ರೈಲ್ವೆಯಿಂದ ವಿಶೇಷ ಸೌಲಭ್ಯ! ಹಿರಿಯ ನಾಗರಿಕರಿಗೆ ಹೆಚ್ಚು ಅನುಕೂಲ

ಎಲ್ಲಾ ವಯಸ್ಸಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ಹಿರಿಯ ನಾಗರಿಕರಿಗಾಗಿ ಭಾರತೀಯ ರೈಲ್ವೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. 

Written by - Ranjitha R K | Last Updated : Nov 24, 2023, 02:13 PM IST
  • ಎಲ್ಲಾ ವಯಸ್ಸಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ.
  • ಹಿರಿಯ ನಾಗರಿಕರಿಗಾಗಿ ಭಾರತೀಯ ರೈಲ್ವೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.
  • ಲೋವರ್ ಬರ್ತ್ ಸೌಲಭ್ಯವಿದೆಯೇ?
ರೈಲ್ವೆಯಿಂದ ವಿಶೇಷ ಸೌಲಭ್ಯ! ಹಿರಿಯ ನಾಗರಿಕರಿಗೆ ಹೆಚ್ಚು ಅನುಕೂಲ  title=

ಬೆಂಗಳೂರು : ಒಂದು ನಗರದಿಂದ ಇನ್ನೊಂದು ನಗರಕ್ಕೆ ಮತ್ತು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ರೈಲಿನಲ್ಲಿ ಪ್ರಯಾಣಿಸುವುದು ತುಂಬಾ ಸುಲಭ. ರೈಲಿನಲ್ಲಿ ಪ್ರಯಾಣ ಮಾಡುವುದು ಸುರಕ್ಷಿತ ಮತ್ತು ಅಗ್ಗವಾಗಿದೆ. ಇತ್ತೀಚಿನ ದಿನಗಳಲ್ಲಿ, ಭಾರತದ ಎಲ್ಲಾ ಭಾಗಗಳಿಗೆ ರೈಲಿನಲ್ಲಿ ಸುಲಭವಾಗಿ ಪ್ರಯಾಣ ಬೆಳೆಸಬಹುದು. ಭಾರತೀಯ ರೈಲ್ವೆಯನ್ನು ದೇಶದ ಜೀವನಾಡಿ ಎಂದು ಕರೆಯಲಾಗುತ್ತದೆ. 

ಎಲ್ಲಾ ವಯಸ್ಸಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ, ಹಿರಿಯ ನಾಗರಿಕರಿಗಾಗಿ ಭಾರತೀಯ ರೈಲ್ವೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಲೇಖನದಲ್ಲಿ, ರೈಲಿನಲ್ಲಿ ಹಿರಿಯ ನಾಗರಿಕರು ಯಾವ ಸೌಲಭ್ಯಗಳನ್ನು ಪಡೆಯಬಹುದು ಎನ್ನುವುದರ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ : ಡಿಎಲ್ , ಆರ್‌ಸಿಗೆ ಡಿಜಿಟಲ್ ಸ್ಪರ್ಶ ನೀಡಲು ಮುಂದಾದ ಸಾರಿಗೆ ಇಲಾಖೆ..!!

ಯಾರು ಹಿರಿಯ ನಾಗರಿಕರು? :
ಭಾರತೀಯ ರೈಲ್ವೇಯು ಯಾವ ವ್ಯಕ್ತಿಗಳನ್ನು ಹಿರಿಯ ನಾಗರಿಕರೆಂದು ಪರಿಗಣಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, 60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು 58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಹಿರಿಯ ನಾಗರಿಕರ ವರ್ಗಕ್ಕೆ ಬರುತ್ತಾರೆ. 

ಈ ಹಿಂದೆ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವುದಕ್ಕೂ ಮುನ್ನ  ಪುರುಷ ಹಿರಿಯ ನಾಗರಿಕರಿಗೆ ಶೇಕಡಾ 40 ರಷ್ಟು ರಿಯಾಯಿತಿ ಮತ್ತು ಮಹಿಳಾ ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ದರದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗಿತ್ತು. ಮೇಲ್, ಎಕ್ಸ್‌ಪ್ರೆಸ್, ರಾಜಧಾನಿ, ಜನಶತಾಬ್ದಿ ಮುಂತಾದ ರೈಲುಗಳಲ್ಲಿ ಈ ರಿಯಾಯಿತಿಯನ್ನು ನೀಡಲಾಗಿತ್ತು. 

ಲೋವರ್ ಬರ್ತ್ ಸೌಲಭ್ಯವಿದೆಯೇ? :
ಹಿರಿಯ ನಾಗರಿಕರಿಗೆ ರೈಲುಗಳಲ್ಲಿ ಲಭ್ಯವಿರುವ ಅನೇಕ ಸೌಲಭ್ಯಗಳಲ್ಲಿ, ಲೋವೆರ್ ಬರ್ತ್ ಸೌಲಭ್ಯವು ಪ್ರಮುಖವಾಗಿದೆ. ಈ ಸೌಲಭ್ಯದ ಅಡಿಯಲ್ಲಿ, ಹಿರಿಯ ನಾಗರಿಕರು ಟಿಕೆಟ್ ಖರೀದಿಸಿದರೆ, ಆದ್ಯತೆಯ ಆಧಾರದ ಮೇಲೆ ಲೋವೆರ್ ಬರ್ತ್ ಮಾತ್ರ ನೀಡಲಾಗುತ್ತದೆ. 

ಇದನ್ನೂ ಓದಿ ಜಾಗತಿಕ ಮಾರುಕಟ್ಟೆಯಲ್ಲಿ ಇಳಿಕೆಯಾದ ಚಿನ್ನದ ಬೆಲೆ ! ಇಲ್ಲಿ ಎಷ್ಟಿದೆ ನೋಡಿ ಇಂದಿನ ದರ

ಟಿಕೆಟ್ ಫಾರ್ಮ್ ಅನ್ನು ಭರ್ತಿ ಮಾಡಿ ಹೆಸರಿನೊಂದಿಗೆ ವಯಸ್ಸನ್ನು ಬರೆದಿದ್ದರೆ, ಲೋವರ್ ಬರ್ತ್ ಅನ್ನು ಆಯ್ಕೆ ಮಾಡಬಹುದು. ಈ ರೀತಿಯಾಗಿ, ರೈಲ್ವೆಯಿಂದ ಲೋವರ್ ಬರ್ತ್ ಅನ್ನು  ನೀಡಲಾಗುತ್ತದೆ. ಈ ಸೌಲಭ್ಯವು ಪುರುಷ ಮತ್ತು ಮಹಿಳೆ ಇಬ್ಬರಿಗೂ ಲಭ್ಯವಿದೆ.

ರೋಗಿಗಳಿಗೂ ಇದೆ ಈ ಸೌಲಭ್ಯ : 
ಪ್ರತಿದಿನ ಲಕ್ಷಗಟ್ಟಲೆ ರೋಗಿಗಳು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣದ ವೇಳೆ ವಯಸ್ಸಾದವರು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ವೈದ್ಯರ ಸೌಲಭ್ಯವನ್ನು  ಪಡೆಯಬಹುದು.

ಹಿರಿಯ ನಾಗರಿಕರು ಯಾವುದೇ ಅನಾರೋಗ್ಯದಿಂದ ಬಳಲುತ್ತಿದ್ದರೆ, ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಇತರರಿಗಿಂತ ವೇಗವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಇದರ ಅಡಿಯಲ್ಲಿ ಲೋವರ್ ಬರ್ತ್ ಕೂಡಾ ಬುಕ್ ಮಾಡಬಹುದು.

ರೈಲಿನ ಗಾಲಿಕುರ್ಚಿ ಲಭ್ಯವಿದೆಯೇ?
ದೇಶದ ಪ್ರತಿಯೊಂದು ಸಣ್ಣ ಮತ್ತು ಪ್ರಮುಖ ರೈಲು ನಿಲ್ದಾಣಗಳಲ್ಲಿ ಹಿರಿಯ ನಾಗರಿಕರಿಗೆ ಗಾಲಿಕುರ್ಚಿ ಸೌಲಭ್ಯವಿದೆ. ಹಿರಿಯ ನಾಗರಿಕರಿಗೆ ನಡೆಯಲು ಸಾಧ್ಯವಾಗದಿದ್ದರೆ, ತನಗೆ ಗಾಲಿಕುರ್ಚಿ ಅಗತ್ಯವಿದೆ ಎಂದು ಸಂಬಂಧಪಟ್ಟ ಅಧಿಕಾರಿ ಅಥವಾ ಸ್ಟೇಷನ್ ಮಾಸ್ಟರ್‌ಗೆ ತಿಳಿಸಬಹುದು.

ಇದನ್ನೂ ಓದಿ : RBI ಜಾರಿಗೆ ತಂದಿದೆ 5 ಹೊಸ ನಿಯಮ ! ಬ್ಯಾಂಕುಗಳಿಗೆ ಹೆಚ್ಚುವುದು ಕಷ್ಟ ! ಗ್ರಾಹಕರು ನಿರಾಳ!

ತನಗೆ ಗಾಲಿಕುರ್ಚಿಯ ಅಗತ್ಯವಿದೆ ಎಂದು ವ್ಯಕ್ತಿಯು ಸಂಬಂಧಪಟ್ಟ ರೈಲ್ವೆ ಅಧಿಕಾರಿ ಅಥವಾ ಸ್ಟೇಷನ್ ಮಾಸ್ಟರ್‌ಗೆ ತಿಳಿಸಿದಾಗ, ರೈಲ್ವೇ ಸಿಬ್ಬಂದಿ ಗಾಲಿಕುರ್ಚಿಯೊಂದಿಗೆ ಹಾಜರಿರುತ್ತಾರೆ. ಗಾಲಿಕುರ್ಚಿಯನ್ನು ಆನ್‌ಲೈನ್‌ನಲ್ಲಿಯೂ ಬುಕ್ ಮಾಡಬಹುದು.  ಇಲ್ಲಿ ಗಾಲಿಕುರ್ಚಿ ಸಿಬ್ಬಂದಿಗೆ  ಹಣ ಪಾವತಿಸಬೇಕಾಗಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News