ಹೆಸರಿಗೆ ದಿಗ್ಗಜರು... ಆದ್ರೆ ತಮ್ಮ ಇಡೀ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ ಈ 5 ಕ್ರಿಕೆಟಿಗರು! ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು

Batsmen Who Never Hit A Single Six: ವಿಶ್ವ ಕ್ರಿಕೆಟ್‌ʼನಲ್ಲಿ ದಿಗ್ಗಜರೆನಿಸಿಕೊಂಡ ಈ ಐವರು ಕ್ರಿಕೆಟಿಗರು ತಮ್ಮ ಏಕದಿನ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ. ಆ ಆಟಗಾರರು ಯಾರೆಂಬುದನ್ನು ಮುಂದೆ ತಿಳಿಯೋಣ.  

Written by - Bhavishya Shetty | Last Updated : Sep 19, 2024, 04:00 PM IST
    • ಕ್ರಿಕೆಟ್‌ ಎಂದರೆ ಅಲ್ಲಿ ಸಿಕ್ಸರ್‌, ಬೌಂಡರಿಗಳ ಅಬ್ಬರವಿರೋದು ಸಾಮಾನ್ಯ
    • ಏಕದಿನ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ
    • ಆ ಆಟಗಾರರು ಯಾರೆಂಬುದನ್ನು ಮುಂದೆ ತಿಳಿಯೋಣ
ಹೆಸರಿಗೆ ದಿಗ್ಗಜರು... ಆದ್ರೆ ತಮ್ಮ ಇಡೀ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ ಈ 5 ಕ್ರಿಕೆಟಿಗರು! ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು  title=
File Photo

Great Batsmen Who Never Hit A Single Six In Their ODI Careers: ಕ್ರಿಕೆಟ್‌ ಎಂದರೆ ಅಲ್ಲಿ ಸಿಕ್ಸರ್‌, ಬೌಂಡರಿಗಳ ಅಬ್ಬರವಿರೋದು ಸಾಮಾನ್ಯ. ಇನ್ನು ಓರ್ವ ಬ್ಯಾಟ್ಸ್‌ಮನ್‌ ಒಂದೇ ಪಂದ್ಯದಲ್ಲಿ 6ಕ್ಕಿಂತ ಹೆಚ್ಚು ಸಿಕ್ಸರ್‌ ಬಾರಿಸಿ ಮಿಂಚಿರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ವಿಶ್ವ ಕ್ರಿಕೆಟ್‌ʼನಲ್ಲಿ ದಿಗ್ಗಜರೆನಿಸಿಕೊಂಡ ಈ ಐವರು ಕ್ರಿಕೆಟಿಗರು ತಮ್ಮ ಏಕದಿನ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ. ಆ ಆಟಗಾರರು ಯಾರೆಂಬುದನ್ನು ಮುಂದೆ ತಿಳಿಯೋಣ.

ಇದನ್ನೂ ಓದಿ:  ಉಗ್ರನನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿದ ಭಾರತೀಯ ಸೇನೆ! ಟೆರರಿಸ್ಟ್‌ ನರಳಿ ನರಳಿ ಸಾಯುವ...

ಚೇತೇಶ್ವರ ಪೂಜಾರ: ಟೆಸ್ಟ್ ಕ್ರಿಕೆಟ್‌ʼನಲ್ಲಿ ತಾಳ್ಮೆ ಮತ್ತು ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿಯಾದ ಭಾರತದ ಚೇತೇಶ್ವರ ಪೂಜಾರ ಏಕದಿನ ಕ್ರಿಕೆಟ್‌ʼನಲ್ಲಿ ಕೇವಲ 4 ಬೌಂಡರಿ ಬಾರಿಸಿದ್ದು ಬಿಟ್ಟರೆ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ.

ಜೆಫ್ರಿ ಬಾಯ್ಕಾಟ್: ಜೆಫ್ರಿ ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರು. 108 ಟೆಸ್ಟ್‌ʼಗಳ ಹೊರತಾಗಿ, ಇಂಗ್ಲೆಂಡ್‌ ಪರ 36 ODIಗಳಲ್ಲಿ ಆಡಿದ್ದಾರೆ. ಇದರಲ್ಲಿ 1082 ರನ್ ಗಳಿಸಿದ್ದರೂ ಸಹ ಒಂದೇ ಒಂದು ಸಿಕ್ಸರ್‌ ಸಿಡಿಸಿಲ್ಲ.

ಮನೋಜ್ ಪ್ರಭಾಕರ್: ಭಾರತದ ಮಾಜಿ ಆಲ್‌ರೌಂಡರ್ ಮನೋಜ್ ಪ್ರಭಾಕರ್ ಅವರು 1984 ಮತ್ತು 1996 ರ ನಡುವೆ ಭಾರತಕ್ಕಾಗಿ 130 ODIಗಳನ್ನು ಆಡಿದ್ದಾರೆ. ಇದರಲ್ಲಿ 1858 ODI ರನ್‌ ಗಳಿಸಿದ್ದರೂ ಸಹ, ಒಂದೇ ಒಂದು ಸಿಕ್ಸರ್‌ ಬಾರಿಸಿಲ್ಲ.

ಕ್ಯಾಲಮ್ ಫರ್ಗುಸನ್: 2009 ರಿಂದ 2011 ರವರೆಗೆ ಫರ್ಗುಸನ್ ಆಸ್ಟ್ರೇಲಿಯಾ ಪರ 30 ODIಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ ಐದು ಅರ್ಧಶತಕಗಳನ್ನು ಗಳಿಸಿದ್ದರು. 663 ರನ್‌ʼಗಳಿಗೆ 85 ಸ್ಟ್ರೈಕ್ ರೇಟ್ ಹೊಂದಿದ್ದ ಕ್ಯಾಲಮ್‌, 64 ಬೌಂಡರಿಗಳನ್ನು ಬಾರಿಸಿದ್ದರು. ಆದರೆ ಸಿಕ್ಸರ್‌ ಬಾರಿಸುವಲ್ಲಿ ವಿಫಲರಾಗಿದ್ದಾರೆ.

ಇದನ್ನೂ ಓದಿ:  6 ಅಡಿ ಎತ್ತರ, 140 ಕೆಜಿ ತೂಕ... ಕ್ರಿಕೆಟ್‌ ಲೋಕದಲ್ಲೇ ಅತಿ ದಡೂತಿ ಕ್ರಿಕೆಟಿಗನೀತ!

ತಿಲನ್ ಸಮರವೀರ: ಶ್ರೇಷ್ಠ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ತಿಲನ್ ಸಮರವೀರ 2011 ರ ವಿಶ್ವಕಪ್ ಫೈನಲ್ ವಿರುದ್ಧ ಭಾರತ ಸೇರಿದಂತೆ ಶ್ರೀಲಂಕಾ ಪರ 53 ODIಗಳನ್ನು ಆಡಿದ್ದಾರೆ. ಆದರೆ ಈ ಅವಧಿಗಳಲ್ಲಿ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ ಇವರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News