆಂಪು-ಬಿಳಿ ಬಣ್ಣವನ್ನು ಕೋಕಾ-ಕೋಲಾ ಹೆಸರಿನಲ್ಲಿ ಮತ್ತು ಸಾಂತಾ ಅವರ ಬಟ್ಟೆಗಳಲ್ಲಿ ನೀವು ಕಾಣಬಹುದು. ಆದರೆ, ಕೋಕ್ ಕಂಪನಿ ಸಾಂಟಾ ಜೊತೆ ತನ್ನ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತದೆ. ಹಾಗಾದರೆ ಯಾಕೆ ಈ ಎರಡು ಹೆಸರುಗಳಿಗೆ ಪರಸ್ಪರ ಕನೆಕ್ಷನ್ ಕಲ್ಪಿಸಲಾಗುತ್ತದೆ?

ವಾಸ್ತವದಲ್ಲಿ ಹೇಳುವುದಾದರೆ ಸಾಂತಾಕ್ಲಾಸ್ನ ಪರಿಕಲ್ಪನೆ ಸಂತ ನಿಕೋಲಸ್ನಿಂದ ಸ್ಫೂರ್ತಿ ಪಡೆದಿದೆ. ಸಂತ ನಿಕೋಲಸ್ ಮೂರನೆಯ ಶತಮಾನದಲ್ಲಿ ಯೇಸುವಿನ ಮರಣದ 280 ವರ್ಷಗಳ ನಂತರ ತುರ್ಕಿಸ್ತಾನದ ಮೈರಾದಲ್ಲಿ ಜನಿಸಿದ್ದರು. ಸಾಕಷ್ಟು ಶ್ರೀಮಂತ ಕುಟುಂಬಕ್ಕೆ ಸೇರಿದ ನಿಕೋಲಸ್ ಯಾವಾಗಲೂ ಇತರರಿಗೆ ಸಹಾಯ ಮಾಡುವುದನ್ನು ಪ್ರೀತಿಸುತ್ತಿದ್ದರು. ಮಧ್ಯರಾತ್ರಿಯಲ್ಲಿ ನಿರ್ಗತಿಕರು ಮಲಗಿದ್ದ ವೇಳೆಯಲ್ಲಿ ನಿಕೊಲಸ್ ಯಾರಿಗೂ ತಿಳಿಯದಂತೆ ಅವರ ಬಳಿ ಹೋಗಿ ಅವರಿಗೆ ಸಹಾಯ ಮಾಡುತ್ತಿದ್ದರು. ಅವರ ಸಹಾಯದ ಕುರಿತು ಹಲವು ದಂತಕಥೆಗಳು ಪ್ರಚಲಿತದಲ್ಲಿವೆ.

ಇದನ್ನು ಓದಿ- Merry Christmas 2020 WhatsApp Sticker: ನಿಮ್ಮ ಪ್ರೀತಿಪಾತ್ರರಿಗೆ WhatsApp Christmas 2020 ಸ್ಟಿಕ್ಕರ್‌ಗಳನ್ನು ಕಳುಹಿಸಲು ಇಲ್ಲಿದೆ ಸುಲಭ ವಿಧಾನ

ಪ್ರಸ್ತುತ ಪ್ರಚಲಿತದಲ್ಲಿರುವ ಸಾಂತಾ ಹೆಸರು ಡಚ್ ಹೆಸರು ಸಿಂಟರ್ ಕ್ಲಾಸ್ ನಿಂದ ಬಂದಿದೆ. ಕಾಲಕ್ರಮೇಣ ಇದು ಬದಲಾಗಿ ಸಾಂತಾಕ್ಲಾಸ್ ಆಗಿ ಮಾರ್ಪಟ್ಟಿದೆ. ಸಾಂತಾ ಕ್ರಿಸ್ಮಸ್ ಹಬ್ಬದ ಜೊತೆಗೆ ಯಾವುದೇ ನೇರ ಸಂಬಂಧ ಇರಲಿಲ್ಲ. ಆದರೆ ಅವರ ಹೆಸರನ್ನು ಕ್ರಿಸ್ಮಸ್ ಹಬ್ಬದ ಜೊತೆಗೆ ಜೋಡಿಸಲಾಯಿತು ಹಾಗೂ ಅವರ ಪರಿಕಲ್ಪನೆಯನ್ನು ಕೂಡ ರಚಿಸಲಾಯಿತು. 'ದಿ ಗಾರ್ಡಿಯನ್'ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ 18ನೇ ಶತಮಾನದ ಆರಂಭದಿಂದ ಸಂತಾ ಕ್ಲಾಸ್ ಚಿತ್ರಣ ಹೊರಹೊಮ್ಮಿದೆ ಎನ್ನಲಾಗಿದೆ. ಆಗ ಅವರ ಚಿತ್ರಣ ತೊಗಟೆಯ ಬಟ್ಟೆ ಧರಿಸಿರುವಂತೆ ತೋರಿಸಲಾಗುತ್ತಿತ್ತು.

ಬಳಿಕ ನಂತರದ ದಿನಗಳಲ್ಲಿ ಕಾಲಕ್ರಮೇಣ ಅವರ ಈ ಇಮೇಜ್ ಬದಲಾಯಿತು. ಸದ್ಯದ ಅವರ ಚಿತ್ರಣದಲ್ಲಿ ಕಾರ್ಟೂನ್ ರಚನೆಕಾರ ಥಾಮಸ್ ನೆಸ್ಟ್ ಅವರು ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ. ಸಾಮಾನ್ಯವಾಗಿ ರಾಜಕೀಯ ಕಾರ್ಟೂನ್ ರಚಿಸುವ ಈ ಕಲಾವಿದ ಸಂತಾ ಕ್ಲಾಸ್ ಚಿತ್ರಣ ರಚಿಸುವ ಪಣತೊಟ್ಟು, ಸಂತಾಕ್ಲಾಸ್ ಚರಿತ್ರೆಯನ್ನು ಆಧರಿಸಿ 1863ರಲ್ಲಿ ಹಾರ್ಪರ್ಸ್ ವೀಕ್ಲಿ ಪತ್ರಿಕೆಗಾಗಿ ಇಲಷ್ಟ್ರೆಶನ್ ಸಿದ್ಧಪಡಿಸಿದರು. ಅವರು ರಚಿಸಿದ್ದ ಚಿತ್ರದಲ್ಲಿ ಕುಬ್ಜ ಗಾತ್ರದ ವ್ಯಕ್ತಿಯನ್ನು ಅವರು ತೋರಿಸಿದ್ದರು ಹಾಗೂ ಆ ವ್ಯಕ್ತಿ ಕಂದುಬಣ್ಣದ ಕೋಟ್ ಧರಿಸಿದ್ದರು

.ಇದನ್ನು ಓದಿ- Vaikuantha Ekadashi: ವೈಕುಂಠ ಏಕಾದಶಿ ಆಚರಣೆಯ ಹಿನ್ನಲೆ, ಮಹತ್ವ

ಸಂತಾ ಕ್ಲಾಸ್- ಕೋಕಾ ಕೋಲಾ ಕನೆಕ್ಷನ್
ಸಂತಾ-ಕ್ಲಾಸ್-ಕೋಕಾ ಕೋಲಾ ಕನೆಕ್ಷನ್ ಕುರಿತು ಮಾತನಾಡುವುದಾದರೆ, ಥಾಮಸ್ ನೆಸ್ಟ್ ರಚಿಸಿದ್ದ ಸಂತಾ ಚಿತ್ರಣ ಸುಮಾರು 30 ವರ್ಷಗಳ ಕಾಲ ಪ್ರಚಲಿತದಲ್ಲಿ ಮುಂದುವರೆಯಿತು. 1920 ಕೋಕಾ ಕೋಲಾ ಕಂಪನಿ ಕ್ರಿಸ್ಮಸ್ ಹಬ್ಬದಂದು ತನ್ನ ಉತ್ಪನ್ನಗಳ ಜಾಹೀರಾತನ್ನು ಆರಂಭಿಸಿತು.

ಆದರೆ, ಜಾಹೀರಾತಿನಲ್ಲಿ ಸಪ್ಪೆ ಮುಖದ ಸಂತಾಕ್ಲಾಸ್ ಕ್ರಿಸ್ಮಸ್ ಹಬ್ಬದ(Christmas 2020) ದೃಷ್ಟಿಯಿಂದ  ಸರಿಯಾಗಿ ಕಾಣದ ಕಾರಣ ಕೋಕಾ-ಕೋಲಾ ಕಂಪನಿ ಸಂತಾ ಚಿತ್ರಣವನ್ನು ಬದಲಾಯಿಸಲು ನಿರ್ಧರಿಸಿತು.

ಇದನ್ನು ಓದಿ- New Year ಸಂಭ್ರಮಾಚರಣೆಗೆ ತಡೆ: ನೈಟ್ ಕರ್ಪ್ಯೂ ಹೋಗ್ತಿದ್ದಂತೆ ಬರ್ತಿದೆ ಟಾಪ್ ರೂಲ್ಸ್!

1930 ರಲ್ಲಿ, ಕೋಕ್ ಕಲಾವಿದ ಫ್ರೆಡ್ ಮೈಗೆನ್ ಕೊಕ್ ಕುಡಿಯುತ್ತಿರುವ ಕೇಪು ಬಣ್ಣದ ಬಟ್ಟೆ ಧರಿಸಿರುವ ಸಂತಾನ ಸ್ವರೂಪವನ್ನು ಪರಿಚಯಿಸಿದರು.  ಇದರ ನಂತರ, ರಜಾದಿನದ ಶುಭಾಶಯಗಳಿಗೆ ಅನುಗುಣವಾಗಿ ಮತ್ತು ಸಂತ ನಿಕೋಲಸ್‌ನ ಪ್ರತಿಭೆಯೊಂದಿಗೆ ಹೊಂದಾಣಿಕೆಯಾಗುವಂತೆ ಕಂಪನಿಯು ಮೂಲಕ್ಕೆ ಹತ್ತಿರವಿರುವ ಚಿತ್ರವನ್ನು ಮಾಡಲು ನಿರ್ಧರಿಸಿತು. ಇದಕ್ಕಾಗಿ ಹ್ಯಾಡಿನ್ ಸುಂಡ್‌ಬ್ಲೋಮ್ ಎಂಬ ಕಲಾವಿದನನ್ನು ಮಿಚಿಗನ್‌ನಿಂದ ಕರೆಯಿಸಿಕೊಳ್ಳಲಾಯಿತು.  ಹ್ಯಾಡಿನ್ ಸಂತ ನಿಕೊಲಸ್ ಗೆ ಸಂಬಂಧಿಸಿದ ಪುಸ್ತಕ ಹಾಗೂ ಕವಿತೆಗಳನ್ನು ಓದಿ ಸಾಂತಾ ಓರ್ವ ಖುಷಿಖುಷಿಯಾಗಿರುವ ಹಾಗೂ ಉತ್ಸಾಹಭರಿತ ವ್ಯಕ್ತಿಯಾಗಿದ್ದರು ಎಂಬ ನಿಷ್ಕರ್ಷಕ್ಕೆ ಬಂದು ತಲುಪಿದರು.

ಇಂತಹ ವ್ಯಕ್ತಿತ್ವದ ಚಿತ್ರಣ ಕಂದು-ಬಿಳಿ ಬಣ್ಣದ ಬದಲು ಕೆಂಪು ಬಣ್ಣದಲ್ಲಿ ರಚಿಸಲು ಅವರು ನಿರ್ಧರಿಸಿದರು. 'Thirst Knows No Season' ಹೆಸರಿನ ಈ ಜಾಹೀರಾತಿನಲ್ಲಿ ಮೊಟ್ಟಮೊದಲ ಬಾರಿಗೆ ಸಂತಾನನ್ನು ಕೊಕ್ ಕುಡಿಯುತ್ತಿರುವ ಹಾಗೆ ಬಿಂಬಿಸಲಾಯಿತು. ಈ ಜಾಹೀರಾತು ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಅಮೆರಿಕಾದ ಬಹುತೇಕ ವೃತ್ತಪತ್ರಿಕೆಗಳಲ್ಲಿ ಪ್ರಕಟಗೊಂಡಿತು.

ಇದನ್ನು ಓದಿ- Merry Christmas 2020: ಏಷ್ಯಾದ ಅತಿದೊಡ್ಡ ಚರ್ಚ್‌ನಲ್ಲಿ CHRISTMAS ಪ್ರಾರ್ಥನೆಗಿಲ್ಲ ಅವಕಾಶ

ಇದಾದ ಬಳಿಕ ಸಂತಾಕ್ಲಾಸ್ ನ ಹಳೆ ಚಿತ್ರಣ ಕಣ್ಮರೆಯಾಯಿತು ಮತ್ತು ಸಂತಾ ಕ್ಲಾಸ್ ಕೋಕಾ ಕೋಲಾ ಕಂಪನಿಯ ಮೆದುಳಿನ ಕೂಸು ಎಂಬ ಊಹಾಪೋಹಗಳು ಹರಿದಾಡಲಾರಂಭಿಸಿದವು.ಆದರೆ, ಈ ಸಂಗತಿ ಅರ್ಧ ಸತ್ಯ ಮತ್ತು ಅರ್ಧ ಸುಳ್ಳಾಗಿದೆ. ಕೋಕಾ ಕೋಲಾ ಕಂಪನಿಗೂ ಮೊದಲೇ ಸಂತಾ ಚಿತ್ರಣ ಅಸ್ತಿತ್ವದಲ್ಲಿತ್ತು. ಪ್ರಸ್ತುತ ಜನಮಾನಸದಲ್ಲಿರುವ ಸಂತಾ ಚಿತ್ರಣದಲ್ಲಿ ಕೋಕಾ ಕೋಲಾ ಕೈವಾಡವಿದೆ ಎಂಬುದು ಮಾತ್ರ ನಿಜ. ಊಹಾಪೋಹಗಳು ಹೆಚ್ಚಾದ ಕಾರಣ ನಂತರ ಕೋಕಾ ಕೋಲಾ ಕಂಪನಿ ಖುದ್ದಾಗಿ ಬ್ಲಾಗ್ ಪೋಸ್ಟ್ ಮಾಡುವ ಮೂಲಕ ಈ ಸಂಗತಿಯನ್ನು ಬಹಿರಂಗಪಡಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News