Debit or Credit Card ಇಲ್ಲದೆಯೇ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಇಲ್ಲಿದೆ ಸುಲಭ ವಿಧಾನ

Withdraw Money Without Debit Or Credit Card: ನಿಮ್ಮ ಎಟಿಎಂ ಕಾರ್ಡ್ ಕಳೆದುಹೋದರೆ ಅಥವಾ ಮನೆಯಲ್ಲಿ ಮರೆತು ಹೊರಗೆ ಬಂದಿದ್ದರೆ ಚಿಂತಿಸಬೇಡಿ. ನೀವು ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.   

Written by - Yashaswini V | Last Updated : Jul 23, 2021, 12:06 PM IST
  • ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲದೆ ನೀವು ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು
  • ಎನ್‌ಸಿಆರ್ ಕಾರ್ಪೊರೇಷನ್ ಎನ್‌ಪಿಸಿಐ ಮತ್ತು ಸಿಟಿ ಯೂನಿಯನ್ ಬ್ಯಾಂಕ್ ಸಹಭಾಗಿತ್ವದಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿದೆ
  • ಈ ತಂತ್ರಜ್ಞಾನದಿಂದ ಯುಪಿಐ ಬಳಸಿ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ನಿಮಗೆ ಸಾಧ್ಯವಾಗುತ್ತದೆ
Debit or Credit Card ಇಲ್ಲದೆಯೇ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಇಲ್ಲಿದೆ ಸುಲಭ ವಿಧಾನ  title=
How to withdraw cash without atm card

Withdraw Money Without Debit Or Credit Card: ಸಾಮಾನ್ಯವಾಗಿ ನಾವು ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತೇವೆ. ಆದರೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ ಇಲ್ಲದಿದ್ದರೂ ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಈ ಸುದ್ದಿ ಖಂಡಿತವಾಗಿಯೂ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ, ಆದರೆ ಇದು ನಿಜ. ಡಿಜಿಟಲ್ ಯುಗದಲ್ಲಿ  ನೀವು ಕಾರ್ಡ್ ಇಲ್ಲದೆ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.  ಮತ್ತೊಂದು ಮುಖ್ಯ ವಿಷಯವೆಂದರೆ ಇದರಲ್ಲಿ, ನೀವು ಸುರಕ್ಷತೆಯ ಬಗ್ಗೆ ಚಿಂತಿಸಬೇಕಾಗಿಲ್ಲ.

ಎನ್‌ಸಿಆರ್ ಕಾರ್ಪೊರೇಷನ್ ಯುಪಿಐ ಎನೇಬಲ್ಡ್ ಇಂಟರ್ಆರಬಲ್ ಕಾರ್ಡ್‌ಲೆಸ್ ವಿತ್ ಡ್ರಾಯಿಂಗ್ ವ್ಯವಸ್ಥೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ. ಎನ್‌ಸಿಆರ್ ಕಾರ್ಪೊರೇಷನ್ ಎನ್‌ಪಿಸಿಐ ಮತ್ತು ಸಿಟಿ ಯೂನಿಯನ್ ಬ್ಯಾಂಕ್ ಸಹಭಾಗಿತ್ವದಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ತಂತ್ರಜ್ಞಾನದಿಂದ, ನೀವು BHIM, PayTm, GPay, PhonePe ಬಳಸಿ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ-  ATM ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದಂತೆ ಎಸ್‌ಬಿಐ ಎಚ್ಚರಿಕೆ! ನಿಮ್ಮ ಕಾರ್ಡ್ ಕಳೆದುಹೋದರೆ ತಕ್ಷಣ ಈ ಕೆಲಸ ಮಾಡಿ

ಭಾರತದಲ್ಲಿನ ಎರಡು ಬ್ಯಾಂಕುಗಳು ಈ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಮೊದಲ ಬ್ಯಾಂಕ್ ಎಸ್‌ಬಿಐ, ಇದು ಯೋನೊ (YONO) ಅಪ್ಲಿಕೇಶನ್ ಬಳಸುತ್ತದೆ. ಇನ್ನೊಂದು ಯುಪಿಐ ಆಧಾರಿತ ನಗದು ಹಿಂಪಡೆಯುವ ಆಯ್ಕೆಯನ್ನು ಬೆಂಬಲಿಸುವ ಯೂನಿಯನ್ ಬ್ಯಾಂಕ್.

ಯುಪಿಐ ಅಪ್ಲಿಕೇಶನ್‌ನೊಂದಿಗೆ ಎಟಿಎಂನಿಂದ ಹಣವನ್ನು ಹಿಂಪಡೆಯುವುದು ಹೇಗೆ?
>> ಮೊದಲು ನೀವು ಕಾರ್ಡ್‌ಲೆಸ್ ವಾಪಸಾತಿ ಸೌಲಭ್ಯವನ್ನು ಬೆಂಬಲಿಸುವ ಎಟಿಎಂಗೆ ಹೋಗಿ. 
>> ದೇಶಾದ್ಯಂತ ಈ ತಂತ್ರಜ್ಞಾನವನ್ನು ಬೆಂಬಲಿಸುವ ಸುಮಾರು 1500 ಎಟಿಎಂಗಳಿವೆ.
>> ಎಟಿಎಂ ಯಂತ್ರದಿಂದ (ATM Machine) ಹಣವನ್ನು ಹಿಂಪಡೆಯಲು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಯಾವುದೇ ಯುಪಿಐ ಅಪ್ಲಿಕೇಶನ್ ತೆರೆಯಬೇಕು.
>> ಬಳಿಕ ಯಂತ್ರದಲ್ಲಿ ನೀಡಲಾದ ಕ್ಯೂಆರ್ ಕೋಡ್ ಅನ್ನು ಯುಪಿಐ ಅಪ್ಲಿಕೇಶನ್‌ನಿಂದ ಸ್ಕ್ಯಾನ್ ಮಾಡಬೇಕಾಗುತ್ತದೆ.
>> ನೀವು ವಿತ್ ಡ್ರಾ ಮಾಡಲು ಬಯಸುವ ಮೊತ್ತವನ್ನು ನಮೂದಿಸಬೇಕು.
>> ವಹಿವಾಟು ಪೂರ್ಣಗೊಂಡ ನಂತರ ನೀವು ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.

ಇದನ್ನೂ ಓದಿ- ATM: ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಾಗ ಕಳ್ಳರು ಬಳಸುವ ಈ ವಿಶಿಷ್ಟ ಟ್ರಿಕ್ ಬಗ್ಗೆ ಇರಲಿ ಎಚ್ಚರ

YONO ಅಪ್ಲಿಕೇಶನ್‌ನಿಂದ ಹಣವನ್ನು ಹಿಂಪಡೆಯುವುದು ಹೇಗೆ?
- ನೀವು ಎಸ್‌ಬಿಐ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ, ನೀವು ಸ್ಮಾರ್ಟ್‌ಫೋನ್‌ನಲ್ಲಿ ಪ್ಲೇ ಸ್ಟೋರ್‌ನಿಂದ  ಎಸ್‌ಬಿಐ ಯೋನೊ (SBI YONO) ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
- ನಂತರ ID ಮತ್ತು ಪಾಸ್ವರ್ಡ್ ಅಥವಾ mPIN ಬಳಸಿ ಲಾಗಿನ್ ಮಾಡಿ.
- ನಂತರ ನೀವು ಸುಧಾರಿತ ಎಸ್‌ಬಿಐ ಎಟಿಎಂಗೆ (SBI ATM) ಹೋಗಿ ಕ್ಯೂಆರ್ ಕೋಡ್ ಆಧಾರಿತ ನಗದು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ಕ್ಲಿಕ್ ಮಾಡಿ.
- ಹಿಂಪಡೆಯಬೇಕಾದ ಹಣವನ್ನು ನಮೂದಿಸಿದ ನಂತರ, ಕ್ಯೂಆರ್ ಕೋಡ್ ಕಾಣಿಸುತ್ತದೆ.
- ಯೋನೊ ಅಪ್ಲಿಕೇಶನ್‌ನ ಮುಖಪುಟದಲ್ಲಿ ವಿತ್ ಕ್ಯೂಆರ್ ಕೋಡ್ ವಿತ್ ಡ್ರಾ (With QR Code Withdraw) ಆಯ್ಕೆಯನ್ನು ಆರಿಸಿ.
- ಅಲ್ಲಿಂದ ಎಟಿಎಂ ಯಂತ್ರದಲ್ಲಿ ನೀಡಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
- ಸ್ಕ್ಯಾನ್ ಮಾಡಿದ ನಂತರ ಪಾಪ್ ಅಪ್ ಸಂದೇಶ ಬರುತ್ತದೆ, ಅಲ್ಲಿ ಮುಂದುವರಿಕೆ ಬಟನ್ ಒತ್ತಿರಿ. ಅದರ ನಂತರ ನೀವು ಹಣ ವಿತ್ ಡ್ರಾ ಮಾಡಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News