ನೋಟಿಫಿಕೇಶನ್ ಜಾರಿ ಮಾಡಿದ CBSE !OMR ಶೀಟ್ ಪಡೆಯುವ ವಿಧಾನ ಇಲ್ಲಿದೆ !

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ CBSE ನೇಮಕಾತಿ ಪರೀಕ್ಷೆಯಲ್ಲಿ ಭಾಗಿಯಾಗುವ ಅಭ್ಯರ್ಥಿಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ. 

Written by - Ranjitha R K | Last Updated : Sep 19, 2024, 04:02 PM IST
ನೋಟಿಫಿಕೇಶನ್ ಜಾರಿ ಮಾಡಿದ CBSE !OMR ಶೀಟ್ ಪಡೆಯುವ ವಿಧಾನ ಇಲ್ಲಿದೆ ! title=

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಆಗಸ್ಟ್ 2024ರಲ್ಲಿ CBSE ನೇಮಕಾತಿ ಪರೀಕ್ಷೆಯಲ್ಲಿ ಭಾಗಿಯಾಗುವ ಅಭ್ಯರ್ಥಿಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ.ಅಧಿಕೃತ ಅಧಿಸೂಚನೆಯಲ್ಲಿ, OMR ಶೀಟ್‌ನ ಪ್ರತಿಯೊಂದಿಗೆ  ಕಾಲ್ಕ್ಯುಲೆಶನ್ ಶೀಟ್ ಅನ್ನು ಕೂಡಾ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ  ಮಂಡಳಿಯು ಅರ್ಜಿದಾರರಿಗೆ ಸೂಚಿಸಿದೆ.ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ಠೇವಣಿ ಮಾಡುವ ಮೂಲಕ OMR ಶೀಟ್ ನೊಂದಿಗೆ ಕಾಲ್ಕ್ಯುಲೆಶನ್ ಶೀಟ್ ಅನ್ನು ಅನ್ನು ಕೂಡಾ ಪಡೆಯಬಹುದು.OMR ಶೀಟ್‌ನ ಪ್ರತಿಯೊಂದಿಗೆ ಕಾಲ್ಕ್ಯುಲೆಶನ್ ಶೀಟ್ ಅನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಅಕ್ಟೋಬರ್ 17 ಅಥವಾ ಅದಕ್ಕೂ ಮುನ್ನ 500 ರೂಪಾಯಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು. 

ಆರ್‌ಟಿಐ ಕಾಯಿದೆ, 2005ರ ಅಡಿಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಥವಾ ಇನ್ಯಾವುದೋ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ನಿಗದಿತ ದಿನಾಂಕದ ಮೊದಲು 500 ರೂಪಾಯಿ ಶುಲ್ಕದೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು.ಯಾವುದೇ ಶೆಡ್ಯೂಲ್ಡ್ ಬ್ಯಾಂಕ್ ನೀಡಿದ ಬ್ಯಾಂಕ್ ಡ್ರಾಫ್ಟ್ ಮೂಲಕ ನಿಗದಿತ ಶುಲ್ಕವನ್ನು ಪಾವತಿಸಬಹುದು. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಮ್ಮ ರೋಲ್ ಸಂಖ್ಯೆ, ಹೆಸರು ಮತ್ತು ವಿಳಾಸವನ್ನು ಸರಿಯಾಗಿ ಬರೆಯಬೇಕು.

ಇದನ್ನೂ ಓದಿ : ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅಕ್ಟೋಬರ್ 15 ರವರೆಗೆ ವಿಸ್ತರಣೆ

ಬ್ಯಾಂಕ್ ಡ್ರಾಫ್ಟ್‌ನ ಹಿಂಭಾಗದಲ್ಲಿ ರೋಲ್ ಸಂಖ್ಯೆ ಮತ್ತು ಹೆಸರನ್ನು ಬರೆಯಬೇಕು. ಬ್ಯಾಂಕ್ ಡ್ರಾಫ್ಟ್‌ನೊಂದಿಗೆ ನಿರ್ದೇಶಕ CTETಗೆ ಉದ್ದೇಶಿಸಲಾದ ಅರ್ಜಿಯನ್ನು ದೆಹಲಿಯಲ್ಲಿರುವ CBSE ಕಚೇರಿಗೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.

 OMR ಶೀಟ್‌ನ ಪ್ರತಿಯೊಂದಿಗೆ ಕ್ಯಾಲ್ಕ್ಯುಲೆಶನ್ ಶೀಟ್ ಅನ್ನು ವಾಣಿಜ್ಯ ಉದ್ದೇಶಗಳಿಗಾಗಿ ಅಥವಾ ಮುದ್ರಣ ಮಾಧ್ಯಮ,ಯಾವುದೇ ಸಂಸ್ಥೆ ಅಥವಾ ಶಾಲೆಗಳಲ್ಲಿ ಲಭ್ಯವಿರುವುದಿಲ್ಲ ಎಂದು CBSE ಅಧಿಸೂಚನೆಯಲ್ಲಿ ಒತ್ತಿ ಹೇಳಿದೆ. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳು ಮತ್ತು ಅಪೂರ್ಣ ಅರ್ಜಿಗಳನ್ನು ಯಾವುದೇ ಉಲ್ಲೇಖವಿಲ್ಲದೆ ತಿರಸ್ಕರಿಸಬಹುದು. 

ಓಎಂಆರ್ ಶೀಟ್ ನ ನ ಕಲು ಪ್ರತಿಯೊಂದಿಗೆ ಕ್ಯಾಲ್ಕ್ಯುಲೆಶನ್ ಶೀಟ್ ಅನ್ನು   ಅಭ್ಯರ್ಥಿಗೆ ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ನೀಡಲಾಗುತ್ತದೆ.ಆದರೆ, ಅಕ್ಟೋಬರ್ 17, 2024ರ ನಂತರ ಈ ಕಚೇರಿಯಲ್ಲಿ ಸ್ವೀಕರಿಸಿದ ಯಾವುದೇ ವಿನಂತಿಯನ್ನು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ : KCET 2024 ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ !ಪರಿಶೀಲಿಸುವ ಲಿಂಕ್ ಇಲ್ಲಿದೆ

ಅಧಿಸೂಚನೆಯನ್ನು ಪರಿಶೀಲಿಸಲು ನೇರ ಲಿಂಕ್ https://www.cbse.gov.in/cbsenew/documents/Public_Notice_Rec_18092024.pdf ಆಗಿದೆ .

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News