Delivery boy income: Zomato, Swiggy ನಂತಹ ಹಲವು ಅಪ್ಲಿಕೇಶನ್‌ಗಳು ಬಹುತೇಕ ಪ್ರತಿಯೊಂದು ಮೊಬೈಲ್ ಫೋನ್‌ನಲ್ಲಿ ಕಂಡುಬರುತ್ತವೆ. ಇದರ ಸಹಾಯದಿಂದ ನೆಚ್ಚಿನ ರೆಸ್ಟೋರೆಂಟ್‌ನಿಂದ ಆಹಾರವನ್ನು ಕೇವಲ ಒಂದು ಕ್ಲಿಕ್‌ನಲ್ಲಿ ನೇರವಾಗಿ ಹೋಮ್ ಪ್ಲೇಟ್‌ಗೆ ತಲುಪಿಸಲಾಗುತ್ತಿದೆ. ಈಗ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿ ದೊಡ್ಡ ಪಾತ್ರವನ್ನು ಡೆಲಿವರಿ ಬಾಯ್ಸ್ ವಹಿಸುತ್ತಾರೆ. ಆದರೆ ದಿನವಿಡೀ ನಗರದಲ್ಲಿ ಸುತ್ತಾಡುವ ಈ ಡೆಲಿವರಿ ಬಾಯ್ಸ್ ಎಷ್ಟು ಸಂಪಾದಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ?
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಮುಂದಿನ ತಿಂಗಳು ಹಸೆಮಣೆ ಏರಬೇಕಾಗಿದ್ದ ನರೇಗಾ ಇಂಜಿನಿಯರ್ ಸಾವು!!
ಕೆಲವು ದಿನಗಳ ಹಿಂದೆ, ಫುಲ್ ಡಿಸ್ಕ್ಲೋಸರ್ ಎಂಬ ಯೂಟ್ಯೂಬ್ ಚಾನೆಲ್ ಕೆಲವು ಡೆಲಿವರಿ ಬಾಯ್ಸ್ ಜೊತೆ ಮಾತುಕತೆ ನಡೆಸಿತ್ತು. ಈ ಸಂದರ್ಭದಲ್ಲಿ ಅವರ ಗಳಿಕೆ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಡೆಲಿವರಿ ಬಾಯ್, "ದಿನಕ್ಕೆ 1500-2000 ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು" ಎಂದು ಉತ್ತರ ನೀಡಿದ್ದ. ಹೀಗಿದ್ದರೆ ವಾರಕ್ಕೆ 10 ಸಾವಿರ - 12 ಸಾವಿರ ಖಚಿತ... ತಿಂಗಳಿಗೆ 40 ರಿಂದ 50 ಸಾವಿರ ರೂಪಾಯಿ ಪಕ್ಕಾ ಸಂಪಾದನೆ ಆಗುತ್ತದೆ
ಇಷ್ಟೇ ಅಲ್ಲ, ಫೋನ್‌ನಲ್ಲಿ ಗಳಿಸಿದ್ದಕ್ಕೆ ಪುರಾವೆ ಕೂಡ ನೀಡಿದ್ದ ಆ ಬಾಯ್. ಮತ್ತೊಬ್ಬ ಡೆಲಿವರಿ ಬಾಯ್ ಹೇಳುವಂತೆ, ಇದಲ್ಲದೆ, ಟಿಪ್ಸ್ ಮೂಲಕ ಸುಮಾರು 5 ಸಾವಿರ ರೂಪಾಯಿಗಳನ್ನು ಗಳಿಸುತ್ತಾರಂತೆ. ಮಳೆಗಾಲದಲ್ಲಿ ಡೆಲಿವರಿ ಮಾಡಿದರೆ ಸ್ವಲ್ಪ ಹೆಚ್ಚು ಗಳಿಕೆ ಕೂಡ ಮಾಡಬಹುದು ಎನ್ನುತ್ತಾನೆ ಆತ. ವಿಶೇಷವೆಂದರೆ ಅನೇಕ ಪ್ಲಾಟ್‌ಫಾರ್ಮ್‌ಗಳಲ್ಲಿ ಮೊತ್ತವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಆದರೂ, ಡೆಲಿವರಿಯು ಹೆಚ್ಚು ದೂರದಲ್ಲಿದ್ದರೆ, ಪ್ಲಾಟ್‌ಫಾರ್ಮ್‌ಗಳು ಕೆಲವೊಮ್ಮೆ ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ.
ಇದನ್ನೂ ಓದಿ: ʼಗಂಡಸರು ದುಡ್ಡು ಕೊಡ್ತಾರೆ.. ಹೆಂಗಸರು ಅಡ್ಜಸ್ಟ್ ಮಾಡ್ಕೋತಾರೆ ಅಷ್ಟೇʼ ಖ್ಯಾತ ನಟಿ ಶಾಕಿಂಗ್ ಹೇಳಿಕೆ ವೈರಲ್!!
ಇನ್ನು ಈ ಸಂದರ್ಶನವನ್ನು ನೋಡಿದ ನಂತರ, ಗಳಿಕೆಯ ಬಗ್ಗೆ ಅಂತರ್ಜಾಲದಲ್ಲಿ ಜನರಲ್ಲಿ ಚರ್ಚೆ ಪ್ರಾರಂಭವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ