Tragic incident - Son kills mother in Bangalore : ಆತನಿಗಿನ್ನೂ 17 ರಿಂದ 18 ವಯಸ್ಸು. ಬರೀ ಅಮ್ಮ ತಿಂಡಿ ಮಾಡಿಲ್ಲ ಅಂತಾ ಜಗಳ ತೆಗೆದಿದ್ದ. ಮಾತಿಗೆ ಮಾತು ಬೆಳೆದು ಜಗಳ ಜೋರಾಗಿತ್ತು. ಕೋಪದಲ್ಲಿ ಕೈಗೆ ರಾಡ್ ಎತ್ತುಕೊಂಡವನೇ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾನೆ.
ಹೌದು.. ಬೆಂಗಳೂರಿನಲ್ಲೊಬ್ಬ ಅಪ್ರಾಪ್ತ ಅಡುಗೆ ಮಾಡಿಲ್ಲ ಅಂತಾ ಹೆತ್ತ ತಾಯಿಯನ್ನೇ ತಲೆ ಸೀಳಿ ಹತ್ಯೆ ಮಾಡಿರೋ ಘಟನೆ ನಡೆದಿದೆ. ಇಂತಹದ್ದೊಂದು ದುರಂತ ನಡೆದಿರೋದು ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಭೀಮಯ್ಯ ಲೇಔಟ್ ನಲ್ಲಿ.. 17ವರ್ಷದ ಪವನ್ ಎಂಬ ಅಪ್ರಾಪ್ತ 45ವರ್ಷದ ತನ್ನ ತಾಯಿ ನೇತ್ರಾವತಿ ತಲೆಗೆ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ:ಕರ್ನಾಟಕದ ಹಳ್ಳಿಯೊಂದರಲ್ಲಿ ಗ್ರಾಮಸ್ಥರು ಸಂಸ್ಕೃತವನ್ನೇ ಮಾತನಾಡುತ್ತಾರೆ!ಅದು ಯಾವುದು ಗೊತ್ತೇ?
ಅಂದ್ಹಾಗೆ ಈ ಘಟನೆ ನಡೆದಿರೋದು ಬೆಳಗ್ಗೆ 7 ರಿಂದ 8ಗಂಟೆಯ ಸುಮಾರಿಗೆ. ಕೋಲಾರದ ಮುಳಬಾಗಿಲಿನ ಮೂಲದವ್ರಾದ್ರೂ ಇದೇ ಮನೆಯಲ್ಲಿ ನೇತ್ರಾವತಿ ತನ್ನ ಕುಟುಂಬದ ಜೊತೆ ಕಳೆದ 30ವರ್ಷಗಳಿಂದ ಜೀವನ ಮಾಡ್ತಿದ್ಳು.. ತಮ್ಮ ಊರಿನಲ್ಲಿ ಮನೆ ಕಟ್ಟಿಸ್ತಿರೋದ್ರಿಂದ ಎಲ್ಲರೂ ಅಲ್ಲಿಗೆ ಹೋಗಿ ಬರ್ತಿದ್ರು. ಇಲ್ಲಿ ಮನೆ ಇರೋದ್ರಿಂದ ನೇತ್ರಾವತಿ ಇಲ್ಲೇ ಇದ್ರು.
ನಿನ್ನೆ ರಾತ್ರಿ ಮುಳಬಾಗಲಿನಿಂದ ಬೆಂಗಳೂರಿನ ಮನೆಗೆ ಬಂದಿದ್ದ ಮಗ ಪವನ್ ತಾಯಿಯ ಜೊತೆ ಜಗಳ ತೆಗೆದಿದ್ದ. ರಾತ್ರಿ ಊಟ ಮಾಡದೆಯೇ ಮಲ್ಕೊಂಡಿದ್ದ. ಡಿಪ್ಲೋಮಾ ಓದ್ತಿದ್ದ ತಾನು ಬೆಳಗ್ಗೆ ಕಾಲೇಜ್‌ಗೆ ಹೋಗ್ಬೇಕು ತಿಂಡಿ ಮಾಡು ಅಂತಾ ಹೇಳಿ ರಾತ್ರಿ ಊಟ ತಿನ್ನದೇ ಮಲ್ಕೊಂಡಿದ್ದ. ಆದ್ರೆ ಬೆಳಗ್ಗೆ ಎದ್ದು ಕಾಲೇಜಿಗೆ ರೆಡಿಯಾಗಿ ಪವನ್ ತಿಂಡಿ ಬಡಿಸೋಕೆ ಹೇಳಿದ್ದಾನೆ.
ಇದನ್ನೂ ಓದಿ: ದಕ್ಷಿಣ ಭಾರತದ ತೆರಿಗೆ ಹಣದಿಂದ ಉತ್ತರ ಭಾರತದ ಅಭಿವೃದ್ಧಿಗೆ ನನ್ನದೂ ವಿರೋಧವಿದೆ- ಸಚಿವ ಸಂತೋಷ್ ಲಾಡ್
ಈ ವೇಳೆ ಕೋಪದಲ್ಲಿ ಮಗನಿಗೆ ಬೈದಿದ್ದ ನೇತ್ತಾವತಿ ನೀನ್ ನನ್ ಮಗ ಅಲ್ಲಾ, ನಾನ್ ನಿನ್ ತಾಯಿಯಲ್ಲ.. ಅಡುಗೆ ಯಾಕ್ ಮಾಡಿ ಹಾಕ್ಲಿ ಅಂತಾ ಬೈದಿದ್ದಾರೆ. ಅಷ್ಟೇ ಪಾಪಿ ಮಗನಿಗೆ ಅದ್ಯಾವ ಕೋಪಾನೋ ಸೀದಾ ಮನೆಯಲ್ಲಿದ್ದ ರಾಡ್ ಕೈಗೆ ತೆಗೆದುಕೊಂಡವನೇ ಹೆತ್ತ ತಾಯಿ ಅಂತಾ ನೂ ನೋಡದೆ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ತೀವ್ರ ಗಾಯಗೊಂಡಿದ್ದ ನೇತ್ರಾವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆ ಮಾಡಿದ್ದ ಪವನ್ ಕೂಡಲೇ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾನೆ.
ಸದ್ಯ ತಾಯಿಯನ್ನೇ ಕೊಲೆ ಮಾಡಿರೋ ಅಪ್ರಾಪ್ತನನ್ನ ವಶಪಡೆದಿರೋ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಮನೆ ಅಂದ್ಮೇಲೆ ಇಂತಹ ಸಾಕಷ್ಟು ಜಗಳಗಳು ಕಾಮನ್. ಆದ್ರೆ ಒಂದು ಕ್ಷಣದ ಕೋಪಗಳು ಇಂತಹ ಕ್ರೂರ ಕೃತ್ಯಕ್ಕೆ ಕಾರಣ ಆಗ್ಬುಡ್ತವೆ. ಸೋ ಕೋಪದ ಕೈಗೆ ನಿಮ್ಮ ಬುದ್ದು ಕೊಡೋ ಮುನ್ನ ಯೋಚನೆ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.