RCB New Captain: ಐಪಿಎಲ್‌ನ ಹೊಸ ಸೀಸನ್‌ಗೂ ಮುನ್ನ ಮೆಗಾ ಹರಾಜು ಆಯೋಜಿಸಲಾಗುವುದು. ಈ ವೇಳೆ ಅನೇಕ ತಂಡಗಳ ಆಟಗಾರರು ಮತ್ತು ನಾಯಕರು ಬದಲಾಗಬಹುದು.
ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನೋಡಿದರೆ, RCB ತನ್ನ ನಾಯಕ ಫಾಫ್ ಡು ಪ್ಲೆಸಿಸ್ ಅನ್ನು ಆ ಸ್ಥಾನದಿಂದ ಕೆಳಗಿಳಿಸಿ.. ಹರಾಜಿನಲ್ಲಿ ಹೊಸ ನಾಯಕನನ್ನು ಹುಡುಕುಬಹುದು.. ಫಾಫ್ ಡು ಪ್ಲೆಸಿಸ್ ಬಿಡುಗಡೆಯಾದರೆ ತಂಡದ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳಬಹುದು ಎಂಬುದು ಸದ್ಯದ ಚರ್ಚೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಯ ಸೀಸನ್ ತುಂಬಾ ಚೆನ್ನಾಗಿತ್ತು. ತಂಡವು ನಾಕೌಟ್‌ಗೆ ತಲುಪಿತು, ಆದರೆ ಪ್ರಶಸ್ತಿ ಪಂದ್ಯಕ್ಕೆ ಪ್ರವೇಶಿಸಲು ವಿಫಲವಾಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಋತುವಿನಲ್ಲಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. 14 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದ್ದ ತಂಡ ಅಷ್ಟೇ ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ತಂಡ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿತ್ತು.
ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯಲ್ಲಿ ಫ್ರಾಂಚೈಸಿ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಬಹುದು. ಕೊಹ್ಲಿ ಮತ್ತೊಮ್ಮೆ ತಂಡದ ನಾಯಕತ್ವ ವಹಿಸಬಹುದು. ಅವರ ನಾಯಕತ್ವದಲ್ಲಿ ತಂಡ 144 ಪಂದ್ಯಗಳನ್ನು ಆಡಿದೆ. ಈ ತಂಡ 68 ಪಂದ್ಯಗಳನ್ನು ಗೆದ್ದಿದೆ.
ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹರಾಜಿಗೆ ಪ್ರವೇಶಿಸಿದರೆ, ಅವರನ್ನು ಖರೀದಿಸಲು ಆರ್‌ಸಿಬಿ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತದೆ. ಕಳೆದ ಋತುವಿನಲ್ಲಿ ರೋಹಿತ್ ಅವರನ್ನು ನಾಯಕತ್ವದಿಂದ ಹಠಾತ್ತನೆ ತೆಗೆದುಹಾಕಲಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಈ ಬಾರಿ ಮುಂಬೈ ಇಂಡಿಯನ್ಸ್ ತೊರೆಯಬಹುದು.
ಒಂದು ವೇಳೆ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮೆಗಾ ಹರಾಜಿಗೂ ಮುನ್ನ ಆ ತಂಡ ಬಿಟ್ಟು ಹೊರಬಂದರೇ ಆರ್‌ಸಿಬಿ ಅವರನ್ನು ಖರೀದಿಸಬಹುದು. ತಂಡಕ್ಕೆ ಸೇರಿದ ನಂತರ ಫ್ರಾಂಚೈಸಿ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಬಹುದು.