ಸೈಫ್ ಮಕ್ಕಳು ಇನ್ನು ನವಾಬರಲ್ಲ :ಪಟೌಡಿ ಕುಟುಂಬದ 15,000 ಕೋಟಿ ಮೌಲ್ಯದ ಆಸ್ತಿ ಸರ್ಕಾರದ ಸ್ವಾಧೀನಕ್ಕೆ !ದಾಳಿಯಿಂದ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಮತ್ತೊಂದು ಶಾಕ್ !

Pataudi House  latest news : ಈ ಕಾಯಿದೆಯನ್ನು 1968 ರಲ್ಲಿ ಜಾರಿಗೊಳಿಸಲಾಯಿತು. ಇದರ ಅಡಿಯಲ್ಲಿ, ವಿಭಜನೆಯ ನಂತರ ಪಾಕಿಸ್ತಾನಕ್ಕೆ ಹೋದ ಜನರು ಭಾರತದಲ್ಲಿ ಬಿಟ್ಟುಹೋದ ಆಸ್ತಿಯ ಮೇಲಿನ ಹಕ್ಕು ಕೇಂದ್ರ ಸರ್ಕಾರದ್ದಾಗುತ್ತದೆ.

Written by - Ranjitha R K | Last Updated : Jan 21, 2025, 11:44 AM IST
  • ಪಟೌಡಿ ಕುಟುಂಬದ 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ
  • ಪ್ರಾಧಿಕಾರದ ಮುಂದೆ ತಮ್ಮ ವಾದ ಮಂಡಿಸಲು ಪಟೌಡಿ ಕುಟುಂಬಕ್ಕೆ ಅವಕಾಶ
  • ನಿಗದಿತ ಸಮಯದಲ್ಲಿ ತಮ್ಮ ಪರವಾಗಿ ವಾದ ಮುಂದಿಡಲಿಲ್ಲ ಕುಟುಂಬ
ಸೈಫ್ ಮಕ್ಕಳು ಇನ್ನು ನವಾಬರಲ್ಲ :ಪಟೌಡಿ ಕುಟುಂಬದ 15,000 ಕೋಟಿ ಮೌಲ್ಯದ ಆಸ್ತಿ ಸರ್ಕಾರದ ಸ್ವಾಧೀನಕ್ಕೆ !ದಾಳಿಯಿಂದ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ  ಮತ್ತೊಂದು ಶಾಕ್ !  title=

Pataudi House  latest news : ಭೋಪಾಲ್‌ನಲ್ಲಿರುವ ಪಟೌಡಿ ಕುಟುಂಬದ 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಈಗ ಸರ್ಕಾರದ ಸ್ವಾಧೀನಕ್ಕೆ ಬರಬಹುದು. ಶತ್ರು ಆಸ್ತಿ ಕಾಯ್ದೆಯಡಿ ಈ ಆಸ್ತಿ ಸರ್ಕಾರಕ್ಕೆ ಸೇರಬಹುದು. 2015 ರಿಂದ ಭೋಪಾಲ್‌ನಲ್ಲಿ ಐತಿಹಾಸಿಕ ರಾಜಪ್ರಭುತ್ವದ ಆಸ್ತಿಗಳ ಮೇಲೆ ನಿಷೇಧ ಹೇರಲಾಗಿದೆ.  ಮೇಲ್ಮನವಿ ಪ್ರಾಧಿಕಾರದ ಮುಂದೆ ತಮ್ಮ ವಾದ ಮಂಡಿಸಲು ಪಟೌಡಿ ಕುಟುಂಬಕ್ಕೆ ಹೈಕೋರ್ಟ್ ಕಾಲಾವಕಾಶ ನೀಡಿತ್ತು. ಆದರೆ ಪಟೌಡಿ ಕುಟುಂಬ ನಿಗದಿತ ಸಮಯದಲ್ಲಿ ತಮ್ಮ ಪರವಾಗಿ ವಾದ ಮುಂದಿಡಲಿಲ್ಲ. ಇದೀಗ ಈ ಆದೇಶವನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲು ಕುಟುಂಬಕ್ಕೆ ಅವಕಾಶವಿದೆ.

ಪಟೌಡಿ ಕುಟುಂಬದ 15,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಮೇಲಿನ ಸ್ಟೇ ಹಿಂದಕ್ಕೆ  : 
2015 ರಿಂದ ಭೋಪಾಲ್ ರಾಜ್ಯದ ಐತಿಹಾಸಿಕ ಆಸ್ತಿಗಳ ಮೇಲಿನ ತಡೆಯನ್ನು  ತೆಗೆದುಹಾಕಲಾಗಿದೆ. ಮಧ್ಯಪ್ರದೇಶ ಹೈಕೋರ್ಟ್ (ಜಬಲ್ಪುರ್) ನಟ ಸೈಫ್ ಅಲಿ ಖಾನ್, ತಾಯಿ ಶರ್ಮಿಳಾ ಟ್ಯಾಗೋರ್, ಸಹೋದರಿಯರಾದ ಸೋಹಾ ಮತ್ತು ಸಬಾ ಅಲಿ ಖಾನ್ ಮತ್ತು ಪಟೌಡಿ ಅವರ ಸಹೋದರಿ ಸಬಿಹಾ ಸುಲ್ತಾನ್ ಅವರು ಶತ್ರು ಆಸ್ತಿ ಪ್ರಕರಣದಲ್ಲಿ ಮೇಲ್ಮನವಿ ಪ್ರಾಧಿಕಾರದ ಮುಂದೆ ತಮ್ಮ ವಾದವನ್ನು ಮಂಡಿಸುವಂತೆ ಸೂಚಿಸಿದೆ. ನ್ಯಾಯಾಲಯದ ಆದೇಶದ ನಂತರ, ಈ ವಿಚಾರ ಈಗ ಇತ್ಯರ್ಥಗೊಂಡಿದ್ದು, ತಡೆಯಾಜ್ಞೆ ಹಿಂಪಡೆಯಲಾಗಿದೆ. 

ಇದನ್ನೂ ಓದಿ : ಸಚಿನ್ ತೆಂಡೂಲ್ಕರ್ ಪುತ್ರಿಗೆ ಈತನೇ ಬೆಸ್ಟ್ ಫ್ರೆಂಡ್: ಸಾರಾ 'ಅವನೇ ನನ್ನ ಪಾಲಿಗೆ ಎಲ್ಲಾ'… ಎಂದಿದ್ದು ಯಾರಿಗೆ ಗೊತ್ತಾ...?

ವಾದ ಮಂಡಿಸದ ಕುಟುಂಬ : 
30 ದಿನಗಳೊಳಗೆ ಮೇಲ್ಮನವಿ ಪ್ರಾಧಿಕಾರದ ಮುಂದೆ ತಮ್ಮ ವಾದವನ್ನು  ಹಾಜರುಪಡಿಸುವಂತೆ ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರ ಏಕ ಪೀಠವು ಸೂಚಿಸಿದೆ. ಆದರೆ ಪಟೌಡಿ ಕುಟುಂಬ ನಿಗದಿತ ಸಮಯದೊಳಗೆ ತಮ್ಮ ಪರವಾಗಿ ಯಾವುದೇ ವಾದವನ್ನು ಮಂಡಿಸಲಿಲ್ಲ. ಅವಧಿ ಈಗ ಕೊನೆಗೊಂಡಿದ್ದು, ಕುಟುಂಬದವರು ಯಾವುದೇ ಹಕ್ಕು ಮಂಡಿಸಿಲ್ಲ. ಈಗ ಈ ಆದೇಶವನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸುವುದು ಕುಟುಂಬಕ್ಕೆ ಉಳಿದಿರುವ ಏಕೈಕ ಆಯ್ಕೆಯಾಗಿದೆ.

ಶತ್ರು ಆಸ್ತಿ ಕಾಯಿದೆ ಎಂದರೇನು ? : 
ಈ ಕಾಯಿದೆಯನ್ನು 1968 ರಲ್ಲಿ ಜಾರಿಗೊಳಿಸಲಾಯಿತು. ಇದರ ಅಡಿಯಲ್ಲಿ, ವಿಭಜನೆಯ ನಂತರ ಪಾಕಿಸ್ತಾನಕ್ಕೆ ಹೋದ ಜನರು ಭಾರತದಲ್ಲಿ ಬಿಟ್ಟುಹೋದ ಆಸ್ತಿಯ ಮೇಲಿನ ಹಕ್ಕು ಕೇಂದ್ರ ಸರ್ಕಾರದ್ದಾಗುತ್ತದೆ.

ಇದನ್ನೂ ಓದಿ :  ʼಗಂಡಸರು ದುಡ್ಡು ಕೊಡ್ತಾರೆ.. ಹೆಂಗಸರು ಅಡ್ಜಸ್ಟ್‌ ಮಾಡ್ಕೋತಾರೆ ಅಷ್ಟೇʼ ಖ್ಯಾತ ನಟಿ ಶಾಕಿಂಗ್‌ ಹೇಳಿಕೆ ವೈರಲ್!!‌

ಈ ಆಸ್ತಿಯು ಶತ್ರು ಆಸ್ತಿ ಕಾಯಿದೆಯಡಿ ಬರುತ್ತದೆ :
ನವಾಬ್ ಹಮೀದುಲ್ಲಾ ಖಾನ್ ಅವರ ಆಸ್ತಿಯ ಕಾನೂನುಬದ್ಧ ವಾರಸುದಾರರೆಂದರೆ ಪಾಕಿಸ್ತಾನಕ್ಕೆ ಹೋಗಿರುವ ಅವರ ಹಿರಿಯ ಮಗಳು ಅಬಿದಾ. ಈ ವಿಚಾರವನ್ನು ಕೇಂದ್ರ ಸರ್ಕಾರ 2015 ರಲ್ಲಿ ಸ್ಪಷ್ಟಪಡಿಸಿದೆ. ಆದ್ದರಿಂದ ಈ ಆಸ್ತಿ ಶತ್ರು ಆಸ್ತಿ ಕಾನೂನಿನ ಅಡಿಯಲ್ಲಿ ಬರುತ್ತದೆ. ಆದರೆ ನವಾಬನ ಎರಡನೇ ಮಗಳು ಸಾಜಿದಾ ಸುಲ್ತಾನ್ ವಂಶಸ್ಥರು ಈ ಆಸ್ತಿಯ ಮೇಲೆ ತಮ್ಮ ಹಕ್ಕು ಸಾಧಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News